ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಹಾರ ಉಳಿದರೆ ಯೋಚ್ನೆ ಬೇಡ, ಬೇಕಿದ್ದವರಿಗೆ ನೀಡುತ್ತೆ ಮೈಸೂರಿನ ಈ ತಂಡ

By Coovercolly Indresh
|
Google Oneindia Kannada News

ಮೈಸೂರು, ಮಾರ್ಚ್ 18: ಸಭೆ, ಸಮಾರಂಭಗಳಲ್ಲಿ ಆಹಾರ ಮಿಕ್ಕುವುದು ಸಹಜ. ಹೀಗೆ ಮಿಕ್ಕಿದ ಆಹಾರವನ್ನು ಏನೂ ಮಾಡಲು ಆಗದೇ ಕೊನೆಗೆ ಚೆಲ್ಲಬೇಕಾಗುತ್ತದೆ. ಮೈಸೂರಿನ ಈ ಯುವಕರ ತಂಡ ಈ ರೀತಿ ಮಿಕ್ಕ ಆಹಾರವನ್ನೇ ಅಗತ್ಯವಿದ್ದವರಿಗೆ ತಲುಪಿಸುವ ಕೆಲಸ ಮಾಡುತ್ತಿದೆ.

ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆಯ ಸಂಸ್ಥಾಪಕರಾದ ಎಂ.ಕುಮಾರ್ ಹಾಗೂ ಕೃಷ್ಣ, ಶಿವು, ಶಂಕರ್, ಚಂದನ್ ಸ್ನೇಹಿತರು ಸೇರಿ ಕಳೆದ 3 ವರ್ಷಗಳಿಂದ ಸಭೆ, ಸಮಾರಂಭ, ಮದುವೆಗಳಲ್ಲಿ ಉಳಿದ ಆಹಾರವನ್ನು ಸಂಗ್ರಹಿಸಿ ಮೈಸೂರು ಸುತ್ತಲೂ ಇರುವ ಸುಮಾರು 150 ರಿಂದ 200 ಬಡವರಿಗೆ ಪ್ರತಿ ದಿನ ಆಹಾರವನ್ನು ಹಂಚುತ್ತಾ ಮಾನವೀಯತೆ ಮೆರೆಯುತ್ತಿದ್ದಾರೆ.

"ಅಗತ್ಯವಿದ್ದವರಿಗೆ ಆಹಾರ ತಲುಪಿಸಿ"

"ಸುಮ್ಮನೆ ವ್ಯರ್ಥವಾಗುವ ಆಹಾರವನ್ನು ಬಡವರಿಗೆ, ಅಗತ್ಯವಿದ್ದವರಿಗೆ ತಲುಪಿಸಿ ಹಸಿದವರಿಗೆ ಅನ್ನ ನೀಡುವುದು ನಮ್ಮ ಉದ್ದೇಶ. ನಿಮ್ಮಲ್ಲಿ ಯಾವುದೇ ರೀತಿಯ ಆಹಾರ ಉಳಿದಿದ್ದರೆ ದಯವಿಟ್ಟು ಚೆಲ್ಲಬೇಡಿ. ನಮಗೆ ಕರೆ ಮಾಡಿ, ನಾವೇ ಬಂದು ಆಹಾರ ಸಂಗ್ರಹಿಸಿ ಕೊಂಡೊಯ್ಯುತ್ತೇವೆ" ಎನ್ನುತ್ತಾರೆ ಸೇನೆಯ ಅಧ್ಯಕ್ಷ ಎಂ ಕುಮಾರ್‌.

ಹವಾಮಾನ ವೈಪರಿತ್ಯದಿಂದ ಆಹಾರದ ಕೊರತೆ: ಒಂದನ್ನೊಂದು ಕೊಂದು ತಿನ್ನುತ್ತಿವೆ ಹಿಮಕರಡಿಗಳುಹವಾಮಾನ ವೈಪರಿತ್ಯದಿಂದ ಆಹಾರದ ಕೊರತೆ: ಒಂದನ್ನೊಂದು ಕೊಂದು ತಿನ್ನುತ್ತಿವೆ ಹಿಮಕರಡಿಗಳು

