ಮೈಸೂರು ನಗರಪಾಲಿಕೆ ಬಜೆಟ್ ಮಂಡನೆ: ಇಲ್ಲಿದೆ ವಿಶೇಷ ಘೋಷಣೆಗಳ ಸಂಪೂರ್ಣ ಮಾಹಿತಿ

ಮೈಸೂರು, ಜೂನ್‌ 06: ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನಾಗರಾಜು ಅವರು ಮೈಸೂರು ಮಹಾ ನಗರಪಾಲಿಕೆ 2023-24ನೇ ಸಾಲಿನಲ್ಲಿ 9.0 ಕೋಟಿ ರೂಪಾಯಿ ಉಳಿತಾಯ ಬಜೆಟ್ ಮಂಡಿಸಿದರು. ಕಳೆದ ಸಾಲಿನಲ್ಲಿ 6.11 ಕೋಟಿ ರೂ. ಉಳಿತಾಯ ಬಜೆಟ್ ಮಂಡನೆಯಾಗಿತ್ತು. ಆದರೆ, ಈ ಬಾರಿ ತೆರಿಗೆ ಸಂಗ್ರಹಣೆಯಲ್ಲಿ ಪಾಲಿಕೆ ಮುಂದಿದ್ದು, 9.05 ಕೋಟಿ ರೂ. ಉಳಿತಾಯ ಬಜೆಟ್ ಮಂಡನೆಯಾಗಿದೆ.

ಸಾವಿರ ಕೋಟಿ ರೂಪಾಯಿ ಬಜೆಟ್‌ನಲ್ಲಿ ಮೈಸೂರು ನಗರದ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಈ ಮೂಲಕ ದೇಶದ ಸ್ವಚ್ಛತಾ ನಗರ ಪಟ್ಟಕ್ಕೇರಲು ಬಜೆಟ್‌ನಲ್ಲಿಯೇ ಅನುದಾನ ಮೀಸಲಿರುವ ಪ್ರಯತ್ನ ಮಾಡಿದೆ. ಬಜೆಟ್‌ನ ಬಹುಪಾಲು ಈ ಸ್ವಚ್ಛತಾ ಯೋಜನೆಗಳ ಜಾರಿಗೆ ವಿನಿಯೋಗವಾಗಲಿದೆ ಎಂಬುದೇ ವಿಶೇಷವಾಗಿದೆ.

Mysuru City Corporation Budget 2023-24

ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆ ಸಂಬಂಧ ಆರು ಯೋಜನೆಗಳ ಘೋಷಣೆ, ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ನೀಡಲು 'ಜ್ಞಾನ ಸಿರಿ', ಪ್ರತಿ ವಿಧಾನಸಭಾ ಕ್ಷೇತ್ರವಾರು ಕಿರು ಕ್ರೀಡಾ ಸಂಕೀರ್ಣ ಅಭಿವೃದ್ಧಿ, ಮಹಿಳಾ ಆಟೋ ಚಾಲಕರಿಗೆ ಇ-ಆಟೋ, ಕೆರೆ- ಕಲ್ಯಾಣಿಗಳ ಜೀರ್ಣೋದ್ಧಾರಕ್ಕೆ ಕ್ರಮ ಸೇರಿದಂತೆ ನಗರದ ಮೂಲ ಸೌಕರ್ಯಕ್ಕೆ ಬಜೆಟ್‌ನಲ್ಲಿ ಒತ್ತು ಕೊಡಲಾಗಿದೆ.

ಮುಖ್ಯಮಂತ್ರಿಗಳ ನಗರೋತ್ಥಾನ ಅನುದಾನ, ಎಸ್‌ಎಸಿ ಅನುದಾನವನ್ನು ಮೂರು ಕ್ಷೇತ್ರಗಳಿಗೂ ಹಂಚಿಕೆ ಮಾಡಲಾಗಿದೆ. ಶಾಸಕರು ತಮ್ಮ ಪ್ರಭಾವ ಬೀರಿ ವಿಶೇಷ ಅನುದಾನವನ್ನು ತಂದಿದ್ದಾರೆ. ಅನಾಯ್ಯವಾಗಿದ್ದರೆ ಸಂಬಂಧಿಸಿದ ಶಾಸಕರು ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚಿಸುತ್ತಾರೆ ಎಂದು ಮೇಯರ್ ಶಿವಕುಮಾರ್ ತಿಳಿಸಿದ್ದಾರೆ.

ಮಹಿಳಾ ಚಾಲಕರಿಗೆ ಇ-ಆಟೋ

ಆರ್ಥಿಕವಾಗಿ ಹಿಂದುಳಿದಿರುವ ವೃತ್ತಿಪರ ಜನಾಂಗದವರಿಗೆ ಒಂದು ಬಾರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ, ಬಿಪಿಎಲ್ ಕಾರ್ಡ್ ಹೊಂದಿರುವ ಎಸ್‌ಸಿ ಮತ್ತು ಎಸ್ಟಿ ವರ್ಗ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳಾ ಆಟೋ ಚಾಲಕರಿಗೆ ಇ-ಆಟೋ ನೀಡುವುದು.

