ನಂಜನಗೂಡು ಟಿಹೆಚ್ಒ ಆತ್ಮಹತ್ಯೆ ಪ್ರಕರಣ: ಕೊನೆಗೂ ಮುಷ್ಕರ ಕೈಬಿಟ್ಟ ವೈದ್ಯರು

ಮೈಸೂರು, ಆಗಸ್ಟ್ 23: ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣದ ಮುಷ್ಕರವನ್ನು ವೈದ್ಯರು ಕೊನೆಗೂ ಕೈಬಿಟ್ಟಿದ್ದು, ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗಲು ತೀರ್ಮಾನಿಸಿದ್ದಾರೆ.

ಮೃತ ಡಾ.ನಾಗೇಂದ್ರ ಕುಟುಂಬಕ್ಕೆ ಪರಿಹಾರ ಸಿಕ್ಕಿದೆ, ಈಗಾಗಲೇ ಸಿಇಒ ವಿರುದ್ಧ ಪ್ರಕರಣ ದಾಖಲಿಸಿ ವರ್ಗಾವಣೆ ಮಾಡಲಾಗಿದ್ದು, ಹೋರಾಟದ ಸ್ವರೂಪ ಬದಲಾಗಿದೆ ಅಷ್ಟೆ. ಐಎಎಸ್ ಅಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ವೈದ್ಯ ಸಂಘದ ಮಾಜಿ ಅಧ್ಯಕ್ಷ ಡಾ. ರವೀಂದ್ರ ಹೇಳಿದರು.

ಸಾಮಾನ್ಯ ಜನರಿಗೆ ತೊಂದರೆ ಆಗಬಾರದು ಅಂತಾ ವೈದ್ಯರ ಮುಷ್ಕರವನ್ನು ವಾಪಸ್ ಪಡೆಯಲಾಗುತ್ತಿದ್ದು, ಇನ್ಮುಂದೆ ಯಾವ ವೈದ್ಯರಿಗೂ ತೊಂದರೆ ಆಗಬಾರದು ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.

Nanjanagudu THO Suicide Case: Finally Doctors Who Abandoned Strike

ಇನ್ನೊಂದೆಡೆ ವೈದ್ಯರ ಮುಷ್ಕರದಿಂದ ಮೃತ ಡಾ.ನಾಗೇಂದ್ರ ಅವರ ಕುಟುಂಬ ದೂರ ಉಳಿಯಿತು. ತಟಸ್ಥ ನಿಲುವು ತಾಳಿದ್ದರಿಂದ ವೈದ್ಯರ ಪ್ರತಿಭಟನೆ ನಾಟಕೀಯ ತಿರುವು ಪಡೆಯಿತು. ಡಾ.ನಾಗೇಂದ್ರ ಅವರ ಸಾವಿನ ನೋವಿನಲ್ಲಿ ಮುಳುಗಿರುವ ಕುಟುಂಬವು ಗಲಾಟೆ, ಪ್ರತಿಭಟನೆ, ಮುಷ್ಕರಗಳಿಗೆ ಕುಟುಂಬಸ್ಥರ ನಿರಾಸಕ್ತಿ ತೋರಿಸಿದರು.

ಮೈಸೂರಿನಲ್ಲಿ ೩ನೇ ದಿನ ವೈದ್ಯರು ಮುಷ್ಕರ ನಡೆದಿದ್ದರೂ, ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಎರಡು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.

ಟಿಎಚ್ಒ ನಾಗೇಂದ್ರ ಸಾವಿನ ದಿನ ಭಾವುಕರಾಗಿದ್ದ ಅಭಿರಾಮ್ ಜಿ.ಶಂಕರ್, ಇದೀಗ ಸಿಇಒ ಜವಾಬ್ದಾರಿಯೂ ಜಿಲ್ಲಾಧಿಕಾರಿ ಹೆಗಲ ಮೇಲಿದೆ. ಟಿಎಚ್ಒ ಆತ್ಮಹತ್ಯೆಯು ದಿಟ್ಟ ಅಧಿಕಾರಿಯನ್ನು ಕುಗ್ಗಿಸಿಬಿಟ್ಟಿದೆ. ಜಿಲ್ಲಾಧಿಕಾರಿ ಬಗ್ಗೆ ಯಾರಿಂದಲೂ ಆಕ್ಷೇಪ ಇಲ್ಲವೆನ್ನಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+