• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು: ಇಂದು ಜಿಲ್ಲಾಡಳಿತ ವತಿಯಿಂದ ಮಾಸ್ಕ್ ಡೇ ಆಚರಣೆ

By ಮೈಸೂರು ಪ್ರತಿನಿಧಿ
|

ಮೈಸೂರು, ಜೂನ್ 18: ಕೊರೊನಾ ವೈರಸ್ ಹರಡುವಿಕೆ ವಿರುದ್ಧ ಜಾಗೃತಿ ಮೂಡಿಸಲು ಕರ್ನಾಟಕದಲ್ಲಿ ರಾಜ್ಯ ಸರ್ಕಾರದಿಂದ ಇಂದು ಮಾಸ್ಕ್ ಡೇ ಆಚರಣೆ ಮಾಡಲಾಗಿದೆ. ಅದರಂತೆ ಮೈಸೂರು ಜಿಲ್ಲಾಡಳಿತ ವತಿಯಿಂದಲೂ ಅಗ್ರಹಾರ, ಆಯುರ್ವೇದಿಕ್ ವೃತ್ತ, ರಾಜೇಂದ್ರ ನಗರದಲ್ಲಿ ಮಾಸ್ಕ್ ಡೇ ಆಚರಣೆ ಮಾಡಲಾಯಿತು.

ಅಗ್ರಹಾರದ ಬಳಿ ಮಾಸ್ಕ್ ಡೇ ಜಾಥಾಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಚಾಲನೆ ನೀಡಿದರು. ಆ ಮೂಲಕ ಅಧಿಕಾರಿಗಳು ಮಾಸ್ಕ್ ಬಗ್ಗೆ ಜನಜಗೃತಿ ಮೂಡಿಸಿದರು. ಜಾಥಾದಲ್ಲಿ ಯಮ, ಕಿಂಕರ ವೇಷ ತೊಟ್ಟು ಅರಿವು ಮೂಡಿಸಲಾಯಿತು.

ಮಾಸ್ಕ್‌ಡೇಗೆ ಚಾಲನೆ: ವಿಧಾನಸೌಧದಿಂದ ಕಬ್ಬನ್‌ ಪಾರ್ಕ್‌ಗೆ ಸಿಎಂ ಕಾಲ್ನಡಿಗೆ

ರಸ್ತೆಯಲ್ಲಿ ಮಾಸ್ಕ್ ಹಾಕದೆ ಹೋಗುತ್ತಿದ್ದವರಿಗೆ ಯಮ, ಕಿಂಕರ ವೇಷಧಾರಿಗಳು ಮಾಸ್ಕ್ ನೀಡಿದರು. ಇದೇ ವೇಳೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದಯಕೊಳ್ಳುವಂತೆ ಮನವಿ ಮಾಡಲಾಯಿತು.

ಮೊದಲು ಯಮ, ಕಿಂಕರ ವೇಷಧಾರಿಗೆ ಮೈಸೂರು ಮೇಯರ್ ತಸ್ನಿಂ ಮಾಸ್ಕ್ ಹಾಕಿದರು. ಮಾಸ್ಕ್ ಡೇ ಆಚರಣೆಯಲ್ಲಿ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ಪೊಲೀಸ್ ಆಯುಕ್ತರು ಭಾಗಿಯಾಗಿದ್ದರು.

ಈ ಸಂದರ್ಬದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಕೊರೊನಾ ವೈರಸ್ ಬಗ್ಗೆ ಜನರು ಜಾಗೃತಿಯಿಂದ ಇರಬೇಕು.

ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಬೇಕು ಎಂದು ಹೇಳಿದರು.

ಸಾರ್ವಜನಿಕರು ಸಹಕಾರ ಕೊಟ್ಟರೆ ಕೊರೊನಾ ವೈರಸ್ ತಡೆಯಬಹುದು ಎಂದು ಮಾಸ್ಕ್ ಡೇ ಅರಿವು ಜಾಥಾ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಕರೆ ನೀಡಿದರು. ಶುಕ್ರವಾರದಿಂದ ಡಿಜಿಟಲ್ ಮೂಲಕ ಮೈಸೂರಿನಲ್ಲಿ ಅರಿವು ಮೂಡಿಸಲಾಗುವುದು ಎಂದರು.

ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಲು ಸಹ ಅವಕಾಶ ಇದೆ. ಮುಂದೆ ಅದನ್ನು ಮೈಸೂರು ನಗರದಲ್ಲಿ ಅನುಷ್ಠಾನಕ್ಕೆ ತರುತ್ತೇವೆ. ದಂಡಕ್ಕಿಂತ ಜನರು ಮಾಸ್ಕ್ ಧರಿಸಿದರೆ ಉತ್ತಮವೆಂದು ಮೈಸೂರಿನಲ್ಲಿ ಮಾಸ್ಕ್ ಡೇಗೆ ಚಾಲನೆ ನೀಡಿದ ಬಳಿಕ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.

English summary
The Mask Day was celebrated in the city by the Mysuru District Administration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X