ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯೋಗ ದಿನ: ರಾಜ್ ಪಥ್ ಹಿಂದಿಕ್ಕಿ ಗಿನ್ನಿಸ್ ದಾಖಲೆ ಬರೆದ ಮೈಸೂರು

By Yashaswini
|
Google Oneindia Kannada News

ಮೈಸೂರು, ಜೂನ್ 21 : 3ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ನಗರಿಯಲ್ಲಿ ಏಕಕಾಲದಲ್ಲಿ 50 ಸಾವಿರ ಜನರು ಯೋಗಾಸನ ಮಾಡಿದ್ದಾರೆ. ಈ ಮೂಲಕ ಮೈಸೂರು ವಿಶ್ವ ದಾಖಲೆ ಬರೆಯುವ ಸನ್ನಾಹದಲ್ಲಿದೆ.

ಗಿನ್ನಿಸ್ ದಾಖಲೆಗಾಗಿ ಮೈಸೂರಿನಲ್ಲಿ ನಡೆದ ಯೋಗ ಪ್ರದರ್ಶನವೂ ಗಿನ್ನಿಸ್ ಪುಸ್ತಕ ಸೇರುವತ್ತ ಧಾಪುಗಾಲಿಟ್ಟಿದೆ. ಮೈಸೂರಿನ ರೇಸ್ ಕೋರ್ಸ್ ಆವರಣದಲ್ಲಿ ಇಂದು ನಡೆದ ಯೋಗ ಪ್ರದರ್ಶನಲ್ಲಿ 54,101 ಯೋಗ ಪಟುಗಳು ಭಾಗವಹಿಸಿದ್ದರು.

ಯೋಗದ ಬಗ್ಗೆ ಕವಿತೆ ರಚಿಸಿದ ಪೊಲೀಸ್ ಗೆ ಮೋದಿ ಬಹುಪರಾಕ್!ಯೋಗದ ಬಗ್ಗೆ ಕವಿತೆ ರಚಿಸಿದ ಪೊಲೀಸ್ ಗೆ ಮೋದಿ ಬಹುಪರಾಕ್!

ಈ ಹಿಂದೆ ದೆಹಲಿಯ ರಾಜ್ ಪಥ್ ನಲ್ಲಿ 33,900 ಸಾವಿರ ಮಂದಿ ಯೋಗ ಮಾಡಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದರು. ಆ ದಾಖಲೆ ಅಳಿಸಲು ಮೈಸೂರಿನಲ್ಲಿ ನಡೆಸಿದ ಪ್ರಯತ್ನ ಬಹುತೇಕ ಯಶ ಕಂಡಿದೆ. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಯೋಗ ಪಟುಗಳಿಂದ ಯೋಗದ ಹಲವು ಭಂಗಿಗಳ ಪ್ರದರ್ಶನ ಈ ಸಂದರ್ಭದಲ್ಲಿ ನಡೆಯಿತು.

ಮಗುವಿಗಿಂತ ದೊಡ್ಡ ಯೋಗ ಶಿಕ್ಷಕ ಮತ್ತೊಬ್ಬರಿಲ್ಲಮಗುವಿಗಿಂತ ದೊಡ್ಡ ಯೋಗ ಶಿಕ್ಷಕ ಮತ್ತೊಬ್ಬರಿಲ್ಲ

ಚಿತ್ರ ಕೃಪೆ: ನಂದನ್ ಎ

 ಯೋಗದ ದಾಖಲೆಯ ವೇದಿಕೆ

ಯೋಗದ ದಾಖಲೆಯ ವೇದಿಕೆ

ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ರೇಸ್ ಕೋರ್ಸ್ನ 139.30 ಎಕರೆ ಪ್ರದೇಶದಲ್ಲಿ ಆಯೋಜಿಸಿದ್ದ ಸಾಮೂಹಿಕ ಯೋಗ ಪ್ರದರ್ಶನಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಡೋಲು ಬಾರಿಸುವ ಮೂಲಕ ಚಾಲನೆ ನೀಡಿದರು. ಗಿನ್ನಿಸ್ ದಾಖಲೆಯನ್ನು ನಿರ್ಮಿಸುವ ಜಿಲ್ಲಾಡಳಿತದ ಆಶಯಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

