ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದು ಮಾತಿಗೆ ವಿಧಾನ ಸೌಧದಲ್ಲೂ ಬೆಲೆಯಿಲ್ಲ: ಯಡಿಯೂರಪ್ಪ

ನಂಜನಗೂಡಿನಲ್ಲಿ ಬಹಿರಂಗ ಸಭೆ ನಡೆಸಿದ ಬಿಜೆಪಿ ನಾಯಕರು ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು..

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 7 : ಇನ್ನೆರಡು ದಿನ(ಏಪ್ರಿಲ್ 9)ಗಳಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಇಂದು ನಂಜನಗೂಡಿನಲ್ಲಿ ಬಹಿರಂಗ ಸಭೆ ನಡೆಸಿದ ಬಿಜೆಪಿ ನಾಯಕರು ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು..

ಬಹಿರಂಗ ಸಭೆಗೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ಬಿಜೆಪಿಯ ಘಟಾನುಘಟಿ ನಾಯಕರು ಸಭೆಯಲ್ಲಿ ಭಅಗವಹಿಸಿ ಒಗ್ಗಟ್ಟಿನ ಪ್ರದರ್ಶನ ಮಾಡಿದರು.[ಕಾಂಗ್ರೆಸ್-ಬಿಜೆಪಿ ಉಪಚುನಾವಣೆ ಅಬ್ಬರ ಪ್ರಚಾರದ ಅಸಲಿಯತ್ತು ಏನು?]

ನಿಮ್ಮ ಮಕ್ಕಳು ಮರಿಗೆ ಒಳ್ಳೆಯದಾಗುತ್ತಾ?

ನಿಮ್ಮ ಮಕ್ಕಳು ಮರಿಗೆ ಒಳ್ಳೆಯದಾಗುತ್ತಾ?

ಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದರು. ದಲಿತರು, ಹಿಂದುಳಿದ ಸಮುದಾಯದವರಿಗೆ ಸಿದ್ದರಾಮಯ್ಯ ಟೋಪಿ ಹಾಕಿದ್ದಾರೆ. ಮುಖ್ಯಮಂತ್ರಿ ದಲಿತರಿಗಾಗಿ ದುಡಿದಿದ್ದಾರೆ ಅಂತ ಸಚಿವ ಆಂಜನೇಯ ಕೋಟ್ ಹಾಕಿ ಸನ್ಮಾನ ಮಾಡಿದರು. ಆದರೆ ಸಮಾಜಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಲ್ಲಿ ಆಂಜನೇಯ ಹಣ ಹೊಡೆದಿದ್ದಾರೆ. ಈ ಕೆಲಸ ಮಾಡಿರೋ ನಿಮ್ಮ ಮಕ್ಕಳು ಮರಿಗೆ ಒಳ್ಳೆಯದಾಗುತ್ತಾ? ಎಂದು ಸಚಿವ ಆಂಜನೇಯ ವಿರುದ್ಧ ಸಹ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಬಜೆಟ್ ಮಡಿಸಿದರೆ ಮುಗಿದುಹೋಯಿತೇ?

ಬಜೆಟ್ ಮಡಿಸಿದರೆ ಮುಗಿದುಹೋಯಿತೇ?

ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸಿದ್ದರಾಮಯ್ಯ ಅವರು 12 ಬಾರಿ ಬಜೆಟ್ ಮಂಡಿಸಿದ್ದಾರೆ. ಆದರೆ ಕೇವಲ ಬಜೆಟ್ ಮಂಡಿಸಿದರೆ ಮುಗಿದುಹೋಯಿತಾ? ಕಳೆದ ನಾಲ್ಕು ವರ್ಷಗಳಲ್ಲಿ ನೀವು ಮಾಡಿದ್ದೇನು? ಮೈಸೂರು ಜಿಲ್ಲೆಗೆ ಕೊಟ್ಟ ಕೊಡುಗೆ ಏನು ಎಂದು ಪ್ರಶ್ನಿಸಿದರು.[ಯಡಿಯೂರಪ್ಪ ಸಂದರ್ಶನ: 'ನಾನು ಸಾವಿನ ಮನೆಯಲ್ಲಿ ರಾಜಕಾರಣ ಮಾಡಲ್ಲ']

ಪೊಲೀಸರೂ ಸೆಲ್ಯೂಟ್ ಹೊಡೀತಾರೆ!

ಪೊಲೀಸರೂ ಸೆಲ್ಯೂಟ್ ಹೊಡೀತಾರೆ!

