ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ:ಯುವತಿ ಪ್ರಾಣಾಪಾಯದಿಂದ ಪಾರು

ಮೈಸೂರು, ಮೇ 9: ಕಳೆದ ರಾತ್ರಿ (ಮೇ.08) ಮೈಸೂರಿನ ಲಿಂಗಾಂಬುದಿ ಪಾಳ್ಯದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ತನಿಖೆ ನಡೆಸುತ್ತಿದ್ದು, ಎಸ್ಪಿ ಅಮಿತ್ ಸಿಂಗ್ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಮೈಸೂರಿನ ಹೊರವಲಯದಲ್ಲಿ ಮಹಿಳೆ ಮೇಲೆ ಅತ್ಯಾಚಾರವಾಗಿರುವ ಪ್ರಕರಣ ದಾಖಲಾಗಿದೆ. ಈ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಎಎಸ್ಪಿ ನೇತೃತ್ವದಲ್ಲಿ 8 ತಂಡಗಳನ್ನು ರಚನೆ ಮಾಡಿ ಆರೋಪಿಗಳಿಗೆ ಬಲೆ ಬೀಸಿದ್ದೇವೆ. ಕೃತ್ಯದ ವೇಳೆ ಮೂರರಿಂದ - ನಾಲ್ಕು ಮಂದಿ ಇದ್ದರು ಎಂದು ಹೇಳಿಕೆಯಿಂದ ತಿಳಿದು ಬಂದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದೇವೆ ಎಂದರು.

ಇನ್ನು ಯುವಕ-ಯುವತಿ ಪರಿಚಿತರಿಗೆ ಹಣ ಕೊಡಲು ತೆರಳಿದ್ದ ವೇಳೆ ಮೂತ್ರ ವಿಸರ್ಜನೆಗೆಂದು ಯುವಕ ಬೈಕ್ ನಿಲ್ಲಿಸಿದ್ದ.ಇದೇ ವೇಳೆ ಆತನ ಮೇಲೆ ಹಲ್ಲೆ ನಡೆದಿದ್ದು, ಅದೇ ಸಮಯದಲ್ಲಿ ಆತನ ಜೊತೆಯಲ್ಲಿದ್ದ ಯುವತಿಯ ಮೇಲೂ ಅತ್ಯಾಚಾರ ನಡೆದಿದೆ. ಇತ್ತ ಅತ್ಯಾಚಾರಕ್ಕೆ ಒಳಗಾದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

Mysuru SP Amith singh given details about yesterday gang rape incident

ಯುವಕನ ಕಾಲಿನ‌ ಮೇಲೆ ಕಲ್ಲನ್ನು ಎತ್ತಿ ಹಾಕಿದ್ದು, ಹಣೆ ಭಾಗದಲ್ಲಿ ಗಾಯವಾಗಿದೆ ಎಂದು ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+