• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ವಚ್ಛನಗರ ಪಟ್ಟ:ಸಾಂಸ್ಕೃತಿಕ ನಗರಿ ಮೈಸೂರಿಗೆ 3 ನೇ ಸ್ಥಾನ

By ಮೈಸೂರು ಪ್ರತಿನಿಧಿ
|

ಮೈಸೂರು, ಮಾರ್ಚ್ 06: ಇಂದು ನವದೆಹಲಿಯಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣೆ - 2019 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸ್ವಚ್ಛ ಸರ್ವೇಕ್ಷಣೆಯ ಫಲಿತಾಂಶ ಪ್ರಕಟವಾಗಿದ್ದು, ಮೈಸೂರಿಗೆ ದೇಶದ ಮೂರನೇ ಸ್ವಚ್ಛ ನಗರ ಸ್ಥಾನ ಲಭಿಸಿದೆ.

ಸಾಂಸ್ಕೃತಿಕ ನಗರಿ ಮೈಸೂರಿಗೆ ಸ್ವಚ್ಛನಗರಿ ಪಟ್ಟ ದಕ್ಕಲು ಕ್ಷಣಗಣನೆ

ಕಳೆದ ಬಾರಿ ಮೈಸೂರು 5 ನೇ ಸ್ಥಾನದಲ್ಲಿತ್ತು. ಈ ಬಾರಿಯಾದರೂ ಮೈಸೂರಿಗೆ ಮೊದಲನೇ ಸ್ಥಾನ ದಕ್ಕಬಹುದು ಎಂಬ ಖುಷಿಯಲ್ಲಿದ್ದ ಮೈಸೂರಿಗರಿಗೆ ಕೊಂಚ ನಿರಾಶೆಯಾಗಿದ್ದು, ಇದೀಗ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಇಂದೋರ್ ಗೆ ನಂಬರ್ ಒನ್ ಸ್ಥಾನ ಲಭಿಸಿದರೆ, ಅಂಬಿಕಾಪುರ್ ಗೆ ಎರಡನೇ ಸ್ಥಾನ ಸಿಕ್ಕಿದೆ.

ಅಂದಹಾಗೆ ಮೈಸೂರಿಗೆ 5000ಕ್ಕೆ 4379 ಅಂಕ ಲಭಿಸಿದ್ದು, ಸಂಸದ ಪ್ರತಾಪ್ ಸಿಂಹ ಮೈಸೂರಿಗೆ ಮೂರನೇ ಸ್ಥಾನ ಲಭಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಸ್ವಚ್ಛ ಸರ್ವೇಕ್ಷಣದಲ್ಲಿ ಮೈಸೂರು ಮಹಾನಗರ ಪಾಲಿಕೆಯೂ ನಾಮನಿರ್ದೇಶನಗೊಂಡಿದ್ದ ಹಿನ್ನೆಲೆಯಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ನೇತೃತ್ವದಲ್ಲಿ ಉಪ ಮೇಯರ್ ಮಹಮ್ಮದ್ ಶಫಿ, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ , ಹಿಂದಿನ ಆಯುಕ್ತ ಜಗದೀಶ್ ಮತ್ತು ಆರೋಗ್ಯಾಧಿಕಾರಿ ಡಾ. ನಾಗರಾಜ್ ನಿನ್ನೆ ಮಂಗಳವಾರ (ಮಾರ್ಚ್ 5) ಬೆಂಗಳೂರಿನಿಂದ ವಿಮಾನದಲ್ಲಿ ನವದೆಹಲಿಗೆ ಪ್ರಯಾಣ ಬೆಳೆಸಿದ್ದರು.

English summary
Mysuru has been ranked 3rd cleanest city in India with total score of 4379 out of 5000 marks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X