Mysuru Dasara 2024: ಮೈಸೂರು ದಸರೆಗೆ ಧರೆಗಿಳಿದ ಪುಷ್ಪಲೋಕ; ಈ ಬಾರಿಯ ಥೀಮ್ ಏನು?
Mysuru Dasara 2024: ಇಂದಿನಿಂದ (ಅಕ್ಟೋಬರ್ 03) ವಿಶ್ವ ವಿಖ್ಯಾತ ಮೈಸೂರು ದಸರಾಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಅದರಲ್ಲೂ ದಸರಾ ಪ್ರಮುಖ ಆಕರ್ಷಣೆಗಳಲ್ಲಿ ಫಲಪುಷ್ಪ ಪ್ರದರ್ಶನವೂ ಕೂಡ ಒಂದಾಗಿದೆ. ಹಾಗಾದರೆ ಈ ಬಾರಿಯ ಫಲಪುಷ್ಪ ಪ್ರದರ್ಶನದ ಥೀಮ್ ಏನಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮೈಸೂರು ದಸರಾ ವಿಶೇಷತೆಗಳಲ್ಲೊಂದಾದ ಫಲಪುಷ್ಪ ಪ್ರದರ್ಶನ ನೋಡುಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದ್ದು, ಮೇಲ್ನೋಟಕ್ಕೆ ಪುಷ್ಪಲೋಕವೇ ಧರೆಗಿಳಿದು ಬಂದಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ಸರ್ಕಾರ ಪಂಚ ಗ್ಯಾರಂಟಿಗಳು ಇಲ್ಲಿ ರಾರಾಜಿಸುತ್ತಿದ್ದು, ಪುಷ್ಪಗಳಲ್ಲಿಯೇ ಭಾರತದ ಸಂವಿಧಾನ, ಸಂಸತ್ತಿನ ಕುರಿತಂತೆ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗಿದೆ.

ಪುಷ್ಪ ಪ್ರೇಮಿಗಳನ್ನು ಬಗೆ-ಬಗೆಯ ಪುಷ್ಪಗಳು ತನ್ನತ್ತ ಕೈ ಬೀಸಿ ಕರೆಯುತ್ತಿದ್ದರೆ, ವಿವಿಧ ನಮೂನೆಯ ಪುಷ್ಪಗಳಿಂದ ನಿರ್ಮಾಣಗೊಂಡ ಕಲಾಕೃತಿಗಳು ಕಣ್ಮನ ಸೆಳೆಯುತ್ತಿವೆ. ಫಲಪುಷ್ಪ ಪ್ರದರ್ಶನ ನಡೆಯುತ್ತಿರುವ ಕುಪ್ಪಣ್ಣ ಪಾರ್ಕ್ ಅನ್ನು ಒಂದು ಹೊಡೆದರೆ, ಇಲ್ಲಿ ಸಮಾಜಕ್ಕೆ ಅತ್ಯಾದ್ಭುತ ಕೊಡೆಗೆಗಳನ್ನು ನೀಡಿದ ವ್ಯಕ್ತಿಗಳು, ಸಾಧಕರು, ವಚನಾಕಾರರ ಕಲಾಕೃತಿಗಳನ್ನು ಕಾಣಬಹುದಾಗಿದೆ.
ದೇಶದ ಸಂವಿಧಾನದಿಂದ ಆರಂಭವಾಗಿ 12ನೇ ಶತಮಾನದಲ್ಲಿ ಅಲ್ಲಮಪ್ರಭು, ಬಸವಣ್ಣ ಸೇರಿದಂತೆ ನೂರಾರು ಶರಣರು ಒಟ್ಟುಗೂಡಿ ಸಮಾಜ ಸುಧಾರಣೆಗಾಗಿ ಚರ್ಚೆ ನಡೆಸುತ್ತಿದ್ದ ಅನುಭವ ಮಂಟಪ, ಶಿಕ್ಷಣ ಕ್ರಾಂತಿಯ ಬಗ್ಗೆ ಬೆಳಕು ಚೆಲ್ಲಿದ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ನೋಡುಗರನ್ನು ಸೆಳೆಯುತ್ತಾರೆ.
