ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಠ್ಯಪುಸ್ತಕದ ಮಾಹಿತಿ ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ

By Yashaswini
|
Google Oneindia Kannada News

ಮೈಸೂರು, ಜುಲೈ 26: ಶಿಕ್ಷಣ ಇಲಾಖೆಯಿಂದ ಹೊರತಂದಿರುವ ಎರಡನೇ ತರಗತಿಯ ಪಠ್ಯಪುಸ್ತಕದ ಅಧ್ಯಾಯ 16ರಲ್ಲಿ ಕಾವೇರಿ ಎಂಬ ಗದ್ಯದಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟನ್ನು ವಿಶ್ವೇಶ್ವರಯ್ಯ ನಿರ್ಮಿಸಿದ್ದಾರೆಂದು ತಪ್ಪು ಮಾಹಿತಿಯನ್ನು ಕೂಡಲೇ ಸರಿಪಡಿಸುವಂತೆ ಒತ್ತಾಯಿಸಿ ಬಹುಜನ ವಿದ್ಯಾರ್ಥಿ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಕೆಆರ್ ಎಸ್ ನಿರ್ಮಿಸಿದ್ದು ಸರ್ ಎಂವಿ? ಎರಡನೇ ತರಗತಿ ಪಠ್ಯದಲ್ಲಿ ಲೋಪ!ಕೆಆರ್ ಎಸ್ ನಿರ್ಮಿಸಿದ್ದು ಸರ್ ಎಂವಿ? ಎರಡನೇ ತರಗತಿ ಪಠ್ಯದಲ್ಲಿ ಲೋಪ!

ಮೈಸೂರು ವಿಶ್ವವಿದ್ಯಾಲಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿಯ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು , ಪಠ್ಯಪುಸ್ತಕದಲ್ಲಿ ತಪ್ಪು ಮಾಹಿತಿ ಮುದ್ರಿಸಲಾಗಿದೆ. ಇದರಿಂದ ಮಕ್ಕಳು ತಿಳಿದುಕೊಳ್ಳುವುದಾದರೂ ಹೇಗೆ, ಮಕ್ಕಳಿಗೆ ತಪ್ಪು ಪಾಠದ ಮೂಲಕ ತಪ್ಪು ಮಾಹಿತಿ ನೀಡಲಾಗುತ್ತಿದೆ. ಈ ಪಠ್ಯಪುಸ್ತಕವನ್ನು ಸರ್ಕಾರ ಕೂಡಲೇ ವಾಪಸ್ಸು ಪಡೆದು ಸರಿಯಾದ ಮಾಹಿತಿಯನ್ನು ಮುದ್ರಿಸಿ ಎಲ್ಲಾ ಶಾಲೆಗಳಿಗೂ ಪೂರೈಸಬೇಕು ಎಂದು ಒತ್ತಾಯಿಸಿದರು.

Mysuru BSP activists protested against mistakes in text books
English summary
Bahujana Samajwadi Party activists protested against mistakes in text books. The protest took place infront of statue of Krishnaraja wodeyara-4, at Mysuru university campus on July 26th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X