ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿಗೆ ಮೋದಿ ಭೇಟಿ; ಕಾರ್ಯಕ್ರಮ ಯಶಸ್ಸಿಗೆ ಸಮಿತಿ ರಚನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 24: ವಿಶ್ವ ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸುತ್ತಿದ್ದಾರೆ. ಜೂನ್ 21ರಂದು ನಡೆಯುವ ಯೋಗ ಕಾರ್ಯಕ್ರಮ ಯಶಸ್ವಿಗೊಳಿಸಲು ಸಮಿತಿ ರಚಿಸಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ಈ ಸಮಿತಿ ಎಲ್ಲಾ ಪಕ್ಷದ ಶಾಸಕರು, ಸಂಸದರು, ಯೋಗ ತರಗತಿಗಳ ಮುಖ್ಯಸ್ಥರನ್ನು ಒಳಗೊಂಡಿರಲಿದೆ" ಎಂದರು.

ಸಂಸದ ಪ್ರತಾಪ್ ಸಿಂಹ ದೆಹಲಿಗೆ ತೆರಳಿ ಯೋಗ ದಿನದಂದು ಮೈಸೂರಿಗೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನಿಸಿದ್ದರು. ಕೇಂದ್ರ ಆಯುಷ್ ತಂಡವೂ ಏಪ್ರಿಲ್ 29ರಂದು ಮೈಸೂರಿಗೆ ಭೇಟಿ ನೀಡಿ ಅಗತ್ಯ ವ್ಯವಸ್ಥೆಗಳನ್ನು ಪರಿಶೀಲಿಸಿ ಹೋಗಿತ್ತು.

"ಜೂನ್ 21ರಂದು ನಡೆಯುವ ಯೋಗ ಕಾರ್ಯಕ್ರಮದ ಸ್ಥಳ ಇನ್ನೂ ಅಂತಿಮವಾಗಿಲ್ಲ. ಈಗಾಗಲೇ ರೇಸ್‌ ಕೋರ್ಸ್‌ ಅಥವಾ ಅರಮನೆ ಮುಂಭಾಗದಲ್ಲಿ ನಡೆಸಲು ಆಯೋಜಿಸಲಾಗುತ್ತಿದೆ. ಆದರೆ ಮೇ 30ಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮೈಸೂರಿಗೆ ಭೇಟಿ ನೀಡಲಿದ್ದು ಅವರೊಂದಿಗೆ ಕಾರ್ಯಕ್ರಮದ ಕುರಿತು ಚರ್ಚಿಸಿ ಸ್ಥಳವನ್ನು ಅಂತಿಮಗೊಳಿಸಲಾಗುವುದು" ಎಂದು ಸೋಮಶೇಖರ್ ಹೇಳಿದರು.

ವಿಶ್ವದಾದ್ಯಂತ ಯೋಗ ಪ್ರಸಾರ

ವಿಶ್ವದಾದ್ಯಂತ ಯೋಗ ಪ್ರಸಾರ

"ಮೊದಲ ಬಾರಿಗೆ ಪ್ರಧಾನಿಗಳು ಆಗಮಿಸುತ್ತಿರುವುದರಿಂದ ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ರಚನೆಯಾಗುವ ಸಮಿತಿ ಕ್ರಮವಹಿಸುತ್ತದೆ. ಈ ಕಾರ್ಯಕ್ರಮ ವಿಶ್ವದಾದ್ಯಂತ ಪ್ರಸಾರವಾಗಲಿದೆ. ಇದರಿಂದ ಸಾಂಸ್ಕೃತಿಕ ನಗರಿಯ ಖ್ಯಾತಿ ವಿಶ್ವಕ್ಕೆ ಪಸರಿಸಲಿದೆ. ಮೈಸೂರಿನ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ" ಎಂದು ಸೋಮಶೇಖರ್ ತಿಳಿಸಿದರು.

"ಬೆಂಗಳೂರು, ಮಂಡ್ಯ ಸೇರಿದಂತೆ ನಾನಾ ಜಿಲ್ಲೆಗಳ ಯೋಗ ತರಗತಿಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕತೆ ತೋರುತ್ತಿದ್ದಾರೆ. ಸ್ಥಳ ಅಂತಿಮವಾದ ಬಳಿಕ ಎಷ್ಟು ಸಂಖ್ಯೆಯಲ್ಲಿ ಯೋಗಪಟುಗಳನ್ನು ಸೇರಿಸಬಹುದು ಎಂಬುದನ್ನು ತೀರ್ಮಾನಿಸಲಾಗುವುದು" ಎಂದು ಸಚಿವರು ಹೇಳಿದರು.

