Mysuru: ಮೈಸೂರಿನಲ್ಲಿ ಮತ್ತೆ ಅವಳಿ ಚಿತ್ರಮಂದಿರಗಳು ನೆಲಸಮ

ಮೈಸೂರು, ಮಾರ್ಚ್ 05: ಕೋವಿಡ್ ನಂತರ ಮೈಸೂರಿನ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಒಂದೊಂದಾಗಿ ನೆಲಸಮವಾಗುತ್ತಿದ್ದು, ಈ ಸಾಲಿಗೆ ಸ್ಟರ್ಲಿಂಗ್ ಮತ್ತು ಸ್ಕೈಲೈನ್ ಸೇರಿಕೊಂಡಂತಾಗಿದೆ. ಕನ್ನಡ ಚಿತ್ರಗಳು ಮಾತ್ರವಲ್ಲದೇ ಹಿಂದಿ, ತೆಲುಗು, ಇಂಗ್ಲೀಷ್, ತಮಿಳು ಸಹಿತ ನಾನಾ ಭಾಷೆಗಳ ಚಿತ್ರ ಪ್ರದರ್ಶನದ ಮೂಲಕ ಮನೆಮಾತಾಗಿದ್ದ ಸ್ಟರ್ಲಿಂಗ್ ಹಾಗೂ ಸ್ಕೈಲೈನ್ ಚಿತ್ರಮಂದಿರಗಳು ಕೋವಿಡ್ ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕೆಲ ವರ್ಷಗಳ ಹಿಂದೆಯೇ ಬಂದ್ ಆಗಿದ್ದವು.

ದಿನ ಕಳೆದಂತೆ ಬಂದ್ ಆಗಿದ್ದ ಅವಳಿ ಚಿತ್ರಮಂದಿರಗಳನ್ನು ಇದೀಗ ನೆಲಸಮ ಮಾಡಲಾಗಿದೆ. ಈಗಾಗಲೇ ಮೈಸೂರಿನಲ್ಲಿ ರಣಜಿತ್, ಅಪೇರಾ, ಶಾಂತಲಾ, ತಿಬ್ಬಾದೇವಿ, ಗಣೇಶ, ರತ್ನ, ಒಲಂಪಿಯಾ ಚಿತ್ರಮಂದಿರಗಳು ನೆಲಸಮಗೊಂಡಿವೆ. ಇತ್ತೀಚೆಗೆ ಲಕ್ಷ್ಮೀ ಹಾಗೂ ಸರಸ್ವತಿ ಚಿತ್ರಮಂದಿರಗಳು ನೆಲಸಮಗೊಂಡಿದ್ದವು. ಅವುಗಳ ಸಾಲಿಗೆ ಇದೀಗ ಸ್ಟರ್ಲಿಂಗ್ ಮತ್ತು ಸ್ಕೈಲೈನ್ ಅವಳಿ ಚಿತ್ರಮಂದಿಗಳು ಸೇರಿದ್ದು ಸಿನಿಪ್ರಿಯರಿಗೆ ಬೇಸರ ತರಿಸಿದೆ.

Mysuru Famous Sterling and Skyline theatres Demolished

ಮೈಸೂರಿನಲ್ಲೀಗ ಕೇವಲ ಬೆರಳೆಣಿಕೆಯಷ್ಟು ಚಿತ್ರಮಂದಿರಗಳು ಮಾತ್ರ ಇದ್ದು ಅವುಗಳನ್ನಾದರೂ ಉಳಿಸಿಕೊಳ್ಳಬೇಕು ಎಂಬುದು ಸಿನಿಮಾ ಪ್ರೇಕ್ಷಕರ ಆಶಯವಾಗಿದೆ.

