ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ಕ್ಯಾನ್ಸರ್ ಪೀಡಿತರಿಗಾಗಿ ಕೂದಲು ದಾನ ಮಾಡಿದ ಮೈಸೂರಿನ ಯುವತಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 22; ಹೆಣ್ಣಿಗೆ ಕೂದಲು ಅಂದ ಎನ್ನುವುದರಲ್ಲಿ ಎರಡು ಮಾತಿಲ್ಲ. ಇನ್ನೂ ಇವತ್ತಿನ ಫ್ಯಾಷನ್ ಯುಗದಲ್ಲಿ ಹೇರ್ ಸ್ಟ್ರೈಟ್ನಿಂಗ್, ಹೇರ್ ಕಲ್ಲರಿಂಗ್, ಕರ್ಲಿ ಹೇರ್ಸ್ ಹೀಗೆ ವಿವಿಧ ವಿನ್ಯಾಸದ ಹೇರ್ ಸ್ಟೈಲ್ ಮಾಡಿಕೊಳ್ಳುವ ಹಾಗೂ ಕೂದಲಿನ ಆರೈಕೆ ಮಾಡುವ ಹುಡುಗಿಯರನ್ನು ನೋಡಿದ್ದೇವೆ. ಆದರೆ ಮೈಸೂರಿನ ಯುವತಿಯೊಬ್ಬಳು ದಟ್ಟವಾಗಿ ಬೆಳೆದಿದ್ದ ಕೂದಲನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾಳೆ.

ಹೆಣ್ಣುಮಕ್ಕಳಿಗೆ ಕೇಶರಾಶಿಯೇ ಸೌಂದರ್ಯ ಎಂದು ಗೊತ್ತಿದ್ದರೂ, ಕ್ಯಾನ್ಸರ್ ಪೀಡಿತರಿಗಾಗಿ ತನ್ನ ಉದ್ದನೆ ಕೂದಲನ್ನು ದಾನ ಮಾಡಿರುವ ಮೈಸೂರಿನ ನಿವಾಸಿ ಸ್ವರ್ಣ, ತನ್ನ ಕೆಲಸದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾಳೆ.

ಈಗಷ್ಟೇ ಸ್ನಾತಕೋತ್ತರ ಪದವಿ ಪೂರೈಸಿರುವ ಸ್ವರ್ಣ, ಮೈಸೂರಿನ ಖಾಸಗಿ‌ ಸುದ್ದಿವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸದಾಕಾಲ ನೊಂದವರಿಗೆ ಕೈಲಾದಷ್ಟು ಸಹಾಯ ಮಾಡಬೇಕೆಂಬ ಬಯಕೆ ಹೊಂದಿರುವ ಈಕೆ, ಚಿಕ್ಕ ವಯಸ್ಸಿನಲ್ಲೇ ಕ್ಯಾನ್ಸರ್ ಪೀಡಿತರಿಗೆ ತನ್ನ ಕೂದಲನ್ನು ದಾನ ಮಾಡಿ ಆದರ್ಶ ಮೆರೆದಿದ್ದಾರೆ. ಇನ್ನೂ ಮಗಳ ಈ ಸಮಾಜಮುಖಿ ಕೆಲಸಕ್ಕೆ ಸ್ವರ್ಣ ಪೋಷಕರು ಸಹ ಸಮ್ಮತಿ ಕೊಟ್ಟಿದ್ದಾರೆ.

Mysuru Lady Donates Hair To Cancer Patients Draws Praise

ಹೀಗಾಗಿ ಕಳೆದೊಂದು ವರ್ಷದಿಂದ ಕೂದಲಿನ ಪೋಷಣೆ ಮಾಡಿ ಉದ್ದನೆಯ ಕೂದಲು ಬೆಳೆಸಿದ್ದ ಸ್ವರ್ಣ, ಬೆಂಗಳೂರಿನ ಜಯನಗರದಲ್ಲಿರುವ ಬೆಂಗಳೂರು ಹೇರ್ ಡೊನೇಷನ್ ಸೆಂಟರ್ ಎಂಬ ಎನ್‌ಜಿಓ ಸಂಸ್ಥೆಗೆ ಕೂದಲನ್ನು ದಾನ ಮಾಡಿದ್ದಾರೆ. ಈ ಸಂಸ್ಥೆ ಕೂದಲನ್ನು ಸಂಗ್ರಹಿಸಿ ವಿಗ್ ತಯಾರಿಸಿ ಕ್ಯಾನ್ಸರ್ ಪೀಡಿತರಿಗೆ ಉಚಿತವಾಗಿ ನೀಡುತ್ತಿದೆ.

ಕೂದಲು ದಾನ ಮಾಡಲು ಕಾರಣ?; ಯುವತಿ ಸ್ವರ್ಣ ಕೂದಲು ದಾನ ಮಾಡಲು ಆಕೆಯ ಪಕ್ಕದ ಮನೆಯಲ್ಲಿರುವ ಕ್ಯಾನ್ಸರ್ ಪೀಡಿತರೊಬ್ಬರು ಸ್ಪೂರ್ತಿಯಾಗಿದ್ದಾರೆ. ತನ್ನ ನೆರೆ ಮನೆಯಲ್ಲಿರುವ ಕ್ಯಾನ್ಸರ್ ಪೀಡಿತರನ್ನು ಕಂಡ ಸ್ವರ್ಣ, ಕ್ಯಾನ್ಸರ್ ಪೀಡಿತರಿಗಾಗಿ ಕೂದಲು ದಾನ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ.

ನಮಗೆ ಕೂದಲು ಬೆಳೆಯುವ ಸಾಧ್ಯತೆ ಇರುವಾಗ ಸಂಪೂರ್ಣವಾಗಿ ಕೂದಲನ್ನು ಡೊನೇಟ್ ಮಾಡಿದ್ದಾರೆ. ಅಲ್ಲದೇ ಪ್ರತಿಯೊಬ್ಬರು ಯಾವುದೇ ಭಯವಿಲ್ಲದೆ ಕೂದಲನ್ನು ದಾನ ಮಾಡುವ ಮೂಲಕ ಕ್ಯಾನ್ಸರ್ ಪೀಡಿತರ ನೋವನ್ನು ದೂರಾವಾಗಿಸಿ ಎಂದು ಮನವಿ ಮಾಡಿದ್ದಾರೆ.

Recommended Video

ವಿಶ್ವದ Top 10 ನಾಯಕರಲ್ಲಿ Modiಗೆ ಎಷ್ಟನೇ ಸ್ಥಾನ? | Oneindia Kannada

English summary
Mysuru lady Swarna denoted hair for cancer patients. Swarna completed post graduation and working for cable tv.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X