 ಚಳಿಯನ್ನು ಲೆಕ್ಕಿಸದೇ ಆಗಮಿಸಿದ ಯೋಗಪಟುಗಳು

ಚಳಿಯನ್ನು ಲೆಕ್ಕಿಸದೇ ಆಗಮಿಸಿದ ಯೋಗಪಟುಗಳು

ಬೆಳಗಿನ ಚುಮುಚುಮು ಚಳಿಯ ನಡುವೆ, ಹಕ್ಕಿಗಳ ಕಲರವದ ನಡುವೆ ಚಾಮುಂಡಿ ಬೆಟ್ಟದ ಎದುರಿನಲ್ಲಿರುವ ಮೈಸೂರಿನ ರೇಸ್ ಕೋರ್ಸ್ ಆವರಣಕ್ಕೆ 5.30ರ ಸುಮಾರಿನಿಂದಲೇ ಯೋಗಪಟುಗಳು ಆಗಮಿಸಲು ಆರಂಭಿಸಿದರು. ಮೈದಾನಕ್ಕೆ ಕರೆತರಲು ಬಸ್ ವ್ಯವಸ್ಥೆ ಮಾಡಲಾಗಿತ್ತು. ಮೈದಾನದ 7 ಪ್ರವೇಶ ದ್ವಾರಗಳಲ್ಲಿ ಬಾರ್ ಕೋಡ್ ಇರುವ ಉಚಿತ ಟಿಕೆಟ್ ನೀಡಿ ನಂತರ ಕೌಂಟರ್ ಗಳಲ್ಲಿ ಟಿಕೆಟ್ ಗಳನ್ನು ವಾಪಸ್ ಪಡೆದು ಒಳಬಿಡಲಾಯಿತು. ಮೊದಲೇ ಸೂಚಿಸಿದಂತೆ ಯೋಗಪಟುಗಳೇ ಮ್ಯಾಟ್ ತಂದಿದ್ದರು. ತಮಗೆ ಸೂಚಿಸಿದ ಸ್ಥಳದಲ್ಲಿ ಕುಳಿತು ಯೋಗಾಭ್ಯಾಸ ಮಾಡಲು ಸಿದ್ಧರಾದರು.

 ದೆಹಲಿಯ ದಾಖಲೆಯನ್ನು ಹಿಂದಿಕ್ಕಿದ ಯೋಗ ಪ್ರದರ್ಶನ

ದೆಹಲಿಯ ದಾಖಲೆಯನ್ನು ಹಿಂದಿಕ್ಕಿದ ಯೋಗ ಪ್ರದರ್ಶನ

ದೆಹಲಿಯ ರಾಜ್ ಪಥ್ ನಲ್ಲಿ 33,900 ಸಾವಿರ ಮಂದಿ ಯೋಗ ಮಾಡಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದರು. ಆ ದಾಖಲೆ ಅಳಿಸಲು ಮೈಸೂರಿನಲ್ಲಿ ಪ್ರಯತ್ನ ನಡೆಸಲಾಗಿದ್ದು ದಾಖಲೆ ಮಾಡುವ ನಿರೀಕ್ಷೆಯಿದೆ.