ರೇಸ್‌ ಕೋರ್ಸ್‌ನಲ್ಲಿ ಆಯೋಜಿಸುವ ಸಾಧ್ಯತೆ

ರೇಸ್‌ ಕೋರ್ಸ್‌ನಲ್ಲಿ ಆಯೋಜಿಸುವ ಸಾಧ್ಯತೆ

ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯೋಗಾಸನಕ್ಕೆ ರೇಸ್ ಕೋರ್ಸ್ ಸ್ಥಳ ಸೂಕ್ತ. ಅರಮನೆ ಆವರಣದಲ್ಲಿ ಕೇವಲ 15 ಸಾವಿರ ಜನರು ಮಾತ್ರ ಪಾಲ್ಗೊಳ್ಳಬಹುದು. ರೇಸ್ ಕೋರ್ಸ್ ಮೈದಾನದಲ್ಲಿ ಒಂದೂವರೆ ಲಕ್ಷ ಜನ ಯೋಗಾಭ್ಯಾಸ ಮಾಡಬಹುದು. ಈ ಕುರಿತು ಅಧಿಕಾರಿಗಳು ಹಾಗೂ ನಾನಾ ಸಂಘಟನೆಗಳ ಮುಖಂಡರ ಜೊತೆ ಮತ್ತೊಮ್ಮೆ ಚರ್ಚಿಸಲಾಗುವುದು" ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಲಕ್ಷಾಂತರ ಜನರ ಭಾಗಿ

ಲಕ್ಷಾಂತರ ಜನರ ಭಾಗಿ

"ಒಂದು ವೇಳೆ ಕಾರ್ಯಕ್ರಮವನ್ನು ಅರಮನೆ ಮೈದಾನದಲ್ಲಿ ಆಯೋಜಿಸಿದರೆ, ಆವರಣದಲ್ಲಿ ಹೆಚ್ಚು ಜನ ಭಾಗವಹಿಸಲು ಸಾಧ್ಯವಾಗದ ಕಾರಣ ನೂಕುನುಗ್ಗಲು ಆಗುವ ಸಾಧ್ಯತೆ ಇದೆ. ಯೋಗ ದಿನಾಚರಣೆಯಲ್ಲಿ ಲಕ್ಷಾಂತರ ಜನ ಭಾಗವಹಿಸುವುದರಿಂದ ಪ್ರದರ್ಶನಕ್ಕೆ ರೇಸ್ ಕೋರ್ಸ್ ಮೈದಾನ ಸೂಕ್ತ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ವಿಶಾಲ ಪ್ರದೇಶ ಹೊಂದಿರುವ ರೇಸ್ ಕೋರ್ಸ್ ಮೈದಾನ ಸೂಕ್ತ" ಎಂದು ಪ್ರತಾಪ್ ಸಿಂಹ ತಿಳಿಸಿದರು.

ಪ್ರಧಾನಿ ಆಗಮಿಸುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮ

ಪ್ರಧಾನಿ ಆಗಮಿಸುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಪಿಎಂಸಿ ಮಾರುಕಟ್ಟೆ ಬಳಿಯ ಪುಟ್‌ಪಾತ್‌ನಲ್ಲಿ ತಲೆ ಎತ್ತಿದ್ದ ಮಳಿಗೆಗಳನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಮೋದಿ ಆಗಮಿಸುತ್ತಿರುವುದು ಖಚಿತವಾಗುತ್ತಿದ್ದಂತೆಯೇ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಮೈಸೂರು-ನಂಜನಗೂಡು ರಸ್ತೆಯ ಬಂಡೀಪಾಳ್ಯ ಬಳಿ ಕೃಷಿ ಉತ್ಪನ್ನ ಮಾರುಕಟ್ಟೆ ಎದರು ತಲೆ ಎತ್ತಿದ್ದ ಮಳಿಗೆಗಳ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ರಸ್ತೆಯ ಸ್ವಚ್ಛತೆಗೂ ಅಧಿಕಾರಿಗಳು ಮುಂದಾಗಿದ್ದಾರೆ. ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಲು ರಸ್ತೆ ಮೂಲಕ ತೆರಳುವ ಹಿನ್ನೆಲೆ ರಸ್ತೆಗಳ ದುರಸ್ಥಿ ಕಾರ್ಯ ನಡೆದಿದೆ.

English summary
Prime Minister Narendra Modi's visit to Mysuru on World Yoga Day June 21st. Government will form committee to make the yoga program a success said Mysuru district in-charge minister S. T. Somashekar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X