ಮೈಸೂರು ದಸರಾ : ಈ ಬಾರಿ ಖಾಸಗಿ ದರ್ಬಾರ್ ಇಲ್ಲ

ಮೈಸೂರು, ಆ.16 : ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿದ್ದ ಖಾಸಗಿ ದರ್ಬಾರ್ ಈ ಬಾರಿ ಕಾಣಸಿಗುವುದಿಲ್ಲ. ರಾಜಮನೆತನದವರು ನಡೆಸುವ ಖಾಸಗಿ ದರ್ಬಾರ್ ಮತ್ತು ವಿಜಯದಶಮಿ ಆಚರಣೆ ಈ ಬಾರಿ ನಡೆಸುವುದಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.

ಶನಿವಾರ ಮೈಸೂರಿನ ಅರಣ್ಯಭವನದಲ್ಲಿ ದಸರಾ ಆನೆಗಳನ್ನು ಸ್ವಾಗತಿಸಿದ ನಂತರ ಮಾತನಾಡಿದ ವಿ.ಶ್ರೀನಿವಾಸ ಪ್ರಸಾದ್, 2014ರ ದಸರಾದಲ್ಲಿ ಖಾಸಗಿ ದರ್ಬಾರ್‌, ವಿಜಯ ದಶಮಿ ಆಚರಣೆ ಇರುದಿಲ್ಲ ಎಂದು ಮಹಾರಾಣೆ ಪ್ರಮೋದದೇವಿ ಸ್ಪಷ್ಟಪಡಾಸಿದ್ದಾರೆ ಎಂದು ತಿಳಿಸಿದರು. [ಅರಮನೆ ಸಂಕಷ್ಟ ನೆನೆದು ಕಣ್ಣೀರಿಟ್ಟ ಮೈಸೂರು ರಾಣಿ]

Private Durbar

ಒಡೆಯರ್ ಅವರು ವಿಧಿವಶರಾಗಿ ಒಂದು ವರ್ಷ ಪೂರ್ಣವಾಗದ ಹಿನ್ನಲೆಯಲ್ಲಿ ಅರಮನೆಯಲ್ಲಿ ಖಾಸಗಿ ದರ್ಬಾರ್‌ ಸೇರಿದಂತೆ ಯಾವುದೇ ಆಚರಣೆ ನಡೆಸುವುದಿಲ್ಲ ಎಂದು ರಾಣಿ ಪ್ರಮೋದಾ ದೇವಿ ಅವರು ಹೇಳಿದ್ದಾರೆ. ಸರ್ಕಾರ ಅವರ ಭಾವನೆಗೆ ಬೆಲೆ ನೀಡಲಿದೆ ಎಂದು ಸಚಿವರು ಹೇಳಿದರು. [ದಸರಾ ಲಾಂಛನ ಬಿಡುಗಡೆ]

ದಸರಾ ಮಹೋತ್ಸವಕ್ಕೆ ಪ್ರತಿವರ್ಷದಂತೆ ಮಹಾರಾಣಿ ಪ್ರಮೋದದೇವಿ ಅವರನ್ನು ಜಿಲ್ಲಾಡಳಿತದ ಪರವಾಗಿ ಆಹ್ವಾನಿಸುತ್ತೇವೆ. ಅರಮೆನೆಯಲ್ಲಿ ದರ್ಬಾರ್ ನಡೆಸುವುದು ಅವರ ಕುಟುಂಬಕ್ಕೆ ಸಂಬಂಧಿಸಿದ ವಿಷಯ ಅದರ ಬಗ್ಗೆ ಅವರು ತೆಗೆದುಕೊಂಡ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಮರಣದ ನಂತರ ಅವರ ಉತ್ತರಾಧಿಕಾರಿಗಳು ಖಾಸಗಿ ದರ್ಬಾರ್ ನಡೆಸಬೇಕಾಗಿತ್ತು. ಆದರೆ, ಅರಮನೆಯ ವಿವಾದಗಳು ಬಗೆಹರಿಯುವ ತನಕ ಉತ್ತರಾಧಿಕಾರಿ ನೇಮಕ ಮಾಡುವುದಿಲ್ಲ ಎಂದು ರಾಣಿ ಪ್ರಮೋದಾ ದೇವಿ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಈ ಬಾರಿಯ ಮೈಸೂರು ದಸರಾದಲ್ಲಿ ಖಾಸಗಿ ದರ್ಬಾರ್ ಇರುವುದಿಲ್ಲ.

ಸಿಎಂ ಪ್ರತಿಕ್ರಿಯೆ : ಮೈಸೂರು ದಸರಾದಲ್ಲಿ ಖಾಸಗಿ ದರ್ಬಾರ್ ಇರುವುದಿಲ್ಲ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ಕಾರ ರಾಜವಂಶದ ತೀರ್ಮಾನಕ್ಕೆ ಗೌರವ ಕೊಡಲಿದೆ. ಈ ಬಾರಿ ಮಾತ್ರ ಖಾಸಗಿ ದರ್ಬಾರ್ ಇರುವುದಿಲ್ಲ ಎಂದು ಬೆಳಗಾವಿಯಲ್ಲಿ ಶನಿವಾರ ಮಧ್ಯಾಹ್ನ ಹೇಳಿಕೆ ನೀಡಿದ್ದಾರೆ.

ಗಜಪಡೆ ಆಗಮನ : ಶನಿವಾರ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಮೊದಲ ತಂಡ ಮೈಸೂರಿಗೆ ಆಗಮಿಸಿವೆ. ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಿಂದ ಹೊರಟಿದ್ದ ಆನೆಗಳ ತಂಡವನ್ನು ಇಂದು ಅರಣ್ಯ ಭವನದ ಬಳಿ ಬರಮಾಡಿಕೊಳ್ಳಲಾಯಿತು. ಮೊದಲ ತಂಡದಲ್ಲಿ ಅರ್ಜುನ (56), ಬಲರಾಮ (58), ಅಭಿಮನ್ಯು (51), ಮೇರಿ (55), ಸರಳ (55), ಗಜೇಂದ್ರ (54) ಆನೆಗಳು ಮೈಸೂರಿಗೆ ಆಗಮಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+