ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ರಾಜು ಹತ್ಯೆ ಆರೋಪಿಗೆ 6 ತಿಂಗಳು ಗಡಿಪಾರು ಶಿಕ್ಷೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 16: ಆರ್.ಎಸ್.ಎಸ್-ಬಿಜೆಪಿ ಮುಖಂಡ ರಾಜು ಹತ್ಯೆ ಪ್ರಕರಣದ ಆರೋಪಿ ಹಬೀಬ್ ಪಾಷಾ ನನ್ನು ಗಡಿಪಾರು ಮಾಡುವಂತೆ ಆದೇಶಿಸಲಾಗಿದೆ. ಮುಂದಿನ 6 ತಿಂಗಳ ಕಾಲ ಮೈಸೂರು, ಮಂಡ್ಯ, ಹುಣಸೂರು, ಮಂಗಳೂರು ಹಾಗೂ ಚಾಮರಾಜನಗರಕ್ಕೆ ಅವರು ಪ್ರವೇಶಿಸದಂತೆ ಆದೇಶಿಸಲಾಗಿದೆ ಎಂದು ಮೈಸೂರಿನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ವಿಷ್ಣುವರ್ಧನ್ ಆದೇಶಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

2016ರ ಮಾರ್ಚ್ 13ರಂದು ರಾಜು ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಹುಣಸೂರಿನ ಹಬೀಬ್ ಪಾಷಾನನ್ನು ಬಂಧಿಸಲಾಗಿತ್ತಾದರೂ ಕೆಲ ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಗೊಂಡಿದ್ದರು.

ಕೊಲೆ ಆರೋಪಿಗೆ ಜಾಮೀನು ಸಿಕ್ಕ ದಿನ, ಸೆಲ್ಫಿಗೆ ಮುಗಿಬಿದ್ದ ಜನ!ಕೊಲೆ ಆರೋಪಿಗೆ ಜಾಮೀನು ಸಿಕ್ಕ ದಿನ, ಸೆಲ್ಫಿಗೆ ಮುಗಿಬಿದ್ದ ಜನ!

Mysuru: Raju murder prime accused expelled for 6 months

ಆತನ ವಿರುದ್ಧ 8 ಕೊಲೆ ಆರೋಪಗಳಿದ್ದರೂ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಲ್ಲದೆ, ಬಿಡುಗಡೆಗೊಂಡ ಆತನಿಗೆ ಜನರಿಂದ ಅದ್ಧೂರಿ ಸ್ವಾಗತ ದೊರೆತಿತ್ತು. ಆದರೆ ಆತನಿಂದ ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಕಾರಣಕ್ಕೆ ಮಾ.15 ರಂದು ಆತನನ್ನು ಗಡಿಪಾರು ಮಾಡಲಾಗಿದೆ.

English summary
Mysuru law and order DCP Vishnuvardhan announced that, RSS and BJP worker Raju murder's prime accused Habeeb Pasha will be expelled from Mysuru, Mandya, Hunsur, Mangaluru and Chamarajanagar district for 6 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X