ಎನ್ ಆರ್ ಐಗಳು ಕೃಷಿ ಭೂಮಿ ನುಂಗ್ತಾರೆ, ಹುಷಾರ್!
ಮೈಸೂರು, ಜು. 03: ಭಾರತದಲ್ಲಿ ಏನೂ ಬೇಕಾದರೂ ಮಾಡಬಹುದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ದೇಶದ ಪ್ರಜೆ ಅಲ್ಲದವರು ನಕಲಿ ಆರ್ ಟಿಸಿ, ಆಧಾರ್ ಕಾರ್ಡ್ ಎಲ್ಲವನ್ನು ಪಡೆದುಕೊಂಡು ಜಮೀನು ಖರೀದಿ ಮಾಡುತ್ತಾರೆ. ಅದು ನಮ್ಮ ರಾಜ್ಯದಲ್ಲಿಯೇ!
ನಕಲಿ ದಾಖಲೆ ಸೃಷ್ಟಿ ಮಾಡಿ ಮೈಸೂರಿನ ಹೊರವಲಯದ ರಮ್ಮನಹಳ್ಳೀ ಬಳಿ ಭೂಮಿ ಖರೀದಿ ಮಾಡಿದ್ದ ಎನ್ ಆರ್ ಐ ಒಬ್ಬರನ್ನು ಮೈಸೂರು ನಜರ್ ಬಾದ್ ಪೊಲೀಸರು ಬಂಧಿಸಿದ್ದಾರೆ.[ಕಳೆದ 59 ವರ್ಷಗಳಿಂದ ಇಲ್ಲಿ 'ಕಾಂಗ್ರೆಸ್' ನದ್ದೇ ಆಡಳಿತ!]

ಅಮೆರಿಕ ನಿವಾಸಿ ತಿಮೋತಿ ಜಾನ್ ಎಂಬುವರನ್ನು ಬಂಧಿಸಲಾಗಿದೆ. ರಮ್ಮನಹಳ್ಳಿ ಬಳಿ ಸುಮಾರಿ 2 ಕೋಟಿ ಮೌಲ್ಯದ ಜಮೀನು ಖರೀದಿ ಮಾಡಿದ್ದರು. ಅಲ್ಲದೇ ನಕಲಿ ಆಧಾರ್ ಕಾರ್ಡ್ ಸಹ ಹಾಜರುಪಡಿಸಿದ್ದರು.
ನಕಲಿ ದಾಖಲೆ ಸೃಷ್ಟಿಗೆ ಸಹಕಾರ ನೀಡಿದ ಆರೋಪದಲ್ಲಿ ಕಂದಾಯ ನಿರೀಕ್ಷಕರನ್ನು ಅವರನ್ನು ಅಮಾನತು ಮಾಡಲಾಗಿದೆ. ಆರ್ ಟಿಐ ಕಾರ್ಯಕರ್ತ ನಾಗೇಂದ್ರ ಮಾಹಿತಿ ಹಕ್ಕು ಕಾಯ್ದೆಯಡಿ ವಿವರಗಳನ್ನು ಪಡೆದುಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ.
ಜಮೀನು ಖರೀದಿ ಮಾಡಲು ಆಗಮಿಸಿದ ಜಾನ್ ಅಮೆರಿಕದ ಪ್ರಜೆಯಾಗಿದ್ದರಿಂದ ಅದು ಸಾಧ್ಯವಿಲ್ಲ ಎಂದು ಮನಗಂಡರು. ನಂತರ ಕಂದಾಯ ಇಲಾಖೆ ಅಧಿಕಾರಿಗಳ ನೆರವು ಪಡೆದುಕೊಂಡು ನಕಲಿ ಸೃಷ್ಟಿ ಮಾಡಿಕೊಂಡಿದ್ದಾರೆ. ಶ್ರೀರಂಗಪಟ್ಟಣ ಕಂದಾಯ ಇಲಾಖೆ ಕಚೇರಿಗೆ ನಕಲಿ ಆರ್ ಟಿಸಿಯನ್ನು ಸಲ್ಲಿಕೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೈಸೂರಿನಲ್ಲಿ ಹುಟ್ಟಿದ್ದ ತಿಮೋತಿ ಜಾನ್ ಅಮೆರಿಕದಲ್ಲಿ ವಾಸವಿದ್ದ. ಆದರೆ ಭಾರತದಲ್ಲಿ ಕೃಷಿ ಜಮೀನು ಕೊಳ್ಳಲು ಮುಂದಾಗಿದ್ದ.











Click it and Unblock the Notifications