• search
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ದಸರಾ: ವಿಜಯ್ ಪ್ರಕಾಶ್ ಹಾಡು, ಸ್ವರ್ಗ ಧರೆಗಿಳಿಸಿದ ರಾಗಿಣಿ

|

ಮೈಸೂರು, ಅಕ್ಟೋಬರ್ 13: ವರ್ಣರಂಜಿತ ವಿದ್ಯುತ್ ಬೆಳಕಿನಾಟದ ಸಂಗೀತದ ಅಬ್ಬರಕ್ಕೆ ಯುವ ಮನಸ್ಸುಗಳು ಹುಚ್ಚೆದ್ದು ಕುಣಿದು ಕುಪ್ಪಳಿಸುವ ಮೂಲಕ ಸಾಂಸ್ಕೃತಿಕ ನಗರಿಯಲ್ಲಿ ಕಾರ್ಯಕಮಗಳ ಪ್ರೋತ್ಸಾಹಕ್ಕೆ ಎಂದೂ ಕೊರತೆ ಇಲ್ಲ ಎಂಬುದನ್ನು ಸಾಬೀತು ಮಾಡಿದವು.

'ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜ ಕುಮಾರ..' ಎಂದು ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಹಾಡುತ್ತಿದ್ದಂತೆ, ಮಹಾರಾಜ ಕಾಲೇಜು ಮೈದಾನದ ಸುತ್ತ ಯುವಪಡೆ ಹಾಡಿಗೆ ಧ್ವನಿಗೂಡಿಸಿದರು.

ಮೈಸೂರು ದಸರಾ - ವಿಶೇಷ ಪುರವಣಿ

ತಂತಮ್ಮ ಮೊಬೈಲ್‌ ಗಳ ಟಾರ್ಚ್‌ ಹೊತ್ತಿಸಿ ಹಾಡಿನ ಲಯಕ್ಕೆ ಕೈಮೇಲೆತ್ತಿ ತೂಗುದ್ದಿ ಹಾಡಿನ ಮಾಧುರ್ಯಕ್ಕೆ, ಮೈಸೂರು ಯುವಕರ ಸಂಗೀತ ಪ್ರೀತಿಗೆ ಸಾಕ್ಷಿಯಂತೆ ಕಂಡಿತು. ಸಂಗೀತದ ಕಿನ್ನರ ಲೋಕ ಮೈಸೂರಿನಲ್ಲಿ ನಿನ್ನೆ ತೆರೆದುಕೊಂಡಿತ್ತು.

ವಿಜಯ್ ಪ್ರಕಾಶ್ ಹಾಡಿಗೆ ಭಾವುಕರಾಗಿ ಕಣ್ಣೀರು ಹಾಕಿದ ಕುಮಾರಸ್ವಾಮಿ

ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾದ ವೇದಿಕೆ ಏರಿದ ವಿಜಯಪ್ರಕಾಶ್ , ಆರಂಭದಲ್ಲಿ ಅವರ ತಂದೆ ಎಲ್.ರಾಮಶೇಷು ರಚಿಸಿರುವ ಚಾಮುಂಡೇಶ್ವರಿ ಓಂ ಮಾತಾ ತಾಯಿ' ಎನ್ನುವ ಭಕ್ತಿಗೀತೆಯೊಂದಿಗೆ ಸಂಗೀತದ ರಸದೌತಣ ಆರಂಭಿಸಿದರು.

ಗೊಂಬೆ ಹೇಳುತೈತೆ ಹಾಡು ಸೂಪರ್‌ ಹಿಟ್‌

ಗೊಂಬೆ ಹೇಳುತೈತೆ ಹಾಡು ಸೂಪರ್‌ ಹಿಟ್‌

ಪುನೀತ್ ರಾಜ್‌ ಕುಮಾರ್ ಅಭಿನಯದ `ರಾಜಕುಮಾರ' ಸಿನಿಮಾದ `ಗೊಂಬೆ ಹೇಳುತೈತೆ ನೀನೇ ರಾಜಕುಮಾರ' ಹಾಡನ್ನು ಹಾಡುತ್ತಿದ್ದಂತೆ ಮಹಾರಾಜ ಕಾಲೇಜು ಮೈದಾನದಲ್ಲಿದ್ದ ಯುವಸ್ತೋಮ ಹೆಜ್ಜೆ ಹಾಕಿತು.

