ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಜನರನ್ನು ಸೆಳೆಯುತ್ತಿವೆ ಬುಡಕಟ್ಟು, ಸಖಿ ಮತಗಟ್ಟೆಗಳು

|
Google Oneindia Kannada News

ಮೈಸೂರು, ಏಪ್ರಿಲ್ 17: ಮತದಾರನನ್ನು ಸೆಳೆಯಲು ಜಿಲ್ಲೆಯಲ್ಲಿ ಅಧಿಕಾರಿಗಳು ವಿವಿಧ ಕಸರತ್ತು ನಡೆಸಿದ್ದಾರೆ. ಬುಡಕಟ್ಟು ಮತದಾರರ ಮತದಾನ ಹೆಚ್ಚು ಮಾಡಲು ಸ್ವೀಪ್ ಸಮಿತಿ ಸಜ್ಜಾಗಿದ್ದು, ಮೈಸೂರು - ಕೊಡಗು ಲೋಕಸಭಾ ವ್ಯಾಪ್ತಿಗೆ ಬರುವ 11 ಕಡೆಗಳಲ್ಲಿ ಸಾಂಪ್ರದಾಯಿಕ ಬುಡಕಟ್ಟು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಹುಣಸೂರು ವಿಧಾನಸಭಾ ಕ್ಷೇತ್ರದ 9 ಕಡೆಗಳಲ್ಲಿ ಎಥ್ನಿಕ್ ಬೂತ್ ಅನ್ನು ಆರಂಭಿಸಲಾಗಿದೆ. ಬುಡಕಟ್ಟು ಜನರನ್ನು ಮತಗಟ್ಟೆಯತ್ತ ಸೆಳೆಯಲು ಜಿಲ್ಲಾಡಳಿತ ಹಾಗೂ ಸ್ವೀಪ್ ಮತ್ತು ಚುನಾವಣಾ ಆಯೋಗದಿಂದ ವಿನೂತನ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.

 ದಕ್ಷಿಣ ಕನ್ನಡದಲ್ಲಿ ಗಮನ ಸೆಳೆವ ಆಕರ್ಷಕ ಪಾರಂಪರಿಕ ಮತಗಟ್ಟೆಗಳು ದಕ್ಷಿಣ ಕನ್ನಡದಲ್ಲಿ ಗಮನ ಸೆಳೆವ ಆಕರ್ಷಕ ಪಾರಂಪರಿಕ ಮತಗಟ್ಟೆಗಳು

On the reason of lok sabha elections Tribal and Sakhi polling booths opened in Mysuru

ಹುಣಸೂರಿನ ನಾಗಾಪುರ, ಶೆಟ್ಟಹಳ್ಳಿ, ನಲ್ಲೂರು ಪಾಲ, ಎಚ್.ಡಿ.ಕೋಟೆಯ ಬಸವನಗಿರಿ ಹಾಡಿ, ಪೆಂಜಹಳ್ಳಿ ಕಾಲೋನಿ, ಬೀಮನಹಳ್ಳಿ, ಪಿರಿಯಾಪಟ್ಟಣದ ಮುತ್ತೂರು ಕಾಲೋನಿ, ಅಬ್ಬಲಾತಿ, ರಾಣಿ ಗೇಟ್ ಗ್ರಾಮಗಳ್ಳಿಯಲ್ಲಿ ವಿಶೇಷ ಮತಗಟ್ಟೆ ಸ್ಥಾಪಿಸಿದ್ದಾರೆ.

On the reason of lok sabha elections Tribal and Sakhi polling booths opened in Mysuru

ಬುಡಕಟ್ಟು ಮತದಾರನ್ನು ಸ್ವಾಗತ ಕೋರುವ ಮತಗಟ್ಟೆಗಳು ಒಣ ಹುಲ್ಲು, ಹಸಿ ಸೊಪ್ಪು ಹಾಗೂ ಕಾಡಿನಲ್ಲಿ ದೊರೆಯುವ ವಸ್ತುಗಳ ಬಳಕೆ ಮಾಡಿ ಸಿಂಗರಿಸಲಾಗಿದೆ. ಮತಗಟ್ಟೆಗೆ ಬಿದಿರು ಗುಡಿಸಲಿಗೆ ಹೆಣೆದ ತೆಂಗಿನ ಗರಿ ಹೊದಿಸಲಾಗಿದೆ. ಅದರ ಮೇಲೆ ಹುಲ್ಲು ಹೊದಿಸಿ ಆಕರ್ಷಣೀಯವಾಗಿ ನಿರ್ಮಿಸಲಾಗಿದೆ. ಮತದಾರರಿಗೆ ಅರಿವು ಮೂಡಿಸುವ ಫಲಕವನ್ನು ಮತಗಟ್ಟೆಯಲ್ಲಿ ಹಾಕಲಾಗಿದೆ. ಇಂತಹ ಮತಗಟ್ಟೆಗಳು ಬುಡಕಟ್ಟು ಮೂಲ ಸಂಸ್ಕೃತಿಯನ್ನು ಬಿಂಬಿಸುತ್ತವೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ? ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

On the reason of lok sabha elections Tribal and Sakhi polling booths opened in Mysuru

ಮಹಿಳಾ ಮತದಾರರು ಹೆಚ್ಚಿರುವ ಕಡೆ ಸಖಿ ಪೋಲಿಂಗ್ ಬೂತ್ ಸಹ ಆರಂಭವಾಗಿದೆ. ನಗರದ ತ್ಯಾಗರಾಜು ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ನಿರ್ಮಾಣವಾಗಿರುವ ಸಖಿ ಮತಗಟ್ಟೆ ಜನಾಕರ್ಷಣೀಯವಾಗಿದೆ. ಸಂಪೂರ್ಣವಾಗಿ ಮಹಿಳೆಯರೇ ಕಾರ್ಯನಿರ್ವಹಿಸುವ ಸಖಿ ಮತದಾನ ಕೇಂದ್ರ, ಮಹಿಳಾ ಮತದಾರರನ್ನು ತನ್ನತ್ತ ಸೆಳೆಯುತ್ತಿದೆ.

English summary
Lok Sabha Election 2019:On the reason of lok sabha elections sweeping committee opened Tribal and Sakhi polling booths in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X