ತೋಟಗಾರಿಕೆ ಇಲಾಖೆ ಪ್ರತಿವರ್ಷವೂ ಕುಪ್ಪಣ್ಣ ಪಾರ್ಕ್‌ನಲ್ಲಿ ದಸರಾ ಪ್ರಯುಕ್ತ ಫಲ-ಪುಷ್ಪ ಪ್ರದರ್ಶನ ಏರ್ಪಡಿಸುತ್ತಾ ಬಂದಿದ್ದು, ವರ್ಷದಿಂದ ವರ್ಷಕ್ಕೆ ವಿಭಿನ್ನ ಮತ್ತು ವಿಶಿಷ್ಟವಾಗಿದೆ. ಅದರಂತೆಯೇ ಈ ಬಾರಿ ಹಲವು ರೀತಿಯ ಅನುಭವಗಳನ್ನು ನೀಡುತ್ತಿದೆ. ಉದ್ಯಾನದತ್ತ ಹೆಜ್ಜೆ ಹಾಕಿ ಮುಖ್ಯದ್ವಾರದಲ್ಲಿ ಮುನ್ನಡೆದರೆ, ಹಳದಿ ಮತ್ತು ಕೆಂಪು ಬಣ್ಣದ ಗುಲಾಬಿ ಹೂವಿನಿಂದ ನಿರ್ಮಿಸಲಾದ ಕರ್ನಾಟಕ ಭೂಪಟ, ಎಡ-ಬಲದಲ್ಲಿ ಆನೆಯ ಮಾದರಿ ರಾಜ್ಯಭಕ್ತಿ ತೋರಿಸುತ್ತದೆ.
ಅಷ್ಟೇ ಅಲ್ಲದೆ ಈ ಬಾರಿ ಟಿ-20 ವಿಶ್ವಕಪ್ ಗೆದ್ದ ಭಾರತಕ್ಕೆ ಅಭಿನಂದನೆ ಸಲ್ಲಿಸುವ ಸಲುವಾಗಿ ವಿಶ್ವಕಪ್ ಮಾದರಿ ಕೂಡ ಹೂವಿನಿಂದ ಅರಳಿ ನಿಂತಿದ್ದು, ಕ್ರೀಡಾಭಿಮಾನಿಗಳನ್ನು ತನ್ಮತ್ತ ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಪುಷ್ಪಗಳಲ್ಲಿ ಮೂಡಿದ ಪಂಚ ಗ್ಯಾರಂಟಿ: ಇನ್ನು ಕ್ರಿಸ್ತಪೂರ್ವದಲ್ಲಿ ಭಗವಾನ್ ಬುದ್ಧನು ತಮ್ಮ ಶಿಷ್ಯರ ಜೊತೆ ಕುಳಿತು ಸಂವಾದ ನಡೆಸುತ್ತಿರುವ ದೃಶ್ಯವನ್ನೂ ಕೂಡ ಹೂವಿನಲ್ಲಿ ರೂಪ ಕೊಡಲಾಗಿದೆ. ನಮ್ಮ ದೇಶದ ಹೆಮ್ಮೆಯ ಪಾರ್ಲಿಮೆಂಟ್, ಅದಕ್ಕಾಗಿ ದುಡಿದ ಮಹನೀಯರ ಚಿತ್ರಗಳೂ ಕೂಡ ಪುಷ್ಪ ರೂಪದಲ್ಲಿ ಅನಾವರಣಗೊಂಡು, ದೇಶದ ಸಂವಿಧಾನ, ಸಂಸತ್ತು ಕುರಿತು ಜನರಿಗೆ ಜಾಗೃತಿ ಮೂಡಿಸುವ ಕಾಯಕದಲ್ಲಿ ತೊಡಗಿರುವುದು ಕಂಡು ಬರುತ್ತದೆ.
ಇದೆಲ್ಲದರ ನಡುವೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಯುವನಿಧಿ, ಗೃಹಜ್ಯೋತಿ, ಶಕ್ತಿ ಹಾಗೂ ಗೃಹಲಕ್ಷ್ಮೀ ಯೋಜನೆಗಳ ವಿಷಯಾಧಾರಿತವಾದ ಪುಷ್ಪ ಕಲಾಕೃತಿ ಮಾದರಿಗಳು ಸರ್ಕಾರಿ ಯೋಜನೆಯನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿವೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಸೂರು ರಾಜ್ಯದಲ್ಲಿ ಸ್ಥಾಪನೆಯಾದ ಭದ್ರಾವತಿ ಕಾರ್ಖಾನೆ, ಶಿವನಸಮುದ್ರ ಜಲ ವಿದ್ಯುತ್ ಯೋಜನೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಆಕಾಶವಾಣಿ ಸೇರಿದಂತೆ ವಿವಿಧ ಅಭಿವೃದ್ಧಿ-ಸಾಧನೆಗಳನ್ನು ಕುರಿತು ಹೂವುಗಳ ಮಧ್ಯದಲ್ಲಿ ಅಳವಡಿಸಿರುವ ಚಿತ್ರ ಪ್ರದರ್ಶನ ಇತಿಹಾಸದ ಸಾಧನೆಗಳ ನೆನಪು ಮಾಡಿ ಕೊಡುತ್ತಿದೆ.