ನೋಡ ಬನ್ನಿ ಪಾರಂಪರಿಕ ನಗರಿಯ ಝಗಮಗಿಸುವ ದೀಪಾಲಂಕಾರದ ಸೊಬಗು

ಮೋಡಿ ಮಾಡಿದ ರಕ್ಷಿತ್-ರಶ್ಮಿಕಾ ಜೋಡಿ

ಮೋಡಿ ಮಾಡಿದ ರಕ್ಷಿತ್-ರಶ್ಮಿಕಾ ಜೋಡಿ

ನಂತರ `ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ, ಎಂಬ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಹಾಡಿಗೆ ಯುವಜನಸ್ತೋಮದ ಮಧ್ಯದಿಂದ ಧ್ವನಿಗೂಡಿಸಲು ಹೇಳುತ್ತಿದ್ದಂತೆ ಸಂಭಮದಿಂದ ಧ್ವನಿಗೂಡಿಸಿದರು. ಶಿಳ್ಳೆ ಹೊಡೆಯುತ್ತ ಕುಣಿದು ಕುಪ್ಪಳಿಸಿದರು.

ಸಿಕ್ಕವರಿಗೆಲ್ಲಾ ಕೈತುತ್ತು ತಿನ್ನಿಸಿದರು ಸಚಿವ ಜಮೀರ್ ಅಹ್ಮದ್‌

ಯುವಕರ ಎದೆ ಝಲ್‌ ಎನಿಸಿದ ರಾಗಿಣಿ ಕುಣಿತ

ಯುವಕರ ಎದೆ ಝಲ್‌ ಎನಿಸಿದ ರಾಗಿಣಿ ಕುಣಿತ

ಹಲವು ಚಲನಚಿತ ಗೀತೆಗಳನ್ನು ಹಾಡುತ್ತಾ, ನೃತ್ಯ ಮಾಡುತ್ತಾ ಹುಟ್ಟೂರಾದ ಮೈಸೂರಿನ ಅಪಾರ ಕಾಳಜಿ ಮೆರೆದರು. ನಟಿ ರಾಗಿಣಿ ದ್ವಿವೇದಿ ಹಾಗೂ ತಂಡದವರು `ತರ ತರ ಅನ್ನಿಸುತ್ತಿದೆ ನನ್ನಲಿ ಏಕೋ' ಸೇರಿದಂತೆ ಹಾಡಿದ ಕನ್ನಡ ಹಾಗೂ ಹಿಂದಿ ಗೀತೆಗಳ ಮಿಶ್ರಣಕ್ಕೆ ಸಭಿಕರು ಹೆಜ್ಜೆ ಹಾಕಿದರು.

ಮೈಸೂರು ದಸರಾ: ಧೂಳೆಬ್ಬಿಸಿದ ಪೈಲ್ವಾನರು, ಖಾದ್ಯ ಸವಿದ ಪ್ರವಾಸಿಗರು...

ಸಿಎಂ, ಸುಧಾ ಮೂರ್ತಿ ಚಾಲನೆ

ಸಿಎಂ, ಸುಧಾ ಮೂರ್ತಿ ಚಾಲನೆ

ಯುವದಸರಾ ಕಾರ್ಯಕಮಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಚಾಲನೆ ನೀಡಿ ಶುಭಕೋರಿದರು. ಇನ್‍ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ, ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಶಿವಶಂಕರರೆಡ್ಡಿ, ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇನ್ನಷ್ಟು ಮೈಸೂರು ಸುದ್ದಿಗಳುView All

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysuru Dasara 2018 culcutre night inagurated by CM Kumaraswamy and Sudha Murthy. Singer Vijay Prakash light the night with his voice.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more