ಮೈಸೂರು ದಸರಾ ಜಂಬೂ ಸವಾರಿ: ಅರ್ಜುನನಿಗೆ ಮರದ ಅಂಬಾರಿ ತಾಲೀಮು
ಮೈಸೂರು, ಸೆಪ್ಟೆಂಬರ್ 18: ನಾಡಹಬ್ಬ ದಸರೆ ಆರಂಭಕ್ಕೆ ಇನ್ನು 48 ಗಂಟೆಗಳಷ್ಟೇ ಬಾಕಿ ಇದ್ದು, ಇಂದಿನಿಂದ ಜಂಬೂಸವಾರಿ ಆನೆಗೆ ಮರದ ಅಂಬಾರಿ ತಾಲೀಮು ನಡೆಸಲಾಯಿತು.
ಮೈಸೂರು ಅರಮನೆಯಿಂದ ಬನ್ನಿ ಮಂಟಪದ ವರೆಗೆ ಆನೆಗಳು ತೆರಳಿದ್ದು, ಅರಣ್ಯ ಸಿಬ್ಬಂದಿ ಅರ್ಜುನ ಆನೆ ಮೇಲೆ ಮರದ ಅಂಬಾರಿ ಇರಿಸಿ ಮುನ್ನಡೆಸಿದ್ದಾರೆ.

ಈವರೆಗೆ ಮರಳಿನ ಮೂಟೆಯನ್ನು ಹೊರುವ ತಾಲೀಮು ನಡೆಸಲಾಗುತ್ತಿತ್ತು. ಇಂದಿನಿಂದ ನಂತರ ಡಿಸಿಎಫ್ ಏಡುಕುಂಡಲ, ಆನೆ ವೈದ್ಯ ಡಾ.ನಾಗರಾಜ್ ಅವರು ಮರದ ಅಂಬಾರಿಗೆ ಪೂಜೆ ಸಲ್ಲಿಸಿದರು.

ಇದಾದ ಬಳಿಕ ಕ್ಯಾಪ್ಟನ್ ಅರ್ಜುನ ಮರದ ಅಂಬಾರಿ ಹೊತ್ತು ಹೆಜ್ಜೆ ಹಾಕುತ್ತಿದ್ದಾನೆ. ಅರ್ಜುನನಿಗೆ ಕುಮ್ಕಿ ಆನೆಗಳಾದ ವಿಜಯ, ವರಲಕ್ಷ್ಮಿ ಸಾಥ್ ನೀಡುತ್ತಿವೆ.












Click it and Unblock the Notifications