ಪ್ರಧಾನಿ ಮೋದಿಗೆ ಉಡುಗೊರೆ ನೀಡಲು ಮೈಸೂರು ಬಿಜೆಪಿ ಘಟಕ ರೆಡಿ

Recommended Video

      ಪ್ರಧಾನಿ ಮೋದಿಗೆ ಉಡುಗೊರೆ ನೀಡಲು ಮೈಸೂರು ಬಿಜೆಪಿ ಘಟಕ ರೆಡಿ | Oneindia Kannada

      ಮೈಸೂರು, ಏಪ್ರಿಲ್ 9:ಲೋಕಸಭೆ ಚುನಾವಣೆಯ ಪೂರ್ವಭಾವಿಯಾಗಿ ಮೈಸೂರಿಗೆ ಬಿಜೆಪಿ ನಾಯಕ ಪ್ರಧಾನಿ ಮೋದಿ ಆಗಮಿಸಿ ಪ್ರಚಾರ ನಡೆಸಲಿದ್ದು, ಸಕಲ ಸಿದ್ಧತೆಗಳೊಂದಿಗೆ ಮೈಸೂರು ಸಜ್ಜಾಗಿದೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಗೆ ಶಾಸಕ ಎಸ್.ಎ ರಾಮದಾಸ್ ವಿಶೇಷ ಉಡುಗೊರೆಯೊಂದನ್ನು ನೀಡಲು ಸಜ್ಜಾಗಿದ್ದಾರೆ. ಸಿಂಹವಾಹಿನಿ ಚಾಮುಂಡೇಶ್ವರಿ ಬೆಳ್ಳಿ ವಿಗ್ರಹವನ್ನು ವಿಶೇಷ ಉಡುಗೊರೆಯಾಗಿ ನೀಡಲಿದ್ದಾರೆ.

      ಮೋದಿ ಭಾವಚಿತ್ರ, ಮೋದಿ ರಚಿತ ಸಾಕ್ಷಿ ಭಾವ ಕವನ ಸಂಕಲನದ ಕನ್ನಡ ಅನುವಾದದ ಪ್ರತಿಯನ್ನೂ ಸಹ ನೀಡಲಿದ್ದಾರೆ. ಪ್ರಧಾನಿಗೆ ವಿಶೇಷ ಏಲಕ್ಕಿ ಹಾರ, ರೇಷ್ಮೆ ಶಲ್ಯ ಹೊದಿಸಿ ಸನ್ಮಾನಿಸಲಿದ್ದಾರೆ.

      Mysuru BJP leaders are planning to give a special gift to PM Narendra modi

      ಈ ಬಗ್ಗೆ ಮಾತನಾಡಿದ ರಾಮದಾಸ್, ಪ್ರಧಾನಿ ಮೋದಿ ದುರ್ಗಾದೇವಿ ಆರಾಧಕರು. ಜೊತೆಗೆ ಚಾಮುಂಡೇಶ್ವರಿ ಅಂದರೂ ವಿಶೇಷ ಭಕ್ತಿ. ಹೀಗಾಗಿ ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿ ಅವರಿಗೆ ಪ್ರಸಾದ ನೀಡಲಾಗುತ್ತದೆ. ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಮೋದಿ ಪ್ರಸಾದ ಯೋಜನೆ ಅಡಿ 100 ಕೋಟಿ ಅನುದಾನ ನೀಡಿದ್ದಾರೆ. ಅವರಿಗೆ ಉಪಯೋಗವಾಗುವ ವಸ್ತುವನ್ನು ನೀಡುತ್ತಿದ್ದೇವೆ. ಅವರಿಗೆ ಈ ಎಲ್ಲಾ ಉಡುಗೊರೆ ಅರ್ಪಿಸಲಾಗುವುದು. ನಮ್ಮ ಮನೆ ಮಗ ಬಂದಂತೆ ಅನಿಸುತ್ತಿದೆ. ಲಕ್ಷಾಂತರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

      Mysuru BJP leaders are planning to give a special gift to PM Narendra modi

      ಪೆನ್ಸಿಲ್ ಲೆಡ್ ನಲ್ಲಿ ಮೋದಿ ಭಾವಚಿತ್ರ

      ಪ್ರಧಾನಿ ಮೋದಿ ಮೇಲಿನ ಅಭಿಮಾನಕ್ಕೆ ತಿಲಕ್ ನಗರದ ನಂಜುಂಡ ಎಂಬ ಕಲಾವಿದ ಪೆನ್ಸಿಲ್ ಲೆಡ್ ನಲ್ಲಿ ಮೋದಿಯ ಚಹರೆಯನ್ನ ರೂಪಿಸಿ ಗಮನ ಸೆಳೆದಿದ್ದಾರೆ.

      ಸುಮಾರು ಎರಡೂವರೆ ಗಂಟೆ ಸಮಯ ತೆಗೆದುಕೊಂಡು ಮೋದಿಯ ಕಲಾಕೃತಿ ರೂಪಿಸಿದ್ದಾರೆ. ಮೆಚ್ಚಿನ ಪ್ರಧಾನಿಗೆ ಕಲಾಕೃತಿಯನ್ನು ಸಲ್ಲಿಸಲು ಕಲಾವಿದ ನಂಜುಂಡ ಕಾತುರದಿಂದ ಕಾಯುತ್ತಿದ್ದಾರೆ. ಇಂದು ಮೈಸೂರಿಗೆ ಆಗಮಿಸಲಿರುವ ಮೋದಿಯವರಿಗೆ ಕಲಾಕೃತಿ ತಲುಪಿಸಲು ನಂಜುಂಡ ಅವರು ಶಾಸಕರ ಸಹಕಾರ ಕೋರಿದ್ದು, ಮೋದಿ ಕೈಗೆ ತಲುಪಬೇಕಿದ್ದಲ್ಲಿ ಸಾಕಷ್ಟು ನಿಯಮಗಳನ್ನ ಪಾಲಿಸಬೇಕಿದ್ದು, ತನಗೆ ಸಹಕರಿಸುವಂತೆ ಶಾಸಕ ರಾಮದಾಸ್ ರವರ ಕೈಗೆ ಕಲಾಕೃತಿ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+