ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ರಾಹ್ಮಣ ಸಮಾವೇಶಕ್ಕೆ ಬ್ರಾಹ್ಮಣರಿಂದಲೇ ಶುರುವಾಯ್ತು ವಿರೋಧ !

By Yashaswini
|
Google Oneindia Kannada News

ಮೈಸೂರು, ಫೆಬ್ರವರಿ 24 : ಬೆಂಗಳೂರಿನಲ್ಲಿ ಇಂದಿನಿಂದ(ಫೆ. 24) ಎರಡು ದಿನಗಳ ಕಾಲ ನಡೆಯುತ್ತಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಏರ್ಪಡಿಸಿರುವ ರಾಜ್ಯ ಮಟ್ಟದ ಬ್ರಾಹ್ಮಣ ಸಮಾವೇಶವನ್ನು ಮೈಸೂರು ಜಿಲ್ಲಾ ಬ್ರಾಹ್ಮಣ ಮಹಾಸಭಾ ಬಹಿಷ್ಕರಿಸಿದೆ

ಮಹಾಸಭಾದ ಸಭಾಪತಿ ಕೆ.ರಘುರಾಂ ಮಾತನಾಡಿ, ಇದೊಂದು ರಾಜಕೀಯ ಪ್ರೇರಿತ ಸಮಾವೇಶ. ಹಿರಿಯ ಬ್ರಾಹ್ಮಣ ಸಂಘಟಕರು, ಮೈಸೂರಿನಲ್ಲಿ ಸಮುದಾಯವನ್ನು ಸಂಘಟಿಸಿ ಸಂಪನ್ಮೂಲ ಒದಗಿಸಿದವರು ಸೇರಿದಂತೆ ಮಹಾಸಭಾಕ್ಕೆ ಜಿಲ್ಲಾ ಸಂಘಟನೆಯನ್ನು ಕಡೆಗಣಿಸಿರುವ ಹಿನ್ನೆಲೆಯಲ್ಲಿ ಸಮಾವೇಶವನ್ನು ಬಹಿಷ್ಕರಿಸಲಾಗಿದೆ ಎಂದರು.

ಇದೊಂದು ರಾಜಕೀಯ ಪ್ರೇರಿತ ಸಮಾವೇಶ
ಇದೊಂದು ಬ್ರಾಹ್ಮಣ ಸಮಾವೇಶವಲ್ಲ, ರಾಜಕೀಯ ಸಮಾವೇಶವಾಗಿದೆ. ಮಹಾಸಭಾದ ರಾಜ್ಯಾಧ್ಯಕ್ಷ ವೆಂಕಟನಾರಾಯಣ್ ಸರ್ವಾಧಿಕಾರಿ ಧೋರಣೆ ತಳೆದಿದ್ದು, ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಯಾವುದೇ ಮುಖಂಡರನ್ನು ಆಹ್ವಾನಿಸಿ ಮಾರ್ಗದರ್ಶನ ಪಡೆದಿಲ್ಲ. ಇದೊಂದು ಕೇವಲ ರಾಜಕೀಯ ಪ್ರೇರಿತ ಸಮಾವೇಶ. ಚುನಾವಣೆ ಹಿನ್ನೆಲೆಯಲ್ಲಿ ರಾಜಕಾರಣಿಗಳು ನಡೆಸುತ್ತಿರುವ ಬೃಹತ್ ಸಭೆ ಅಷ್ಟೇ ಎಂದರು.

Mysuru Brahmin Mahasaba boycotts conference at Bengaluru

ವೆಂಕಟನಾರಾಯಣ ಸೇರಿದಂತೆ ಹಲವು ಪದಾಧಿಕಾರಿಗಳ ಮೇಲೆ ಹಣ ದುರುಪಯೋಗಪಡಿಸಿದ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿದ್ದು, ಅವರ ನೇತೃತ್ವದಲ್ಲಿ ಆಯೋಜಿಸಿರುವ ಸಮಾವೇಶವು ರಾಜಕಾರಣಿಗಳ ಪ್ರಭಾವಿಗಳ ಸಮಾವೇಶ. ಇದಕ್ಕೂ ಜಿಲ್ಲಾ ಬ್ರಾಹ್ಮಣ ಮಹಾಸಭಾಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದರು.

ಪುಗಸಟ್ಟೆ ಊಟ ನಮಗೆ ಬೇಡ
ಇನ್ನು ಸಮಾವೇಶದಲ್ಲಿ ಪಾಲ್ಗೊಳ್ಳುವವರಿಗೆ ಉಚಿತ ವಾಹನ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಎಚ್ ವಿ ರಾಜೀವ್ ನೀಡಿರುವ ಹೇಳಿಕೆಯನ್ನು ಜಿಲ್ಲಾಧ್ಯಕ್ಷ ನಟರಾಜ್ ಜೋಯಿಸ್ ತೀವ್ರವಾಗಿ ಖಂಡಿಸಿದ್ದಾರೆ. ನಿಮ್ಮ ಪುಗಸಟ್ಟೆ ಊಟ ಮಾಡಲು ಯಾರು ಸಮಾವೇಶಕ್ಕೆ ಬರುವುದಿಲ್ಲ. ಸಮಾಜದ ಬಗ್ಗೆ ನಿಜವಾದ ಕಾಳಜಿ ಇದ್ದರೆ ಅದೇ ಹಣವನ್ನು ಬಡ ಮಕ್ಕಳ ಶಾಲಾ ಶುಲ್ಕ ಧರಿಸುವುದಕ್ಕೆ ಬಳಸಿ ಎಂದು ಕಿವಿಮಾತು ಹೇಳಿದರು.

English summary
2 days State level Brahmin conference will be taking place in Bengaluru from 24th Feb. But Mysuru district Brahmin Mahasabha boycott the conference. 'We don't want politis in conference' the give the reason
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X