• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಸ್ಕ್‌ ಧರಿಸದ್ದಕ್ಕೆ ಮೈಸೂರು ನಗರ ಪಾಲಿಕೆಯಿಂದ ಬಿತ್ತು ಇಷ್ಟು ದಂಡ

By ಮೈಸೂರು ಪ್ರತಿನಿಧಿ
|

ಮೈಸೂರು, ಮೇ 01: ಮೈಸೂರಿನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಕಡಿಮೆಯಾಗುತ್ತಿವೆ. ಹಾಗೆಂದ ಮಾತ್ರಕ್ಕೆ ಒಂದಿಷ್ಟು ನಿರ್ಲಕ್ಷ್ಯ ಮಾಡಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗೇ ಮುಂಜಾಗ್ರತಾ ಕ್ರಮವಾಗಿ ಮಾಸ್ಕ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸದೇ ಓಡಾಡಿದರೆ ದಂಡ ವಿಧಿಸಲಾಗುವುದು ಎಂದೂ ತಿಳಿಸಲಾಗಿದೆ.

   ವಿಜಯಪುರದ ಈ ಹೂವು ಬೆಳೆಗಾರನ ಕೂಗ ಸರ್ಕಾರಕ್ಕೆ ಕೇಳ್ತಾ ಇಲ್ಲವೇ | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಆದರೂ ಜನರು ಮಾಸ್ಕ್‌ ಧರಿಸದೇ ಓಡಾಡಿದ್ದಾರೆ. ಹೀಗೆ ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಂದ ಮೈಸೂರು ನಗರ ಪಾಲಿಕೆ ಅಧಿಕಾರಿಗಳ ತಂಡವು 16,700 ರೂಪಾಯಿ ದಂಡವನ್ನು ಸಂಗ್ರಹಿಸಿದೆ.

   ಬೆಂಗಳೂರಲ್ಲಿ ಮಾಸ್ಕ್ ಹಾಕಿಕೊಳ್ಳೋದು ಕಡ್ಡಾಯ; ತಪ್ಪಿದರೆ ದಂಡ

   ಪಾಲಿಕೆಯ 18 ಮಂದಿ ಅಧಿಕಾರಿಗಳು, ಪೊಲೀಸ್ ಇಲಾಖೆಯಿಂದ 18 ಮಂದಿ, ಪಾಲಿಕೆಯ 30 ಮಂದಿ ಆರೋಗ್ಯ ನಿರೀಕ್ಷಕರು, 18 ಮಂದಿ ಪರಿಸರ ಎಂಜಿನಿಯರ್ ಗಳು ಇರುವ ತಂಡವು ಮಾಸ್ಕ್‌ ಧರಿಸದೇ ಇದ್ದವರಿಗೆ ದಂಡ ಹಾಕುತ್ತಿದೆ. ದಂಡ ವಸೂಲಿ ಮಾಡಿ ರಶೀದಿ ಕೊಡಲಾಗುತ್ತಿದೆ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್ ತಿಳಿಸಿದ್ದಾರೆ.

   ಪಾಲಿಕೆಯ ವಲಯ 1-300 ರೂ, ವಲಯ 2-4,600 ರೂ, ವಲಯ 3-400 ರೂ, ವಲಯ 4-5500 ರೂ, ವಲಯ 6-800 ರೂ, ವಲಯ 7-2,600 ರೂ, ವಲಯ 8-1000 ರೂ, ವಲಯ 9ರಲ್ಲಿ 500 ರೂ ದಂಡವನ್ನು ಸಂಗ್ರಹಿಸಲಾಗಿದೆ.

   English summary
   Mysuru Municipality has collected fine of rs 16,700 for not wearing mask
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X