ಸಾಹುಕಾರ ಚೆನ್ನಯ್ಯ ಚಾವಡಿಯಲ್ಲಿ ಕಾಂಗ್ರೆಸ್ಸಿಗರು ಹಣ ಹಂಚಿದ್ದಾರೆ. ಇಮ್ರಾನ್ ಎಂಬುವರ ಮನೆಯಲ್ಲಿ ಸಂಸದ ಧೃವನಾರಾಯಣ್ ಹಣ ಹಂಚಿದ್ದಾರೆ. ಅಕ್ರಮದಿಂದ ಚುನಾವಣೆ ಗೆಲ್ಲೋಕೆ ಸಿಎಂ ಹೊರಟಿದ್ದಾರೆ. ನಿಮ್ಮವರ ಕಾರು ಬಂದ್ರೆ ಪೊಲೀಸರು ಸೆಲ್ಯೂಟ್ ಹೊಡಿತಾರೆ. ನಮ್ಮವರು ಬಂದರೆ ಕರಪತ್ರವನ್ನೇ ಹರಿದು ಹಾಕ್ತಾರೆ ಸಂಸದೆ ಶೋಭಾ ಕರಂದ್ಲಾಜೆ ತೀವ್ರ ವಾಗ್ದಾಳಿ ನಡೆಸಿದರು.[ಸೋಲುವ ಭಯದಲ್ಲಿ ಗುಂಡ್ಲುಪೇಟೆಯಲ್ಲಿ ಯಡಿಯೂರಪ್ಪ ಠಿಕಾಣಿ: ಡಿಕೆಶಿ]

ಚುನಾವಣೆ ಗೆದ್ದು ಬರುತ್ತೇವೆ

ಚುನಾವಣೆ ಗೆದ್ದು ಬರುತ್ತೇವೆ

ಯಡಿಯೂರಪ್ಪ ಮಾತನಾಡಿ ನಾಳೆ ಸಂಜೆ ಕ್ಷೇತ್ರದಿಂದ ಹೊರಡುತ್ತೇವೆ.ಚುನಾವಣೆ ಗೆದ್ದ ಬಳಿಕ ಮತ್ತೆ ಬರುತ್ತೇವೆ.ಎಲ್ಲ ಆರು ಜಿ.ಪಂ ಕ್ಷೇತ್ರಗಳಲ್ಲಿ ವಿಜಯೋತ್ಸವ ಆಚರಣೆ ಮಾಡುತ್ತೇವೆ. ಸಿದ್ದರಾಮಯ್ಯ ಸರ್ಕಾರದ ಖಜಾನೆ ಲೂಟಿ ಮಾಡಿದ್ದಾರೆ.ಚುನಾವಣೆ ಗೆಲ್ಲೋಕೆ ಹಣ ಹಂಚುತ್ತಿದ್ದಾರೆ.ಇದನ್ನ ಮೀರಿ ನೀವು ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಬಿ ಎಸ್ ವೈ ಹೇಳಿದರು.

ಆಡಳಿತ ನಡೆಸುವ ಯೋಗ್ಯತೆ ನಿಮಗಿಲ್ಲ

ಆಡಳಿತ ನಡೆಸುವ ಯೋಗ್ಯತೆ ನಿಮಗಿಲ್ಲ

ಹಣದ ಧಿಮಾಕಿನಿಂದ,ಮದದಿಂದ ಓಡಾಡುತ್ತಿದ್ದೀರಿ.ಸಿದ್ದರಾಮಯ್ಯನವರಿಗೆ ಜನ ಪಾಠಕಲಿಸಬೇಕಿದೆ.ದಲಿತರಿಗೆ ಮೀಸಲಿಟ್ಟ ಹಣ ಖರ್ಚಾಗಿಲ್ಲ. ವಿಧಾನಸೌಧದಲ್ಲಿ ನಿಮ್ಮ ಮಾತಿಗೆ ಬೆಲೆ ಇದೆಯೇ,ಅಧಿಕಾರಿಗಳು ನಿಮ್ಮ ಮಾತು ಕೇಳುತ್ತಿದ್ದಾರಾ ಎಂದು ಯಡ್ಡಿಯೂರಪ್ಪ ಪ್ರಶ್ನಿಸಿದರು.[ಯಡ್ಡಿಯೂರಪ್ಪನವರದ್ದು ಉತ್ತರ ಕುಮಾರನ ಪೌರುಷ: ಉಗ್ರಪ್ಪ]

English summary
No one is giving is respect to c in his own party said BS Yeddyurappa today at Nanjangud. By election campaign ended today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X