ಹೂಗಳಲ್ಲಿಯೇ ಪ್ರತಿಮೆ, ದೇಗುಲ ನಿರ್ಮಾಣ: ಆಫ್ರಿಕನ್ ಮಾರಿಗೋಲ್ಡ್, ಆರ್ಕಿಡ್‌ಗಳು, ಸೆಲೋಸಿಯಾ, ಕಾರ್ನೇಷನ್, ಆಂಥೂರಿಯಂ, ಗರ್ಬೆರಾ, ರೋಸಸ್, ಕಾಸ್ಮೊಸ್, ಬ್ಲೂಡೈಸಿ, ಪಿಂಗ್ ಪಾಂಗ್, ಪೆಟುನಿಯಾ, ಟೊರೆನಿಯಾ, ಡ್ರಾಕೇನಾ, ಟಿಥೋನಿಯಾ, ಜಿನ್ನಿಯಾ ಸೇರಿದಂತೆ ನಾನಾ ಬಗೆಯ ಹೂವುಗಳನ್ನು ಹೇರಳವಾಗಿ ಬಳಸಿ ಭಾರತದ ಮೊದಲ ಮಹಿಳಾ ಶಿಕ್ಷಕಿಯ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ.
ಹೆಣ್ಣು ಮಕ್ಕಳಿಗೆ ಶಿಕ್ಷಣ ಕ್ರಾಂತಿಯ ಬಗ್ಗೆ ಬೆಳಕು ಚೆಲ್ಲಿದ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ, ಒಂದೇ ದೇಹದಲ್ಲಿ ಅರ್ಧಭಾಗ ರೈತ ಇನ್ನರ್ಧ ಭಾಗ ಗಡಿ ಕಾಯುವ ಸೈನಿಕನ ಮಾದರಿ, ಹುಲಿಯನ್ನೇರಿದ ಮಹದೇಶ್ವರ ಸ್ವಾಮಿಯ ಪ್ರತಿಮೆ, ನಂಜನಗೂಡಿನ ಶ್ರೀಕಂಠೇಶ್ವರ, ಚಾಮುಂಡೇಶ್ವರಿ ದೇವಾಲಯವನ್ನು ನಿರ್ಮಿಸಿರುವುದು ವಿಶೇಷವಾಗಿದೆ.
ಒಟ್ಟಾರೆಯಾಗಿ ಈ ಬಾರಿಯ ದಸರಾ ಫಲಪುಷ್ಪ ಪ್ರದರ್ಶನ ಹಲವು ಹೊಸತನಗಳು ಮತ್ತು ವಿಶೇಷತೆಗಳಿಗೆ ಸಾಕ್ಷಿಯಾಗಿದ್ದು, ಹತ್ತು ಹಲವು ವಿಶೇಷತೆಗಳನ್ನು ಹೂವುಗಳಿಂದ ಮತ್ತು ಹೂವಿನ ಕುಂಡಗಳಿಂದ ಸೃಷ್ಟಿ ಮಾಡಲಾಗಿದ್ದು, ಫಲಪುಷ್ಪ ಪ್ರದರ್ಶನದೊಳಗೆ ತೆರಳಿದ್ದೇ ಆದರೆ ಇಲ್ಲಿನ ಗಾಜಿನ ಮನೆಯಲ್ಲಿ ಪುಷ್ಪಲೋಕವೇ ಎದ್ದು ಬಂದಂತೆ ಭಾಸವಾಗುವ ಮೂಲಕ ಮೈಮನಕ್ಕೆ ಪುಳಕ ನೀಡುವುದಲ್ಲಿ ಯಾವುದೇ ಅನುಮಾನವಿಲ್ಲ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications