ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್‌ಎಸ್‌ಎಸ್‌ನವರಿಗೆ ಸಮಾಜ ಸುಧಾರಣೆಯಾಗುವುದು ಬೇಕಿಲ್ಲ: ಮೈಸೂರಿನಲ್ಲಿ ಸಿದ್ದರಾಮಯ್ಯ ಆಕ್ರೋಶ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್‌, 30: ಆರ್‌ಎಸ್‌ಎಸ್‌ನವರಿಗೆ ಈ ಸಮಾಜದಲ್ಲಿ ಸುಧಾರಣೆ ಆಗುವುದು ಬೇಡವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ದೂರಿದರು.

ನಗರದ ಕಲಾಮಂದಿರದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರ 535ನೇ ಜಯಂತ್ಯುತ್ಸವವನ್ನು ಆಯೋಜಿಸಲಾಗಿತ್ತು. ಈ ವೇಳೆ ಮೈಸೂರು ನಗರ, ಜಿಲ್ಲೆ, ತಾಲೂಕು ಸಮಿತಿ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ನವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ, ಪ್ರಾಣತ್ಯಾಗ ಮಾಡಲಿಲ್ಲ. ಆದರೂ ದೇಶಭಕ್ತರೆಂದು ಹೇಳಿಕೊಳ್ಳುತ್ತಿದ್ದಾರೆ. ಅವರಿಗೆ ಗಾಂಧಿ, ನೆಹರು, ಸರ್ದಾರ್ ವಲ್ಲಭಭಾಯ್ ಪಟೇಲ್, ಅಂಬೇಡ್ಕರ್, ವೌಲಾನ ಅಜಾದ್ ದೇಶ ಭಕ್ತರಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಆರ್‌ಎಸ್‌ಎಸ್‌ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಪಟ್ಟಭದ್ರ ಹಿತಾಸಕ್ತಿಗಳಿಗೆ ದೇಶ ಸುಧಾರಣೆಯಾಗುವುದು ಇಷ್ಟವಿಲ್ಲ. ದೌರ್ಜನ್ಯ, ಅಸಮಾನತೆ ಇರಬೇಕು ಎಂದು ಅವರು ಭಯಸುತ್ತಾರೆ. ಇದಕ್ಕಾಗಿಯೇ ಅವರು ದೇಶದಲ್ಲಿ ಕೋಮು ಸಾಮರಸ್ಯವನ್ನು ಕದಡುತ್ತಿದ್ದಾರೆ. ಮುಸ್ಲಿಂ ಸಮುದಾಯದವರನ್ನು ಬೆದರುಬೊಂಬೆಯಂತೆ ಮಾಡಿಕೊಂಡು ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ನಾನು ಕಾನೂನು ಪದವಿ ವ್ಯಾಸಂಗ ಮಾಡುವಾಗ ಎಚ್.ವಿಶ್ವನಾಥ್ ಜೊತೆಗೆ ಸೇರಿಕೊಂಡು ಕನಕದಾಸರ ಯುವ ಬಳಗ ಸ್ಥಾಪನೆ ಮಾಡಲು ಹೊರಟಿದ್ದ. ಆಗ ಅನೇಕರು ಜಾತಿ ಹೆಸರನ್ನು ಹೇಳಲು ಬರಲಿಲ್ಲ. ಕೊನೆಗೆ ಅವರವರ ಮನೆಗೆ ಹೋಗಿ ವಿಚಾರ ಹೇಳಿದಾಗ ಧೈರ್ಯಮಾಡಿ ಬಂದರು. ನಂತರ ಸಂಘಟನೆ ಮಾಡಿ ಜಾಗೃತಿ ಮೂಡಿಸಲಾಯಿತು ಎಂದರು.

Not needed social reform to RSS: Siddaramaiah outrage in Mysuru

ಸಿದ್ದರಾಮಯ್ಯ ಪರ ಘೋಷಣೆ ಕೂಗಿದ ಜನ

ಇನ್ನು ಕಾರ್ಯಕ್ರಮದಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಕೂಗು ಜೋರಾಗಿಯೇ ಕೇಳಿಬಂದಿತ್ತು. ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆಯೇ ಕಲಾಮಂದಿರದಲ್ಲಿ ಸೇರಿದ್ದ ಸಾರ್ವಜನಿಕರು ಹಾಗೂ ವೇದಿಕೆ ಮೇಲಿದ್ದ ಗಣ್ಯರು ಕೂಡ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಜೈಕಾರ ಕೂಗಿದರು. ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಆರಂಭದಲ್ಲೇ ಮುಂದಿನ ಸಿಎಂ ಸಿದ್ದರಾಮಯ್ಯ ಎನ್ನುವ ಮೂಲಕ ಭಾಷಣ ಆರಂಭಿಸಿದರು.

Not needed social reform to RSS: Siddaramaiah outrage in Mysuru

ಕರ್ಯಕ್ರಮದಲ್ಲಿ ಕಾಗಿನೆಲೆ ಮಹಾಸಂಸ್ಥಾನ ಮಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಕೆ.ಆರ್.ನಗರ ಶಾಖಾಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ.ಸುಬ್ರಹ್ಮಣ್ಯ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಮಾಜಿ ಸದಸ್ಯರಾದ ರಾಕೇಶ್ ಪಾಪಣ್ಣ, ಡಿ.ರವಿಶಂಕರ್, ಮೈಸೂರು ಜಿಲ್ಲಾಧ್ಯಕ್ಷ ಕೋಟೆ ಶಿವಪ್ಪ, ತಾಲೂಕು ಅಧ್ಯಕ್ಷ ಡಿ.ಕೆ.ಕುನ್ನೇಗೌಡ, ಎಂ.ಬಿ.ಆನಂದ್, ಶಿವಣ್ಣ, ಎಚ್.ಡಿ.ಗಣೇಶ್, ಬಸವರಾಜು, ಮಹೇಶ್, ರಾಜ್ಯ ಸಂಘದ ಹಿರಿಯ ಉಪಾಧ್ಯಕ್ಷ ರೇಖಾ ಪ್ರಿಯದರ್ಶಿನಿ, ನಿರ್ದೇಶಕರಾದ ಜೆ.ಗೋಪಿ, ಅಭಿಲಾಷ್, ನಾಗರಾಜು, ಕೆ.ವಾದೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

English summary
Former Chief Minister Siddaramaiah expressed outrage in Mysuru Not needed social reform to RSS. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X