Mysuru Dasara 2023: ಮತ್ತೆ ಮುನ್ನೆಲೆಗೆ ಬಂದ ಮಹಿಷ ದಸರಾ; ಸಚಿವ ಎಚ್‌.ಸಿ.ಡಾ.ಮಹದೇವಪ್ಪನ ನಿಲುವೇನು?

ಮೈಸೂರು, ಜುಲೈ, 10: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಿಷ ದಸರಾಕ್ಕೆ ಬ್ರೇಕ್ ಬಿದಿತ್ತು. ಆದರೆ ಈ ಬಾರಿ ಮತ್ತೆ ಇದನ್ನು ನಡೆಸಲಾಗುತ್ತಾ ಎಂಬ ಚರ್ಚೆ ಶುರುವಾಗಿದೆ. ಹಾಗಾದರೆ ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ದಸರಾ ಮಹೋತ್ಸವದ ವೇಳೆ ದಲಿತ ಸಂಘರ್ಷ ಸಮಿತಿ ವತಿಯಿಂದ ಬೆಟ್ಟದ ಮಹಿಷಾಸುರ ಪ್ರತಿಮೆ ಮುಂದೆ ಮಹಿಷಾ ದಸರಾ ನಡೆಯುತ್ತಿತ್ತು. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದಕ್ಕೆ ತಡೆ ನೀಡಲಾಗಿತ್ತು.

Mysuru Dasara 2023: H.C.Mahadevappa reaction on Mahisha dasara

"ದಸರಾ ಮಹೋತ್ಸವಕ್ಕೆ 400ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇದೆ. ಆದರೆ, ಕೆಲವರು ದಸರಾ ಸಮಯದಲ್ಲಿ ಮಹಿಷಾ ದಸರಾ ಮಾಡುತ್ತಾರೆ. ನಾವು ರಾಕ್ಷಸನನ್ನು ಮರ್ದಿಸಿದ ಚಾಮುಂಡೇರ್ಶವರಿಯ ದಸರಾ ಆಚರಿಸುತ್ತಿದ್ದರೆ, ಕೆಲವರು ಮಹಿಷಾ ದಸರಾ ಮಾಡುವುದು ಖಂಡನೀಯ. ಹಾಗಾಗಿ ಇದಕ್ಕೆ ಅವಕಾಶ ಕೊಡಬಾರದು," ಎಂದು ಸಂಸದ ಪ್ರತಾಪ್‌ ಸಿಂಹ ಮನವಿ ಮಾಡಿದ್ದರು. ಹಾಗಾಗಿ ಕಳೆದು ಮೂರು ವರ್ಷಗಳಿಂದ ಮಹಿಷಾ ದಸರಾ ನಡೆಯಲು ಅವಕಾಶ ಇರಲಿಲ್ಲ. ಇದನ್ನು ಖಂಡಿಸಿ ದಸಂಸ ಪ್ರತಿಭಟನೆಯನ್ನೂ ನಡೆಸಿತ್ತು.

ಮತ್ತೆ ಮಹಿಷ ದಸರಾ ಸುಳಿವು?

ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಧಾರ್ಮಿಕ ಸ್ವಾತಂತ್ರ್ಯ ಎಂಬುದು ಸಂವಿಧಾನಬದ್ಧ ಹಕ್ಕಾಗಿದೆ. ಯಾರು ಯಾವ ಆಚರಣೆಯನ್ನು ಬೇಕಾದರೂ ಮಾಡಬಹುದು. ಯಾವ ಆಚರಣೆ ಬೇಕು, ಬೇಡ ಅಂತಾ ಸರ್ಕಾರ ತೀರ್ಮಾನ ಮಾಡಲು ಅವಕಾಶ ಇಲ್ಲ. ಮಹಿಷ ದಸರಾಕ್ಕೆ ಅವಕಾಶ ನೀಡುವ ವಿಚಾರ ಇನ್ನೂ ನಮ್ಮ ಮುಂದೆ ಬಂದಿಲ್ಲ. ಬಂದರೆ ಪರಿಶೀಲಿಸುತ್ತೇವೆ ಎನ್ನುವ ಮೂಲಕ ಮತ್ತೆ ಮಹಿಷ ದಸರಾ ನಡೆಯುವ ಸುಳಿವು ನೀಡಿದ್ದಾರೆ.

ನಾಡಹಬ್ಬ ದಸರಾಗೆ ಸಿದ್ಧತೆ

ನೂತನ ಕಾಂಗ್ರೆಸ್‌ ಸರರ್ಕಾ ಅಧಿಕಾರಕ್ಕೆ ಬಂದ ಮೇಲೆ ನಡೆಯುತ್ತಿರುವ ಮೊದಲ ದಸರಾ ಇದು. ಹಾಗಾಗಿ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಚರ್ಚಿಸಿದ ಬಳಿಕ ಈ ಬಾರಿಯ ನಾಡಹಬ್ಬದ ರೂಪುರೇಷೆಯನ್ನು ಸಿದ್ಧಪಡಿಸಲಾಗುವುದು. ಎಲ್ಲವನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿರ್ಧರಿಸುತ್ತಾರೆ ಎಂದು ಹೇಳಿದರು.

ದಾಖಲೆ ಇದ್ದರೆ ಪ್ರದರ್ಶಿಸಲಿ

ಇನ್ನು ಎಚ್.ಡಿ.ಕುಮಾರಸ್ವಾಮಿ ಪೆನ್‌ಡ್ರೈವ್‌ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವ ಅನುಭವ ಇರುವವರಾಗಿದ್ದಾರೆ. ಹಾಗಾಗಿ ಅವರು ಗಾಳಿಯಲ್ಲಿ ಗುಂಡು ಹೊಡೆಯಬಾರದು. ನಿಖರ ಮಾಹಿತಿ ಇದ್ದಲ್ಲಿ ಅದನ್ನು ಜನರ ಮುಂದೆ ಪ್ರದರ್ಶಿಸಲಿ. ದಾಖಲೆ, ಸಾಕ್ಷ್ಯ ಇಟ್ಟುಕೊಂಡು ಆರೋಪಿಸಿದರೆ ಅದಕ್ಕೊಂದು ಅರ್ಥವಿರುತ್ತದೆ ಎಂದು ತಿಳಿಸಿದರು.

ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದ ಎಲ್ಲ ಗ್ಯಾರಂಟಿಗಳನ್ನೂ ಈಡೇರಿಸಲಾಗುವುದು. ಈಗಾಗಲೇ ಬಜೆಟ್‌ನಲ್ಲಿ ಘೋಷಣೆ ಮಾಡಿ ಇದಕ್ಕೆ ಅನುದಾನವನ್ನು ಮೀಸಲಿಡಲಾಗಿದೆ. ಇನ್ನು ಯುವ ನಿಧಿಯ ನೋಂದಣಿ ಪ್ರಕ್ರಿಯೆ ಬಗ್ಗೆ ಶೀಘ್ರದಲ್ಲೇ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+