 ಬಿಡುವಿನ ವೇಳೆಯಲ್ಲಿ ಈ ಕೆಲಸ

ಬಿಡುವಿನ ವೇಳೆಯಲ್ಲಿ ಈ ಕೆಲಸ

ವ್ಯರ್ಥ ಮಾಡುವ ಆಹಾರದಿಂದಾಗಿಯೇ ನಿತ್ಯ ನೂರಾರು ಬಡವರ ಹೊಟ್ಟೆ ತುಂಬಿಸುತ್ತಿದೆ ಈ ತಂಡ. ಇವರ ಬಳಿ ಆಹಾರ ಕೊಂಡೊಯ್ಯಲು ಪಾತ್ರೆಗಳು, ಆಟೋರಿಕ್ಷಾ ಎಲ್ಲವೂ ಇದೆ. ಬಿಡುವಿನ ವೇಳೆಯಲ್ಲಿ ಯುವಕರ ತಂಡವು ಸರದಿಯ ಪ್ರಕಾರ ಆಹಾರ ವಸ್ತುಗಳನ್ನು ಸಂಗ್ರಹಿಸಿ ಅದನ್ನು ಕೊಳೆಗೇರಿಗಳ ಬಡವರಿಗೆ ನೀಡಿ ಹಸಿವು ನೀಗಿಸುವ ಕೆಲಸ ಮಾಡುತ್ತಿದೆ.

 ವೃದ್ಧರಿಗೆ, ಅಂಗವಿಕಲರಿಗೆ ನೆರವು

ವೃದ್ಧರಿಗೆ, ಅಂಗವಿಕಲರಿಗೆ ನೆರವು

ಹಸಿದವನಿಗೆ ಮಾತ್ರ ಗೊತ್ತು ಅನ್ನದ ಬೆಲೆ. ದುಡಿಯಲಾಗದ ವಯೋವೃದ್ಧರು, ಅಂಗವಿಕಲರು, ಒಂದೊಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವವರಿಗೆ ಈ ತಂಡದ ಕೆಲಸ ಸಹಾಯ ಮಾಡುತ್ತಿದೆ. ಅವರ ಕಷ್ಟವನ್ನು ಅಲ್ಪವಾದರೂ ನೀಗಿಸಿದ ತೃಪ್ತಿ ನಮ್ಮದು ಎನ್ನುತ್ತಾರೆ ಈ ತಂಡದ ಕುಮಾರ್.‌

 ಮಕ್ಕಳಿಗೆ ಯೂನಿಫಾರ್ಮ್, ಕಂಪ್ಯೂಟರ್ ವಿತರಣೆ

ಮಕ್ಕಳಿಗೆ ಯೂನಿಫಾರ್ಮ್, ಕಂಪ್ಯೂಟರ್ ವಿತರಣೆ

ಈ ಯುವಕರ ತಂಡವು ಆಹಾರ ಪದಾರ್ಥಗಳನ್ನಷ್ಟೇ ಅಲ್ಲ, ಸಮರ್ಪಣೆ ಸೇವಾ ಟ್ರಸ್ಟ್‌ ಎಂಬ ಟ್ರಸ್ಟ್ ರಚನೆ ಮಾಡಿಕೊಂಡು ಅಂಗನವಾಡಿ, ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಯೂನಿಫಾರ್ಮ್, ಪುಸ್ತಕಗಳು, ಶಾಲೆಗಳಿಗೆ ಕಂಪ್ಯೂಟರ್‌ ಗಳು, ಕಂಪ್ಯೂಟರ್‌ ಟೇಬಲ್‌ ಗಳು, ಬೆಂಚು ಡೆಸ್ಕುಗಳನ್ನೂ ವಿತರಿಸುತ್ತಿದೆ. ಈ ಎಲ್ಲವನ್ನೂ ಟ್ರಸ್ಟ್‌ ಕೆಲಸ ನೋಡಿ ದಾನಿಗಳು ನೀಡುತ್ತಿದ್ದು, ನಮ್ಮದು ಬರೇ ಅರ್ಹರಿಗೆ ವಿತರಿಸುವ ಕೆಲಸವಷ್ಟೇ ಎನ್ನುತ್ತಾರೆ ಕುಮಾರ್‌. ಈ ತಂಡದ ಸಂಪರ್ಕಕ್ಕೆ: 8197804473.

English summary
A youth team in mysuru distributing food which was wasted in any functions to poor and most needed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X