ಮಂಡ್ಯ ಪೊಲೀಸರ ಕೈಗೆ ಸಿಕ್ಕಿಬಿದ್ದ ರಾಜೀವ್ ಗಾಂಧಿ
ಮೈಸೂರು, ಡಿಸೆಂಬರ್, 14: ಪ್ರಯಾಣಿಕರು ತುಂಬಿರುವ ಬಸ್ ಗಳೇ ಇವರ ಟಾರ್ಗೆಟ್, ಜಾತ್ರೆಗಳೇ ಇವರ ಕೈ ಚಳಕ ತೋರಿಸುವ ಜಾಗ, ಈ ಜೋಡಿಗೆ ಆಭರಣ, ಹಣ ಎಗರಿಸಲು ಮಹಿಳೆ-ಪುರುಷ ಎಂಬ ತಾರತಮ್ಯವಿಲ್ಲ.
ಒಂದೇ ಒಂದು ಸುಳಿವು ನೀಡದೇ ಚಿನ್ನಾಭರಣ ಮತ್ತು ಹಣ ದೋಚುತ್ತಿದ್ದ ಆರೋಪಿಗಳಿಬ್ಬರು ಮಂಡ್ಯ ಗ್ರಾಮಾಂತರ ಠಾಣೆಯ ಅಪರಾಧ ಪತ್ತೆದಳದ ಪೊಲೀಸರ ಬಲೆಗೆ ಬಿದ್ದಿದ್ದಾರೆ.[ಬೆಂಗಳೂರು ಯುವತಿ ಕೈಗೆ ಸಿಕ್ಕಿಬಿದ್ದ ದಾವೂದ್]

ಶ್ರೀರಂಗಪಟ್ಟಣ ತಾಲೂಕು ಗೆಂಡೆಹೊಸಹಳ್ಳಿ ಗ್ರಾಮದ ಜ್ಯೋತಿ, ಮಳವಳ್ಳಿ ತಾಲೂಕು ಗೂಳಘಟ್ಟ ಗ್ರಾಮದ ಗಿರೀಶ ಎಂಬುವರನ್ನು ಬಂಧಿಸಿ ಅಪಾರ ಪ್ರಮಾಣದ ಚಿನ್ನಾಭರಣ ವಶ ಪಡಿಸಿಕೊಳ್ಳಲಾಗಿದೆ. ಕಳ್ಳತನದ ಮಾಸ್ಟರ್ ಮೈಂಡ್ ರಾಜಸ್ಥಾನ ಮೂಲದ [ಬೆಂಗಳೂರಿನ ಗೊಟ್ಟಿಗೆರೆ ವಾಸಿ]ರಾಜು ಉರುಫ್ ರಾಜೀವ್ ಗಾಂಧಿ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.[ಮೈಸೂರಿಗರೇ,, ನೀವು ಹುಡುಕುತ್ತಿದ್ದ ದಂಪತಿ ಇವರೇನಾ..?]
ಎಲ್ಲೆಲ್ಲಿ ಕೈಚಳಕ ತೋರಿಸುತ್ತಿದ್ದರು?
ಆರೋಪಿಗಳು ಮಂಡ್ಯ, ಶಿವಳ್ಳಿ, ಹಾಸ ಜಿಲ್ಲೆಯ ಬೇಲೂರು ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಸ್ ನಿಲ್ದಾಣ, ಬಸ್ ಗಳು, ಜಾತ್ರೆಗಳಲ್ಲಿ ಮಹಿಳೆಯರಿಂದ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದರು. ಈಗಾಗಲೇ ಶಿವಳ್ಳಿ ಹಾಗೂ ಮಂಡ್ಯ ಪಶ್ಚಿಮ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪ್ರಕರಣವೂ ದಾಖಲಾಗಿತ್ತು. ಈ ಖತರ್ನಾಕ್ ಕಳ್ಳರ ಪತ್ತೆಗಾಗಿ ಗ್ರಾಮಾಂತರ ವೃತ್ತ ನಿರೀಕ್ಷಕ ಲೋಕೇಶ್ ಅವರ ನೇತೃತ್ವದಲ್ಲಿ ತಂಡ ರಚಿಸಿ ಶೋಧ ಕಾರ್ಯ ಆರಂಭವಾಗಿತ್ತು.
ಆರೋಪಿಗಳ ಸುಳಿವು ದೊರೆತಿದ್ದರಿಂದ ತನಿಖಾ ತಂಡ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳಿಂದ 7.20 ಲಕ್ಷ ರೂ. ಮೌಲ್ಯದ 276.7 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಪಿಎಸ್‍ಐ ಭವಿತಾ, ಸಿಬ್ಬಂದಿ ಚಿಕ್ಕಯ್ಯ, ಮಹೇಶ್ ಕುಮಾರ್, ಅನಿಲ್ ಕುಮಾರ್, ಉಮರ್ ಅಹ್ಮದ್, ಕರಿಗಿರಿಗೌಡ, ಶ್ರೀರಾಮ, ಉಮೇಶ, ಆಂತೋಣಿ, ಚಾಲಕ ಪುಟ್ಟರಾಜು ಭಾಗವಹಿಸಿದ್ದರು.












Click it and Unblock the Notifications