Mysuru City Corporation Budget 2023-24

ಗೋಪುರ ಅಭಿವೃದ್ಧಿ: ನಂಜನಗೂಡು ರಸ್ತುಂ ಗನ್ಹೌಸ್ ಸಮೀಪ ಪಾರಂಪರಿಕ ಗೋಪುರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು. ಗ್ರಂಥಾಲುಂ ನಿರ್ವಾಣ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಆಗುವಂತೆ 5 ಭಾಗಗಳಲ್ಲಿ ಹೊಸದಾಗಿ ಗ್ರಂಥಾಲಯ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಉದ್ದೇಶಕ್ಕಾಗಿ 2 ಕೋಟಿ ಕಾಯ್ದಿರಿಸಲಾಗಿದೆ.

ಸಭೆಯಲ್ಲಿ ಶಾಸಕರಾದ ಟಿ.ಎಸ್.ಶ್ರೀವತ್ಸ, ಕೆ. ಹರೀಶ್‌ಗೌಡ, ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಮೇಯರ್ ಶಿವಕುಮಾರ್, ಉಪಮೇಯರ್ ಡಾ.ರೂಪಾ, ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ ಉಪಸ್ಥಿತರಿದ್ದರು.

ಬಜೆಟ್ ಪ್ರಮುಖ ಘೋಷಣೆಗಳು:

1.ಬೋಗಾದಿ, ಹಿನಕಲ್ ಕೆರೆಯ ಅಭಿವೃದ್ಧಿಯೊಂದಿಗೆ ಸರಸ್ವತಿಪುರಂ, ನಂಜನಗೂಡು ರಸ್ತೆಯ ಆರ್‌ಎಂಸಿ ಯಾರ್ಡ್ ಬಳಿಯ ಕಲ್ಯಾಣಿಗಳ ಜೀರ್ಣೋದ್ಧಾರಕ್ಕೆ ಯೋಜನೆ.

2. ನಗರದ ನಿಜಲಿಂಗಪ್ಪ ವೃತ್ತ, ಅಶೋಕ ವೃತ್ತ, ಅಗ್ರಹಾರ ವೃತ್ತ, ವಾಲ್ಮೀಕಿ ರಸ್ತೆ ವೃತ್ತ, ಹೆಬ್ಬಾಳ್ ವೃತ್ತ, ಮಿಲೇನಿಯಂ ವೃತ್ತ, ೌಂಟೇನ್ ವೃತ್ತ, ಶಾರದಾದೇವಿ ನಗರ ವೃತ್ತಗಳ ಅಭಿವೃದ್ಧಿ.

3. ನಂಜನಗೂಡು ರಸ್ತೆಯ ಹೆದ್ದಾರಿಯಲ್ಲಿ ಪಾರಂಪರಿಕ ಗೋಪುರ ನಿರ್ಮಾಣ.

4. ಪ್ರತಿ ವಿಧಾನಸಭಾ ಕ್ಷೇತ್ರವಾರು ಕಿರು ಕ್ರೀಡಾ ಸಂಕೀರ್ಣ ಅಭಿವೃದ್ಧಿ ಮತ್ತು ಕುಂಬಾರ ಕೊಪ್ಪಲಿನ ಕೆಂಪೇಗೌಡ ಕ್ರೀಡಾಂಗಣ ಸಮಗ್ರ ಅಭಿವೃದ್ಧಿ.

5. ನಗರದ ಕೆಲವೆಡೆ ಗ್ರಂಥಾಲಯ ನಿರ್ಮಾಣಕ್ಕೆ 2 ಕೋಟಿ ರೂ. ಮೀಸಲು.

6. ಸುಬ್ಬರಾಯನ ಕೆರೆಯ ಉದ್ಯಾನದಲ್ಲಿ ನವೀನ ಮಾದರಿಯಲ್ಲಿ ಈಜು ಕೊಳ ನಿರ್ಮಾಣ.

7. 2ನೇ ಹಂತದ ಕಬಿನಿ ನೀರು ಸರಬರಾಜು ಯೋಜನೆಯ ಉನ್ನತೀಕರಣ. ಇದರಿಂದ ಯೋಜನೆಯಡಿ 60 ಎಂಎಲ್‌ಡಿ ನೀರು ಪೂರೈಕೆಯನ್ನು 110 ಎಂಎಲ್‌ಡಿಗೆ ಹೆಚ್ಚಳ ಮಾಡಲಾಗುತ್ತದೆ.

8. ಪಾಲಿಕೆಯ ನಾನಾ ವಾರ್ಡ್‌ಗಳಲ್ಲಿ ಪೌರ ಕಾರ್ಮಿಕರ ವಿಶ್ರಾಂತಿ ಕೊಠಡಿ ನಿರ್ಮಾಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+