ಗಿನ್ನಿಸ್ ಅಧಿಕಾರಿಗಳಿಂದ ಪರಿಶೀಲನೆ

ಗಿನ್ನಿಸ್ ಅಧಿಕಾರಿಗಳಿಂದ ಪರಿಶೀಲನೆ

ಗಿನ್ನಿಸ್ ಸಂಸ್ಥೆಯ ಪ್ರತಿನಿಧಿಗಳು ಭಾಗಿಯಾಗಿ ಹೊಸ ದಾಖಲೆಯ ಪರಿಶೀಲನೆ ನಡೆಸಿದರು. ಗಿನ್ನಿಸ್ ಸಂಸ್ಥೆಯ ಪ್ರತಿನಿಧಿಗಳಾಗಿ ಆರ್.ಬಿ.ಐ ಜನರಲ್ ಮ್ಯಾನೇಜರ್ ಹೆಚ್.ಎಸ್.ಠಾಕೋರ್ ದೇಸಾಯಿ, ನಿವೃತ್ತ ಐಎಫ್ಎಸ್ ಅಧಿಕಾರಿ ಎ.ಸಿ.ಲಕ್ಷಣ್, ಕುಮಾರ್ ಪಾಲ್ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದರು.

ವಿವಿಧ ಭಂಗಿಗಳ ಪ್ರದರ್ಶನ

ವಿವಿಧ ಭಂಗಿಗಳ ಪ್ರದರ್ಶನ

ಯೋಗಾಭ್ಯಾಸದ ಆರಂಭದಲ್ಲಿ ಒಂದು ನಿಮಿಷ ಪ್ರಾರ್ಥನೆ ಸಲ್ಲಿಸಿ ಬಳಿಕ ಸಮಸ್ಥಿತಿಗೆ ಬಂದು ಕುತ್ತಿಗೆ ಹಿಂದೆ, ಮುಂದು, ಎಡ ಬಲಕ್ಕೆ ತಿರುಗಿಸಿ ಕುತ್ತಿಗೆಯನ್ನು ವೃತ್ತಾಕಾರವಾಗಿ ತಿರುಗಿಸುವುದು, ಭುಜದ ವ್ಯಾಯಾಮ, ಸೊಂಟದ ವ್ಯಾಯಾಮ, ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋಣಾಸನ, ಸಮ ದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಸೇರಿದಂತೆ ವಿವಿಧ ಆಸನಗಳನ್ನು ಮಾಡಿದ ಬಳಿಕ ಶೀತಲೀ ಪ್ರಾಣಾಯಾಮ, ಭ್ರಾಮರೀ ಪ್ರಾಣಾಯಾಮ, ಧ್ಯಾನ ಹಾಗೂ ಶಾಂತಿ ಮಂತ್ರದೊಂದಿಗೆ ಯೋಗಾಭ್ಯಾಸ ಮುಕ್ತಾಯವಾಯಿತು.

ಡ್ರೋನ್ ಕ್ಯಾಮೆರಾ ಬಳಸಿ ಚಿತ್ರೀಕರಣ

ಡ್ರೋನ್ ಕ್ಯಾಮೆರಾ ಬಳಸಿ ಚಿತ್ರೀಕರಣ

ಇಂದು ನಡೆದ ಯೋಗ ದಿನದ ಕಾರ್ಯಕ್ರಮಗಳನ್ನು ಎರಡು ಬೃಹತ್ ಕ್ರೇನ್ ಕ್ಯಾಮಾರಾ, ಎರಡು ಡ್ರೋನ್ ಕ್ಯಾಮಾರಗಳನ್ನ ಬಳಸಿ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಇಡೀ ಯೋಗ ಪ್ರದರ್ಶನದ ಸಂಪೂರ್ಣ ವಿಡಿಯೋ ಹಾಗೂ ಟಿಕೆಟ್ ಮಾಹಿತಿಯನ್ನು ಗಿನ್ನಿಸ್ ವರ್ಡ್ ರೇಕಾರ್ಟ್ ಸಂಸ್ಥೆಗೆ ರವಾನಿಸಲಾಗುತ್ತದೆ.

