ಕೋವಿಡ್ ಲಸಿಕೆ ಪಡೆಯಲು ಮೈಸೂರಿನ ಹಾಡಿಯ ಜನರ ಹಿಂದೇಟು
ಮೈಸೂರು, ಮೇ 27; ಮೈಸೂರು ಜಿಲ್ಲೆಯಲ್ಲಿ ಹಾಡಿಗಳಲ್ಲಿ ವಾಸಿಸುವ ಕೆಲವು ಜನರಿಗೆ ಕೋವಿಡ್ ಸೋಂಕು ತಗುಲಿದೆ. ಸೋಂಕಿನ ವಿರುದ್ಧದ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು, ಎಚ್. ಡಿ. ಕೋಟೆ, ನಂಜನಗೂಡು, ಪಿರಿಯಾಪಟ್ಟಣ ಸೇರಿ 219 ಹಾಡಿಗಳಿವೆ. ಸುಮಾರು 60 ಸಾವಿರ ಜನರು ಹಾಡಿಗಳಲ್ಲಿ ವಾಸ ಮಾಡುತ್ತಿದ್ದಾರೆ. ಎಚ್. ಡಿ. ಕೋಟೆಯೊಂದರಲ್ಲೇ 119 ಹಾಡಿ ಇದೆ.
ಎಚ್. ಡಿ. ಕೋಟೆ ತಾಲೂಕಿನಲ್ಲಿ ಹಾಡಿಗಳಲ್ಲಿ ಇರುವ ಜನರ ಪೈಕಿ ಇದುವರೆಗೂ ಮೂವರಿಗೆ ಕೋವಿಡ್ ಸೋಂಕು ತಗುಲಿದೆ. ಕೆಲವರಿಗೆ ಜ್ವರ ಬಂದಿದೆ. ಆದರೆ ಲಸಿಕೆ ಪಡೆಯಲು ಹಾಡಿಯ ಜನರು ಒಪ್ಪುತ್ತಿಲ್ಲ.

ಬುಡಕಟ್ಟು ಸಮುದಾಯದ ಮುಖ್ಯಸ್ಥ ಶೈಲೇಂದ್ರ ಈ ಕುರಿತು ಮಾತನಾಡಿದ್ದು, "ಕೋವಿಡ್ ಸೋಂಕಿನ ಲಕ್ಷಣಗಳು ಇದ್ದರೂ ಜನರು ಪರೀಕ್ಷೆಗೆ ಒಳಪಡಲು ಹಿಂಜರಿಯುತ್ತಿದ್ದಾರೆ. ಅಧಿಕಾರಿಗಳು ಜನರ ಮನವೊಲಿಸಿ ಪರೀಕ್ಷೆ, ಲಸಿಕೆ ನೀಡಬೇಕು" ಎಂದು ಹೇಳಿದ್ದಾರೆ.
ಹುಣಸೂರು ತಾಲೂಕಿನಲ್ಲಿ 52 ಹಾಡಿಗಳಲ್ಲಿ 6 ಸಾವಿರ ಜನರು ವಾಸವಾಗಿದ್ದಾರೆ. ನಾಗಾಪುರ ಮತ್ತು ಶೆಟ್ಟಿಹಳ್ಳಿ ಹಾಡಿಗಳಲ್ಲಿ ವಾಸವಾಗಿರುವ ಜನರಿಗೆ ಲಸಿಕೆಯನ್ನು ನೀಡಲಾಗಿದೆ.
ಮೇ 26ರ ವರದಿಯಂತೆ ಮೈಸೂರು ಜಿಲ್ಲೆಯಲ್ಲಿ 2792 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 134448ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 16611.












Click it and Unblock the Notifications