ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿವಿಎಸ್ ಮೇಲೆ ತೊಟ್ಟಿಲಲ್ಲಿ ಕಂದಮ್ಮಗಳ ಪಯಣ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 30 : ತಲೆ ಇದ್ದರೆ ಎಲೆ ಮಾರಿ ತಿನ್ನಬಹುದು ಎಂಬ ಗಾದೆ ಮಾತಿದೆ. ಕಷ್ಟಕಾಲದಲ್ಲಿ ಕೆಲವೊಮ್ಮೆ ನಮ್ಮ ಸಹಾಯಕ್ಕೆ ಯಾರೂ ಇಲ್ಲ ಎಂದಾಗ ಏನಾದರೊಂದು ಪರಿಹಾರವನ್ನು ನಾವೇ ಕಂಡುಕೊಳ್ಳಲೇ ಬೇಕಾಗುತ್ತದೆ.

'Necessity is the mother of invention' (ಅವಶ್ಯಕತೆಯೇ ಆವಿಷ್ಕಾರದ ತಾಯಿ) ಎಂಬ ಮಾತು ಆಂಗ್ಲ ಭಾಷೆಯಲ್ಲಿ ಜನಜನಿತವಾಗಿದೆ. ಅವಶ್ಯಕತೆ ಬಿದ್ದಾಗ ಹೊಸತನದ ಅನ್ವೇಷಣೆ, ಆವಿಷ್ಕಾರದಲ್ಲಿ ಬೀಳುವುದೇ ಬದುಕಿನ ನಾವೀನ್ಯತೆ. ಇಂಥದೇ ಒಂದು ವಿಶಿಷ್ಟವಾದ ಘಟನೆ ಶುಕ್ರವಾರ ನಮ್ಮ ಕಣ್ಣಿಗೆ ಬಿದ್ದಿದೆ.

ಕಂದಮ್ಮನನ್ನು ದ್ವಿಚಕ್ರವಾಹನದಲ್ಲಿ ಯಾರ ಸಹಾಯವೂ ಇಲ್ಲದೆ ಕರೆದೊಯ್ಯವುದು ಅಷ್ಟು ಸುಲಭವಲ್ಲ. ಹೀಗಾಗಿ ಸವಾರರೊಬ್ಬರು ತನ್ನ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ತನ್ನ ಬಳಿಯಿರುವ ಟಿವಿಎಸ್‌ನಲ್ಲಿ ಸಹಾಯಕರಿಲ್ಲದೆ ಕರೆದೊಯ್ಯುವುದು ಕಷ್ಟಸಾಧ್ಯ.

Necessity is the mother of invention

ಆಗ ಅವರು ತಾವೇ ಒಂದು ಉಪಾಯ ಹುಡುಕಿದ್ದಾರೆ. ಮನೆಯಲ್ಲಿದ್ದ ತೊಟ್ಟಿಲನ್ನು ತನ್ನ ದ್ವಿಚಕ್ರ ವಾಹನಕ್ಕೆ ಬಲವಾಗಿ ಕಟ್ಟಿ ಅದರೊಳಗೆ ಇಬ್ಬರು ಕಂದಮ್ಮಗಳನ್ನು ಆಕಡೆ ಈಕಡೆ ವಾಲದಂತೆ ಕುಳ್ಳಿರಿಸಿ, ಸಮತೋಲನ ತಪ್ಪದಂತೆ ಬ್ಯಾಲನ್ಸ್ ಮಾಡಿಕೊಂಡು ಕರೆದೊಯ್ದಿದ್ದಾರೆ.

ನಂಜನಗೂಡಿನ ಹೆಡಿಯಾಲ ಬಳಿ ರಸ್ತೆಯಲ್ಲಿ ಸಾಗುತ್ತಿದ್ದ ಈ ಅಪರೂಪದ ದೃಶ್ಯ ಕಂಡ ಜನ ಅಚ್ಚರಿಯಿಂದ ನೋಡುತ್ತಿದ್ದರೆ, ಇದಾವುದರ ಪರಿವೆಯೂ ಇಲ್ಲದೆ ತೊಟ್ಟಿಲಲ್ಲಿದ್ದ ಮಕ್ಕಳು ಕೌತುಕದ ನೋಟ ಬೀರುತ್ತಿದ್ದವು.

English summary
Necessity is the mother of invention is an English proverb. It means difficult or impossible scenarios prompt inventions aimed at reducing the difficulty. In Nanjangud in Mysuru district a father of two children did the same thing when he had to take his children to hospital without anybodies help. Hats off to his invention. ಟಿವಿಎಸ್ ಮೇಲೆ ತೊಟ್ಟಿಲಲ್ಲಿ ಕಂದಮ್ಮಗಳ ಪಯಣ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X