ಇನ್ನು 2014ರಲ್ಲಿ ತಮಿಳನಾಡಿನ ಪೆರಂಬೂರಿನ ವಿದ್ಯಾಶಾಲಾದ 3800 ವಿದ್ಯಾರ್ಥಿಗಳು ಚೈನ್ ಲಿಂಕ್ ಯೋಗದ ವಿಶ್ವದಾಖಲೆ ನಿರ್ಮಿಸಿದ್ದರು. ಆ ದಾಖಲೆಯನ್ನೂ ಮುರಿಯಲು ಮೈಸೂರು ನಗರದ ವಿದ್ಯಾರ್ಥಿಗಳು ಪ್ರಯತ್ನಪಟ್ಟಿದ್ದಾರೆ.

ವೇದಿಕೆಯಲ್ಲಿ ವಿಶೇಷ ಆಹ್ವಾನಿತರು

ವೇದಿಕೆಯಲ್ಲಿ ವಿಶೇಷ ಆಹ್ವಾನಿತರು

ಮೈಸೂರು ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ, ಸಂಸದ ಪ್ರತಾಪ್ ಸಿಂಹ, ಸಂಸದರ ಪತ್ನಿ ಅರ್ಪಿತ, ಜಿಲ್ಲಾಧಿಕಾರಿ ಡಿ.ರಂದೀಪ್, ಮೇಯರ್ ಎಂ.ಜೆ.ರವಿಕುಮಾರ್, ಶಾಸಕ ಎಂ.ಕೆ.ಸೋಮಶೇಖರ್ ಸೇರಿದಂತೆ ಹಲವರು ಈ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡರು.

600 ಮಂದಿ ಪೊಲೀಸರಿಂದ ಭದ್ರತೆ

600 ಮಂದಿ ಪೊಲೀಸರಿಂದ ಭದ್ರತೆ

ಯೋಗ ಪ್ರದರ್ಶನದ ಮೂಲಕ ಗಿನ್ನಿಸ್ ದಾಖಲೆ ಪ್ರಯತ್ನ ಇದ್ದಾಗಿದ್ದರಿಂದ ನಿರೀಕ್ಷೆಗೂ ಮೀರಿದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹೀಗಿದ್ದೂ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬ ಕಾರಣಕ್ಕೆ 600 ಮಂದಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಕಾರ್ಯಕ್ರಮದ ನಂತರ ಯೋಗಪಟುಗಳು ಪ್ರಮಾಣ ಪತ್ರ ಪಡೆದುಕೊಳ್ಳಲು ಸ್ಥಳದಲ್ಲೇ ವ್ಯವಸ್ಥೆ ಮಾಡಲಾಗಿತ್ತು.

ಅಚ್ಚುಕಟ್ಟಾದ ವ್ಯವಸ್ಥೆ

ಅಚ್ಚುಕಟ್ಟಾದ ವ್ಯವಸ್ಥೆ

ಇನ್ನು ಕಾರ್ಯಕ್ರಮದ ನಿರ್ವಹಣೆಯಲ್ಲಿ ಸ್ಟೀವರ್ಡ್ -1258, ಸ್ವಯಂಸೇವಕರು -2000, ಯೋಗ ತರಬೇತಿದಾರರು- 170 ಜನ ಕಾರ್ಯನಿರ್ವಹಿಸಿದರು. ಇದಲ್ಲದೆ, ಕುಡಿಯುವ ನೀರಿನ ವ್ಯವಸ್ಥೆ, ಅಂಬ್ಯುಲೆನ್ಸ್ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ಒಟ್ಟಾರೆ ಜಿಲ್ಲಾಡಳಿತದ ಈ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಗಿನ್ನಿಸ್ ಪುಟದಲ್ಲಿ ಮೈಸೂರಿನ ಹೆಸರು ಸೇರಲಿ ಎಂಬುದು ಎಲ್ಲರ ಆಶಯವಾಗಿದೆ.

English summary
Mysuru successfully created a Guinness record on International Yoga day, June 21. The cultural capital of Karnataka hosted a mega mass Yoga event in which more than 50,000 people participated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X