ಚಾಮುಂಡಿಬೆಟ್ಟದಲ್ಲಿ ಸೆಲ್ಫಿ ಕ್ಲಿಕ್ಕಿಸಿಬಿಟ್ಟೀರಾ, ಜೋಕೆ..!

ಮೈಸೂರು, ಸೆಪ್ಟೆಂಬರ್ 18 : ಇದು ಸೆಲ್ಫಿ ಪ್ರಿಯರಿಗೆ ಬೇಸರದ ಸುದ್ದಿ. ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟದಲ್ಲಿ ಸೆಲ್ಫಿ ನಿಷೇಧಿಸಲು ನಿರ್ಧರಿಸಲಾಗಿದೆ. ಚಾಮುಂಡಿ ಬೆಟ್ಟದಲ್ಲಿ ಜಿಲ್ಲಾಡಳಿತ ವ್ಯೂ ಪ್ಯಾಂಟ್ ನಿರ್ಮಾಣ ಮಾಡಲಾಗುತ್ತಿತ್ತು. ಈ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಪ್ರವಾಸಿಗರು ಈ ಸ್ಥಳಕ್ಕೆ ತೆರಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೆಲ್ಫಿಗೆ ನಿಷೇಧ ಹೇರಲು ಮುಂದಾಗಿದೆ.

ಚಾಮುಂಡಿ ಬೆಟ್ಟದಲ್ಲಿ ಎರಡು ಸ್ಥಳಗಳಲ್ಲಿ ವ್ಯೂ ಪಾಯಿಂಟ್ ನಿರ್ಮಿಸಲು ಕಾಮಗಾರಿ ನಡೆಯುತ್ತಿದ್ದು, ದಸರಾ ವೇಳೆಗೆ ಪೂರ್ಣಗೊಳ್ಳಲಿದೆ. ಚಾಮುಂಡಿ ಬೆಟ್ಟ 'ಸೆಲ್ಫಿ ನಿಷೇಧಿತ ವಲಯ' ಎಂದು ಘೋಷಣೆಯಾಗುವ ಸಾಧ್ಯತೆಗಳಿವೆ. ಚಾಮುಂಡಿ ಬೆಟ್ಟದಿಂದ, ಮೈಸೂರಿನ ಸೌಂದರ್ಯ ವೀಕ್ಷಣೆಗೆ ಜಿಲ್ಲಾಡಳಿತ ಕೈಗೊಂಡಿರುವ ವ್ಯೂ ಪಾಯಿಂಟ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ಪ್ರವಾಸಿಗರು ಈ ಸ್ಥಳದಲ್ಲಿ ಸೆಲ್ಫಿಗೆ ಮೊರೆ ಹೋದ ಹಿನ್ನೆಲೆಯಲ್ಲಿ ಈ ಪ್ರಶ್ನೆ ಉದ್ಭವಿಸಿದೆ.

Mysuru District administration bans selfi in Chamundi hills

ಜಿಲ್ಲಾಡಳಿತದ ವತಿಯಿಂದ ಚಾಮುಂಡಿ ಬೆಟ್ಟದಲ್ಲಿ ಎರಡು ವ್ಯೂ ಪಾಯಿಂಟ್ ಗಳನ್ನು ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದೇ ದಸರಾ ವೇಳೆಗೆ ಈ ವ್ಯೂ ಪಾಯಿಂಟ್ ಗಳನ್ನು ಸಜ್ಜುಗೊಳಿಸುವ ಸಲುವಾಗಿ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ. ಕಾಮಗಾರಿ ಪೂರ್ಣಗೊಳ್ಳದಿದ್ದರೂ, ಕೆಲ ಪ್ರವಾಸಿಗರು ಅರೆಬರೆ ಕಾಮಗಾರಿ ನಡೆದಿರುವ ವ್ಯೂ ಪಾಯಿಂಟ್ ಸ್ಥಳದಲ್ಲಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಇದರಿಂದ ಇಲ್ಲಿ ಅನಾಹುತ ಸಂಭವಿಸುವ ಮೊದಲೇ ಜಾಗೃತಿ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿರುವ ಹೊಣೆ ಜಿಲ್ಲಾಡಳಿತದ ಮೇಲಿದೆ. ಈ ಹಿನ್ನೆಲೆಯಲ್ಲಿ ದಸರಾ ವಿಶೇಷಾಧಿಕಾರಿಯೂ ಆದ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದಾಗ 5 ಅಡಿಯವರೆಗೆ ಕಂಬಿ ಬೇಲಿ ಹಾಕಲಿದ್ದೇವೆ ಎಂದು ತಿಳಿಸಿದರು .

ಈ ಕುರಿತಾಗಿ ಸೆ. 21 ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿಸಿದರು. ಅಂತೆಯೇ ಈ ಸಂಬಂಧ ಪ್ರತಿಕ್ರಿಯೆ ನಡೆದ ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಇನ್ನು ಮೂರು ದಿನದೊಳಗೆ ಅಪಾಯ ವಲಯ ಮತ್ತು ಎಚ್ಚರಿಕೆ ನಾಮಫಲಕಗಳನ್ನು ಬೆಟ್ಟದ ಪ್ರವೇಶ ದ್ವಾರದಿಂದ ದೇವಸ್ಥಾನದವರೆಗೂ ಅಗತ್ಯವಿದ್ದ ಕಡೆಗಳಲ್ಲಿ ಅಳವಡಿಸಲಾಗುವುದು. ಸೆಲ್ಫಿ ನಿಷೇಧಿತ ವಲಯ ಎಂದು ಘೋಷಣೆ ಮಾಡುವ ಸಂಬಂಧ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಬಳಿಕವಷ್ಟೇ ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+