ಜೂನ್ 3 ರಂದು 'ಕೊಟ್ಟ ಮಾತು ದಿಟ್ಟ ಸಾಧನೆ' ಸಮಾವೇಶ
ಮೈಸೂರು, ಜೂನ್ 01 : ಕೊಟ್ಟ ಮಾತು ದಿಟ್ಟ ಸಾಧನೆ ಮೈಸೂರು ವಿಭಾಗದ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣಾ ಸಮಾವೇಶಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ.
ನಾಲ್ಕು ವರ್ಷ ಅವಧಿಯಲ್ಲಿ ರಾಜ್ಯ ಸರ್ಕಾರದ ನೀಡಿದ ಭರವಸೆಗಳ ಈಡೇರಿಕೆ ಕೈಗೊಂಡ ಕ್ರಮಗಳು ಯೋಜನೆಗಳು ಅಭಿವೃದ್ಧಿ ಮಾಹಿತಿಗಳನ್ನು ಸಾರ್ವಜನಿಕರ ಗಮನಕ್ಕೆ ತರುವ ಉದ್ದೇಶದಿಂದ ಕಾರ್ಯಕ್ರಮ ನಡೆಸಲಾಗುತ್ತಿದೆ.
ಚಾಲನೆ ಮಾಹಿತಿ ಉತ್ಸವಕ್ಕೆ ಲೋಕೋಪಯೋಗಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ಜೂನ್ 2 ರಂದು ಸಂಜೆ 5 ಗಂಟೆಗೆ ಚಾಲನೆ ನೀಡಲಿದ್ದು ಜೂನ್ 3 ರಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಮಾತು ದಿಟ್ಟ ಸಾಧನೆ ಮೈಸೂರು ವಿಭಾಗದ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.

ಸಿದ್ಧತೆ: ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮಕ್ಕಾಗಿ ಸುಸಜ್ಜಿತವಾದ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ.
ವಿವಿಧ ಇಲಾಖೆಗಳ ಮಾಹಿತಿ ಪ್ರದರ್ಶನಕ್ಕಾಗಿ ಮಳಿಗೆಗಳನ್ನು ಸಿದ್ದಪಡಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಲಕ್ಷಾಂತರ ಮಂದಿಗೆ ಅನುಕೂಲವಾಗುವಂತೆ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ
ಮಾಹಿತಿ ಉತ್ಸವ: ಈ ಕಾರ್ಯಕ್ರಮದಲ್ಲಿ ಸರ್ಕಾರದ ಸಾಧನೆಗಳು ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ, ಸಾಲ ಸೌಲಭ್ಯಗಳು, ಹೀಗೆ ಅನೇಕ ಮಾಹಿತಿಗಳನ್ನು ಜನರ ಅವಗಾಹನೆಗೆ ತರುವ ಸಲುವಾಗಿ ವಿವಿಧ ಇಲಾಖೆಗಳ ಮಾಹಿತಿ ಉತ್ಸವವನ್ನು ವಾತಾ ಮತ್ತು ಸಾರ್ವಜನಿಕ ಸಂಫರ್ಕ ಇಲಾಖೆ ಹಾಗೂ ಮೈಸೂರು ಜಿಲ್ಲಾಡಳಿತ ಏರ್ಪಡಿಸಿದೆ.

ಸಾಧನೆ: ಸರ್ಕಾರದ ಸಾಧನೆಗಳನ್ನು ಸಾರಿ ಹೇಳುವ ಇಲಾಖೆಗಳ ಮಳಿಗೆಗಳು ಸಹ ಇವೆ. ಮಾಹಿತಿ ಉತ್ಸವದಲ್ಲಿ ಮಾಹಿತಿ ಮಾತ್ರವಲ್ಲದೆ ಸಂಜೆ ಮನಸೆಳೆಯುವ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ.
ರಘುಲೀಲಾ ಸಂಗೀತ ಶಾಲೆ ಸುನಿತಾ ಚಂದ್ರಕುಮಾರ್ ಇವರು ಜೂ.3 ರಂದು ಸಂಜೆ 6 ಗಂಟೆಯಿಂದ 7 ಗಂಟೆ ವರೆಗೆ ಸರ್ಕಾರದ ವಿವಿಧ ಯೋಜನೆಗಳ ಕುರಿತ ಸಂಗೀತ ಹಾಗೂ ನೃತ್ಯ ರೂಪಕ ಕಾರ್ಯಕ್ರಮ ಸಾದರಪಡಿಸಲಿದ್ದಾರೆ.
ಸಂಜೆ 7 ಗಂಟೆಯಿಂದ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರಿಂದ ಮನರಂಜನಾ ಕಾರ್ಯಕ್ರಮ. ಜೂ.4ರಂದು ಸಂಜೆ 6 ಗಂಟೆಯಿಂದ 7 ಗಂಟೆ 'ಸ್ವಾಹ'ತಂಡದಿಂದ ವರ್ಲ್ಡ್ ಪಕ್ರ್ಯೂಷನ್ ಬ್ಯಂಡ್ ವಾದನ ಸಂಜೆ 7 ಗಂಟೆಯಿಂದ ಖ್ಯಾತ ಹಿನ್ನೆಲೆ ಗಾಯಕ ನವೀನ್ ಸಜ್ಜು ಅವರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ.












Click it and Unblock the Notifications