• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಷಕಂಠನಿಗೂ ಎದುರಾಯಿತೇ ಜಲಕಂಟಕ?

|

ಮೈಸೂರು, ಆಗಸ್ಟ್ 10: ಕಬಿನಿ ಜಲಾಶಯದಿಂದ ಈಗಾಗಲೇ 1.60 ಲಕ್ಷ ಕ್ಯೂಸೆಕ್ ನಷ್ಟು ನೀರು ನದಿಗೆ ಬಿಟ್ಟ ಪರಿಣಾಮ ನದಿ ತುಂಬಿ ಹರಿಯುತ್ತಿದ್ದು, ಅಪಾಯದ ಘಟ್ಟ ದಾಖಲಾಗಿದೆ. ಇದರಿಂದ ಮೈಸೂರಿನ ನಂಜನಗೂಡು ಅಕ್ಷರಶಃ ಜಲಾವೃತವಾಗಿದೆ. ನಗರದ ಹಳ್ಳದ ಕೇರಿ, ತೋಪಿನ ಬೀದಿ, ಗೌರಿ ಘಟ್ಟದ ಬೀದಿ, ಸರಸ್ವತಿ ಕಾಲೋನಿ, ಚಾಮಲಾಪುರ ಬೀದಿಯ ಮೇದಾರ ಬೀದಿ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಮನೆಗಳಿಗೆ ಕಪಿಲೆಯ ನೀರು ನುಗ್ಗಿದ್ದು ಸುಮಾರು 400ಕ್ಕೂ ಹೆಚ್ಚು ಜನರನ್ನು ಪ್ರವಾಹ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ನಾವು ಮಾಡಿದ ಪಾಪ ನಮ್ಮನ್ನು ಕಾಡುತ್ತಿದೆ: ಕರ್ಮ ಬಿಡುವುದೇ ನಮ್ಮನ್ನು?

ಮೈಸೂರು - ನಂಜನಗೂಡು ಹೆದ್ದಾರಿ ಮಲ್ಲನಮೂಲೆ ಮಠ ಮತ್ತು ನಂಜುಂಡೇಶ್ವರ ದೇವಾಲಯದ ಕಪಿಲಾ ಸ್ನಾನಘಟ್ಟ, ಪರಶುರಾಮ ದೇವಾಲಯದ ದಾಸೋಹ ಭವನ, ಶ್ರೀಕಂಠೇಶ್ವರ ದೇವಾಲಯದ ವಾಣಿಜ್ಯ ಸಂಕಿರ್ಣ, ಅಯ್ಯಪ್ಪ ಸ್ವಾಮಿ ದೇವಾಲಯ, ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ವಿವಿಧ ದೇವಸ್ಥಾನಗಳು ಜಲಾವೃತವಾಗಿದೆ.

ಬೆಳಗಾವಿಗೆ ನಿರ್ಮಲಾ ಸೀತಾರಾಮನ್; ಅಧಿಕಾರಿಗಳಿಂದ ಮಾಹಿತಿ ಸಂಗ್ರಹ

ಅಪಾಯದ ಮಟ್ಟ ಮೀರಿರುವ ಕಪಿಲೆಯ ಅಬ್ಬರವನ್ನು ನೋಡಲು ಪ್ರವಾಹೋಪಾದಿಯಲ್ಲಿ ಆಗಮಿಸುತ್ತಿರುವ ಜನರನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಹೆಣಗಾಡುತ್ತಿದೆ. ಇನ್ನು ಲೋಕಾರ್ಪಣೆಯಾಗದ ಕಲ್ಲಳ್ಳಿ - ಮರಳೂರು ಸೇತುವೆಯನ್ನು ತಾತ್ಕಾಲಿಕವಾಗಿ ವಾಹನ ಸಂಚಾರಕ್ಕಾಗಿ ಶುಕ್ರವಾರದಂದು ತೆರೆಯಲಾಗಿದೆ.

ನಂಜನಗೂಡು ಪ್ರವಾಹಕ್ಕೆ ತುತ್ತಾಗಿದೆ. ದೇವಾಲಯದ ಆವರಣಕ್ಕೆ ನೀರು ನುಗ್ಗಿದೆ. ವಿಷಕಂಠನಿಗೂ ಈಗ ಜಲಕಂಟಕ ಎದುರಾಗಿದೆ. ಕುಶಾಲನಗರದ ಕೆಲ ಭಾಗಗಳು ಸಹ ಪ್ರವಾಹಕ್ಕೆ ತುತ್ತಾಗಿದೆ. ಪ್ರವಾಹದ ಕಾರಣ ಅನೇಕ ಕಡೆ ರಸ್ತೆ ಸಂಚಾರಕ್ಕೆ ತೊಂದರೆಯಾಗಿದ್ದು ಮತ್ತೆ ಕೆಲವು ಕಡೆ ರಸ್ತೆಗಳು ಬಿರುಕು ಬಿಟ್ಟು ಸಂಚಾರಕ್ಕೆ ಅಪಾಯ ತಂದೊಡ್ಡಿವೆ.

