ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟ್ವಿಟ್ಟರ್ ವಿವಾದ

ಮೈಸೂರು, ಫೆಬ್ರವರಿ 27: ಒಂದು ದಿನದ ಹಿಂದೆ ಮೈಸೂರು ಸಂಸದ ಪ್ರತಾಪ್ ಸಿಂಹ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ವೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. "ನನ್ನ ತಂದೆಯನ್ನು ಕೊಂದಿದ್ದು ಪಾಕಿಸ್ತಾನವಲ್ಲ, ಯುದ್ಧ" ಎಂಬ ಕಾರ್ಗಿಲ್ ಹುತಾತ್ಮ ಕ್ಯಾಪ್ಟನ್ ಮಂಗಲ್ ದೀಪ್ ಸಿಂಗ್ ಮಗಳು ಗುರ್ಮೆಹರ್ ಪೋಸ್ಟ್ ಮಾಡಿದ್ದರು. [ಹೋರಾಟದಿಂದ ಹಿಂದೆ ಸರಿದ ಕೌರ್ ಗೆ ಪ್ರತಾಪ್ ತಿರುಗೇಟು]

ಆ ಹೇಳಿಕೆಯನ್ನು ಹಾಕಿ, ಅದರ ಪಕ್ಕದಲ್ಲೇ ದಾವೂದ್ ಇಬ್ರಾಹಿಂನ ಫೋಟೋ, 1993ರಲ್ಲಿ ಜನರನ್ನು ಕೊಂದಿದ್ದು ನಾನಲ್ಲ, ಬಾಂಬ್ ಎಂಬ ಹೇಳಿಕೆ ಇರುವಂಥದ್ದನ್ನು ಶಂಖ್ ನಾದ್ ಹೆಸರಿನಲ್ಲಿ ಹಾಕಲಾಗಿತ್ತು. ಅದನ್ನು ಪ್ರತಾಪ್ ಸಿಂಹ ಅವರು ಷೇರ್ ಮಾಡಿದ್ದರು. ಜತೆಗೆ ದೇಶವಿರೋಧಿ ಕೆಲಸಕ್ಕೆ ಪೊಲೀಸನ ಮಗನಾಗಿದ್ದ ದಾವೂದ್ ಇಬ್ರಾಹಿಂ ತನ್ನ ತಂದೆ ಹೆಸರನ್ನು ಬಳಸಿರಲಿಲ್ಲ ಎಂಬ ಒಕ್ಕಣೆ ಸಹ ಅದರಲ್ಲಿತ್ತು.[ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ ಗುರ್ಮೆಹರ್ ಕೌರ್]

Pratap Simha

ಅದನ್ನು ಪ್ರತಾಪ್ ಸಿಂಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಷೇರ್ ಮಾಡಿದ್ದರು. ಆ ನಂತರ ವೀರೇಂದ್ರ ಸೆಹ್ವಾಗ್ ಅವರ ಟ್ವೀಟ್ ವೊಂದನ್ನು ಸಹ ಷೇರ್ ಮಾಡಿದ್ದಾರೆ. ಆದರೆ ಆ ಬಗ್ಗೆ ಮಾಧ್ಯಮಗಳಲ್ಲಿ ಭಾರಿ ವಿರೋಧ ವ್ಯಕ್ತವಾದಾಗ, ಫೇಸ್ ಬುಕ್ ನಲ್ಲಿ ಬಂದದ್ದನ್ನು ಮತ್ತೆ ಟ್ವೀಟ್ ಮಾಡಿದ್ದೇನೆ ಅಷ್ಟೇ. ನನ್ನ ನಿಲುವಿಗೆ ಬದ್ಧನಾಗಿದ್ದೇನೆ. ನನ್ನ ಕ್ಷೇತ್ರದಲ್ಲಿ ಬರವಿದೆ. ಅದರಿಂದ ಹೊರಬರುವ ದಾರಿ ತೋರಿಸಿ ಮಾಧ್ಯಮಗಳೇ ಎಂದು ಮತ್ತೆ ಟ್ವೀಟ್ ಮಾಡಿದ್ದಾರೆ.

ಅದಾದ ನಂತರ ಆ ರೀತಿ ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣ, ವಾಟ್ಸ್ ಅಪ್ ಗಳಲ್ಲಿ ಹರಿದಾಡುತ್ತಿರುವ ಇನ್ನಷ್ಟು ಸಂದೇಶಗಳನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಹಿಟ್ಲರ್, ಯಹೂದಿಗಳನ್ನು ಕೊಂದಿದ್ದು ನಾನಲ್ಲ, ವಿಷಾನಿಲ. ಒಸಾಮ ಬಿನ್ ಲಾಡೆನ್ ಚಿತ್ರದಲ್ಲಿ, ಜನರನ್ನು ಕೊಂದಿದ್ದು ನಾನಲ್ಲ, ಬಾಂಬ್, ಕೃಷ್ಣಮೃಗದ ಚಿತ್ರ ಹಾಕಿ, ಭಾಯ್ ನನ್ನನ್ನು ಕೊಂದದ್ದಲ್ಲ, ಗುಂಡು ಎನ್ನುವಂಥ ಟ್ವೀಟ್ ಮಾಡಿದ್ದಾರೆ.[ಮತ್ತೆ ಸುದ್ದಿಯಲ್ಲಿ ಸೆಹ್ವಾಗ್, ಬ್ಯಾಟ್ ಬೀಸಿದ್ದು ಯಾರಿಗೆ?]

ಮುಂದುವರಿದು, ಪ್ರಿಯ ಮಾಧ್ಯಮದವರೇ ಹೋಲಿಕೆ ಮತ್ತು ರೂಪಕ ಅಥವಾ ಸಾದೃಶ್ಯದ ವ್ಯತ್ಯಾಸ ನಿಮಗೆ ಗೊತ್ತಿಲ್ಲವೇ ಎಂದು ಸಂಸದ ಪ್ರತಾಪ್ ಸಿಂಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+