ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣಾ ಅಕ್ರಮ ತಡೆಗಟ್ಟಲು ರವಿ ಚನ್ನಣ್ಣರವರ್ ಹೊಸ ಉಪಾಯ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಫೆಬ್ರವರಿ 6 : ಮುಂಬರುವ ವಿಧಾನಸಭಾ ಚುನಾವಣೆ ವೇಳೆ ನಡೆಯುವ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ಫೆ.20 ರಿಂದಲೇ ಜಿಲ್ಲೆಯಾದ್ಯಂತ ಇರುವ ಚೆಕ್‍ಪೋಸ್ಟ್ ಗಳಲ್ಲಿ ವಾಹನ ತಪಾಸಣಾ ಕಾರ್ಯ ಆರಂಭಿಸಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಬ್ಯಾಂಕ್ ಗಳ ಅಧಿಕಾರಿಗಳ ಸಭೆ ನಡೆಸಿದ ಅವರು, ಈ ಮಾಹಿತಿಯನ್ನು ತಿಳಿಸಿದರಲ್ಲದೆ, ಬ್ಯಾಂಕುಗಳ ಅಧಿಕಾರಿಗಳು ಇತರೆ ಶಾಖೆಗಳಿಗೆ ಹಣ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪತ್ರ: ಕರ್ನಾಟಕ ಕಂಡ ದಕ್ಷ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ಪತ್ರ: ಕರ್ನಾಟಕ ಕಂಡ ದಕ್ಷ ಅಧಿಕಾರಿ ರವಿ ಡಿ. ಚೆನ್ನಣ್ಣನವರ್

ವಿಧಾನಸಭೆ ಚುನಾವಣೆ ದಿನಾಂಕ ಯಾವ ಕ್ಷಣದಲ್ಲಾದರೂ ಘೋಷಣೆಯಾಗುವ ಹಿನ್ನೆಲೆಯಲ್ಲಿ, ಮೈಸೂರು ಜಿಲ್ಲಾಡಳಿತ, ಚುನಾವಣಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಅಕ್ರಮಗಳನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲು ಈಗಾಗಲೇ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

Mysuru SP Ravi D Channannavar will introduce a new plan to conduct fair elections

ಬ್ಯಾಂಕ್ ಅಧಿಕಾರಿಗಳು ಯಾವುದೇ, ಯಾರದ್ದೇ ಒತ್ತಡಗಳಿಗೆ ಮಣಿದು ಯಾವುದೇ ದಾಖಲೆ ಇಲ್ಲದೆ, ಬ್ಯಾಂಕ್ ಹಣವೆಂದು ಸಾಗಾಣಿಕೆ ಮಾಡುವ ಪ್ರಯತ್ನ ಮಾಡಬಾರದು. ನೀವು ಸಾಗಿಸುವ ಹಣ ಕಾನೂನು ಬದ್ಧವಾಗಿದ್ದರೆ, ಅದಕ್ಕೆ ಪೊಲೀಸರ ರಕ್ಷಣೆ ಇರುತ್ತದೆ, ಕಾನೂನು ಬದ್ಧವಲ್ಲದಿದ್ದರೆ ಯಾವುದೇ ಮುಲಾಜಿ ಲ್ಲದೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ನಕ್ಸಲ್ ನಿಗ್ರಹಕ್ಕೆ ಕೂಂಬಿಂಗ್ :
ಕೊಡಗಿನಲ್ಲಿ ನಕ್ಸಲರ ಚಲನವಲನದ ಬಗ್ಗೆ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಭಾಗದಲ್ಲಿಯೂ ನಕ್ಸಲ್ ನಿಗ್ರಹ ದಳ(ಎಎನ್ ಎಫ್) ಪೊಲೀಸರು ಕೂಬಿಂಗ್(ಶೋಧ ಕಾರ್ಯ) ನಡೆಸಲು ಸಜ್ಜಾಗಿದ್ದಾರೆ. ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಯಲ್ಲಿ ಎಎನ್ ಎಫ್ ಠಾಣೆ ಇದೆ. ವೃತ್ತ ನಿರೀಕ್ಷಕ, ಇಬ್ಬರು ಪಿಎಸ್ ಐ ಸೇರಿ 24 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೀಚನಹಳ್ಳಿ ಅರಣ್ಯದಲ್ಲಿಯೂ ನಕ್ಸಲರಿಗಾಗಿ ಶೋಧ ನಡೆಯಲಿದೆ ಎಸ್ಪಿ ರವಿ ಡಿ.ಚನ್ನಣ್ಣನವರ್ ತಿಳಿಸಿದ್ದಾರೆ.

English summary
Mysuru SP Ravi D Channannavar has decided to check vehicles in checkposts in all over Mysuru from now. To avoid illegalities in Karnataka assembly elections 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X