ಹುಣಸೂರು ತಾಲ್ಲೂಕಿನಲ್ಲಿ ಲಕ್ಷ್ಮಣತೀರ್ಥ ನದಿಯ ಪ್ರವಾಹದಿಂದ 10 ಗ್ರಾಮಗಳ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಹನಗೋಡು ಹೋಬಳಿ ಬಹುತೇಕ ನೀರಿನಲ್ಲಿ ಮುಳುಗಡೆಯಾಗಿದ್ದು, ಕಿರಂಗೂರು, ಹನಗೋಡು, ಬಿಲ್ಲೇನಹೊಸಹಳ್ಳಿ, ಕೋಣನಹೊಸಹಳ್ಳಿ ಶಿಂಡೇನಹಳ್ಳಿ ಗ್ರಾಮಗಳಿಂದ 56 ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ಇದೀಗ ಕೋಣನಹೊಸಹಳ್ಳಿ, ನೇಗತ್ತೂರು, ಬಲ್ಲೇನಹೊಸಹಳ್ಳಿ, ಅಬ್ಬೂರು ಸಂಪೂರ್ಣ ಜಲಾವೃತಗೊಂಡಿದೆ.

ಪಿರಿಯಾಪಟ್ಟ ತಾಲ್ಲೂಕಿನ ಕುಶಾಲನಗರ ಮತ್ತು ಪಿರಿಯಾಪಟ್ಟಣ ನಡುವಿನ ಹೆದ್ದಾರಿ ಸಂಚಾರ ಬಂದ್ ಆಗಿದೆ. ಕೊಪ್ಪ, ಆವರ್ತಿ, ಮುತ್ತಿನ ಮುಳ್ಳುಸೋಗೆ, ದಿಂಡಗಾಡು, ಸೂಳೆಕೋಟೆ, ಶಾನುಭೋಗನಹಳ್ಳಿ ಮತ್ತಿತರ ಕಾವೇರಿ ತೀರದ ಪ್ರದೇಶಗಳಲ್ಲಿ ನದಿಯ ನೀರು ಜಮೀನಿಗೆ ನುಗ್ಗಿದೆ. ಕೊಪ್ಪದಿಂದ ಆವರ್ತಿಗೆ ತೆರಳುವ ರಸ್ತೆ, ಕೊಪ್ಪದಿಂದ ಗೋಲ್ಡನ್ ಟೆಂಪಲ್‌ಗೆ ತೆರಳುವ ರಸ್ತೆ ಸಂಚಾರ ಬಂದ್ ಆಗಿದೆ.

ಕಬಿನಿ ತಾರಕ ಮತ್ತು ಹೆಬ್ಬಳ್ಳ ಜಲಾಶಯಗಳಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಹಂಪಾಪುರ ಹೋಬಳಿಯಾದ್ಯಂತ ಜನರು ಆತಂಕಕ್ಕೀಡಾಗಿದ್ದಾರೆ.

ಮೈಸೂರು- ಮಾನಂದವಾಡಿ- ಎಚ್.ಡಿ.ಕೋಟೆ ಸಂಪರ್ಕ ಕಳೆದುಕೊಂಡಿರುವುದರಿಂದ ಬದಲಿ ಮಾರ್ಗವಾಗಿ ವಾಹನಗಳು ಚಲಿಸುತ್ತಿವೆ.

ನೀರಿನಿಂದ ಅನಾಹುತಕ್ಕೆ ಸಿಲುಕಿದವರ ಆರೋಗ್ಯ ರಕ್ಷಣೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲೆಯಲ್ಲಿ 13 ವೈದ್ಯರ ತಂಡ ರಚಿಸಿದೆ.

ನೆರೆ ಹಾವಳಿಯಿಂದ ಹೆಚ್.ಡಿ.ಕೋಟೆ, ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ, ನಂಜನ ಗೂಡು, ಟಿ.ನರಸೀಪುರ ತಾಲೂಕುಗಳಲ್ಲಿ ಹಲವೆಡೆ ನೀರು ನುಗ್ಗಿದ್ದು, ನೂರಾರು ಕುಟುಂಬಗಳು ಸಂತ್ರಸ್ತವಾಗಿವೆ.

English summary
Kapila River Overflows In Nanjangud. Most of the prominent temples, including the famous Srikanteshwara temple, were flooded.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X