ಬಾಂಬೆಯ ಗಂಗಾ ಜಮುನ, ಬೆಂಗಳೂರಿನ ಬ್ಲೂಮೂನ್ ಮತ್ತು ಬ್ಲೂ ಡೈಮಂಡ್ ಮಾದರಿಯಲ್ಲೇ ಮೈಸೂರಿನಲ್ಲಿ ಸ್ಟರ್ಲಿಂಗ್ ಹಾಗೂ ಸ್ಕೈಲೇನ್ ಚಿತ್ರಮಂದಿರ ನಿರ್ಮಿಸಲಾಗಿತ್ತು. 1974ರಲ್ಲಿ ಸ್ಟರ್ಲಿಂಗ್ ಆರಂಭವಾದರೆ, 1978ರಲ್ಲಿ ಸ್ಕೈಲೇನ್ ಆರಂಭವಾಯಿತು. ಆರಂಭದಲ್ಲಿ ಹೆಚ್ಚು ಪ್ರೇಕ್ಷಕರಿಲ್ಲದೆ ಹೊರೆಯಾಗಿ ಪರಿಣಮಿಸಿತು. ಕ್ರಮೇಣ ಇಂಗ್ಲಿಷ್ ಚಿತ್ರಗಳನ್ನು ಪ್ರದರ್ಶನ ಮಾಡಲು ಆರಂಭಿಸಿದ ನಂತರ ಚಿತ್ರಮಂದಿರದ ಅದೃಷ್ಟ ಬದಲಾಯಿತು. ನಂತರ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲಾರಂಭಿಸಿದರು.

Take a Poll

ಹಿಂದಿ ಚಿತ್ರಗಳೂ ಮಾಲೀಕರ ಕೈ ಹಿಡಿದವು. ಅಮಿತಾಬ್ ಬಚ್ಚನ್ ನಟನೆಯ ಡಾನ್, ಸಿಲ್ವೆಸ್ಟರ್ ಸ್ಟಲ್ಲೋನ್ ಅಭಿನಯದ ಸ್ಪೆಷಲಿಸ್ಟ್, ಕೋಬ್ರಾ, ಲಿಯೊನಾರ್ಡ್ ಡಿಕಾಪ್ರಿಯೊ ಅವರ ಟೈಟಾನಿಕ್, ಜುರಾಸಿಕ್ ಪಾರ್ಕ್ ಸೇರಿದಂತೆ ಜಾಕಿಚಾನ್ ನಟನೆಯ ಬಹುತೇಕ ಜನಪ್ರಿಯ ಇಂಗ್ಲಿಷ್ ಸಿನಿಮಾಗಳು ಈ ಅವಳಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿವೆ.

ಹೆಚ್ಚಾದ ಆಸ್ತಿ ತೆರಿಗೆ ಮತ್ತು ನಿರ್ವಾಹಣ ವೆಚ್ಚ, ಸಿನಿ ರಸಿಕರ ಕೊರತೆ, ಮಲ್ಟಿಫೆಕ್ಸ್ ಅಬ್ಬರ ಸೇರಿದಂತೆ ಹತ್ತಾರು ಕಾರಣಗಳಿಂದ ಮೈಸೂರಿನಲ್ಲಿ 10ಕ್ಕೂ ಹೆಚ್ಚು ಚಿತ್ರಮಂದಿಗಳು ನೆಲಸಮಗೊಂಡಿದ್ದವು. ಕಳೆದ 2024ರ ನವೆಂಬರ್‌ನಲ್ಲಿ ಸರಸ್ವತಿ ಚಿತ್ರಮಂದಿರವೂ ಇದೇ ಕಾರಣಕ್ಕೆ ನೆಲಸಮವಾಗಿತ್ತು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾವಿರಾರು ಚಲನಚಿತ್ರಗಳನ್ನು ಪ್ರದರ್ಶಿಸುತ್ತಿದ್ದ 20ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 10ಕ್ಕೂ ಹೆಚ್ಚು ಚಿತ್ರಮಂದಿರಗಳು ಈಗಾಗಲೇ ನೆಲಸಮಗೊಂಡಿದ್ದು, ಬೆರಳೆಣಿಕೆಯಷ್ಟು ಮಾತ್ರ ಇಂದಿಗೂ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಹೀಗೆ ಕಾಲದ ಹೊಡೆತಕ್ಕೆ ಕಣ್ಮರೆಯಾದ ಚಿತ್ರಮಂದಿರಗಳ ಪಟ್ಟಿಯೂ ದೊಡ್ಡದಿದೆ. ರಣಜಿ, ಅಪೆರಾ, ಶಾಲಿಮಾರ್, ಶ್ರೀನಾಗರಾಜ, ರತ್ನ, ಶಾಂತಲಾ, ಲಕ್ಷ್ಮೀ, ಗೋಕುಲ, ಗಣೇಶ, ಓಲಂಪಿಯಾ, ರಿಜೆನ್ಸಿ, ವಿದ್ಯಾರಣ್ಯ, ಚಾಮುಂಡೇಶ್ವರಿ, ಉಮಾ ಚಿತ್ರಮಂದಿರಗಳು ಈಗಾಗಲೇ ಕಣ್ಮರೆಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+