ಮೈಸೂರು ಮೃಗಾಲಯದ ಅಧಿಕಾರಿಗಳಿಂದ ಹೊಸ ದಾಖಲೆ

ಮೈಸೂರು, ಡಿಸೆಂಬರ್ 12: ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಅಧಿಕಾರಿಗಳು ಹೊಸ ಸಾಧನೆ ಮಾಡಿದ್ದಾರೆ. ವಿಶೇಷ ಲಾರಿಯಲ್ಲಿ ಜಿರಾಫೆಯನ್ನು ಅಸ್ಸಾಂ ರಾಜ್ಯದ ಗೌಹಾತಿಗೆ ಸ್ಥಳಾಂತರ ಮಾಡಿದ್ದಾರೆ. ಇಷ್ಟು ದೂರು ಜಿರಾಫೆಯನ್ನು ತೆಗೆದುಕೊಂಡು ಹೋಗಿದ್ದು, ದೇಶದಲ್ಲಿ ಇದೇ ಮೊದಲು.

ಮೈಸೂರಿನಿಂದ 3,200 ಕಿ. ಮೀ. ದೂರದ ಗೌಹಾತಿಗೆ ಜಿರಾಫೆಯನ್ನು ಕಳಿಸಲಾಗಿದೆ. ಕರ್ನಾಟಕ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ ದೇಶದಲ್ಲಿಯೇ ಜಿರಾಫೆಯನ್ನು ಹೆಚ್ಚು ದೂರಕ್ಕೆ ಸ್ಥಳಾಂತರ ಮಾಡಿದ ದಾಖಲೆ ಇದಾಗಿದೆ.

ಅಸ್ಸಾಂನಲ್ಲಿರುವ ಗೌಹಾತಿಯ ಮೃಗಾಲಯ ಮತ್ತು ಬೋಟಾನಿಕಲ್ ಗಾರ್ಡನ್‌ಗೆ ಮೈಸೂರು ಮೃಗಾಲಯದಿಂದ ಜಿರಾಫೆ ಕಳಿಸಲಾಗಿದೆ. 14 ತಿಂಗಳ 12 ಅಡಿ ಎತ್ತರದ ಗಂಡು ಜಿರಾಫೆಯನ್ನು ಗೌಹಾತಿಗೆ ವಿಶೇಷ ಲಾರಿಯಲ್ಲಿ ಕಳಿಸಲಾಗಿದೆ.

Mysuru Zoo Transported Giraffe To Guwahati

ಏಳು ರಾತ್ರಿ, ಎಂಟು ಹಗಲು ಪ್ರಯಾಣ ಮಾಡಿ ಜಿರಾಫೆ ಗೌಹಾತಿ ತಲುಪಿದೆ. ಏಳು ಸಿಬ್ಬಂದಿಗಳು, ವೈದ್ಯರಾದ ಡಾ. ರಮೇಶ್ ಜಿರಾಫೆ ಜೊತೆಗಿದ್ದು, ಅದರ ಯೋಗಕ್ಷೇಮ ನೋಡಿಕೊಂಡರು ಎಂದು ಮೃಗಾಲಯದ ಸಿಬ್ಭಂದಿಗಳು ಹೇಳಿದ್ದಾರೆ.

ಗೌಹಾತಿ ಮೃಗಾಲಯದಲ್ಲಿ ಎಂಟು ವರ್ಷಗಳಿಂದ ಯಾವುದೇ ಜಿರಾಫೆ ಇರಲಿಲ್ಲ. ಪ್ರಾಣಿ ವಿನಿಮಯ ಯೋಜನೆಯಡಿ ಜಿರಾಫೆಯನ್ನು ನೀಡಲಾಗಿದ್ದು, ಅಸ್ಸಾಂನಿಂದ ಘೆಂಡಾಮೃಗವನ್ನು ಮೈಸೂರಿನ ಮೃಗಾಲಯಕ್ಕೆ ತರಲಾಗುತ್ತಿದೆ.

ಹಿಂದೆ ಮೈಸೂರಿನಿಂದ ಲಕ್ನೋ, ಪಾಟ್ನಾಗೆ ಜಿರಾಫೆಯನ್ನು ಕಳುಹಿಸಲಾಗಿತ್ತು. ಪ್ರಾಣಿಗಳ ಸಾಗಣೆಗೆಂದೇ ಲಾರಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಪ್ರಯಾಣದ ಸಮಯದಲ್ಲಿ ಪ್ರಾಣಿಗಳಿಗೆ ಯಾವುದೇ ಒತ್ತಡ ಉಂಟಾಗದಂತೆ ಇದು ತಡೆಯುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+