ಮೈಸೂರು ಜಿಲ್ಲೆಯ 11 ಕ್ಷೇತ್ರಗಳ ಫಲಿತಾಂಶ ಹೀಗಿದೆ, ಯಾರಿಗೆ ಮೈಲುಗೈ?, ಇಲ್ಲಿದೆ ವಿವರ
ಮೈಸೂರು, ಮೇ, 13: ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ 8 ಕ್ಷೇತ್ರಗಳನ್ನು ಕಾಂಗ್ರೆಸ್ ವಶಪಡಿಸಿಕೊಂಡಿದೆ. ಇನ್ನು 2 ಕ್ಷೇತ್ರಗಳಲ್ಲಿ ಕಾಂಗ್ರೆಸ್, 1 ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಜಯಭೇರಿ ಬಾರಿಸಿದೆ.
ಚಾಮರಾಜ, ಪಿರಿಯಾಪಟ್ಟಣ, ಕೆ.ಆರ್ ನಗರ, ಟಿ.ನರಸೀಪುರ, ನರಸಿಂಹರಾಜ, ನಂಜನಗೂಡು, ಎಚ್.ಡಿ ಕೋಟೆ, ವರುಣ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇನ್ನು ಚಾಮುಂಡೇಶ್ವರಿ, ಹುಣಸೂರು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವಿನ ನಗೆ ಬೀರಿದ್ದರೆ, ಕೃಷ್ಣರಾಜ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆಲುವು ಕಂಡಿದೆ.

ಹರೀಶ್ ಗೌಡ, ತನ್ವೀರ್ ಸೇಠ್, ಕೆ.ವೆಂಕಟೇಶ್, ಡಾ.ಎಚ್.ಸಿ ಮಹದೇವಪ್ಪ, ದರ್ಶನ್ ಧ್ರುವನಾರಾಯಣ, ಅನಿಲ್ ಚಿಕ್ಕಮಾದು, ಡಿ.ರವಿ ಶಂಕರ್, ಸಿದ್ದರಾಮಯ್ಯ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ. ಹಾಗೆಯ ಕೃಷ್ಣರಾಜದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಗೆಲುವು ಸಾಧಿಸಿದ್ದರೆ, ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್ ಗೌಡ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರು ಗೆಲುವು ಸಾಧಿಸಿದ್ದಾರೆ.
ಕ್ಷೇತ್ರವಾರು ಗೆಲುವು ಸಾಧಿಸಿದ ಅಭ್ಯರ್ಥಿಗಳ ವಿವರ:
1. ಕೃಷ್ಣರಾಜ: ಶ್ರೀವತ್ಸ, ಬಿಜೆಪಿ - 73,670 ಮತಗಳು
2. ಚಾಮರಾಜ: ಹರೀಶ್ ಗೌಡ, ಕಾಂಗ್ರೆಸ್- 72,931 ಮತಗಳು
3. ನರಸಿಂಹರಾಜ: ತನ್ವೀರ್ ಸೇಠ್, ಕಾಂಗ್ರೆಸ್ - 71,862 ಮತಗಳು
4. ಚಾಮುಂಡೇಶ್ವರಿ: ಜಿ.ಟಿ ದೇವೇಗೌಡ, ಜೆಡಿಎಸ್- 1,34,035 ಮತಗಳು
5. ಪಿರಿಯಾಪಟ್ಟಣ: ಕೆ.ವೆಂಕಟೇಶ್, ಕಾಂಗ್ರೆಸ್- 85,289 ಮತಗಳು
6 ಟಿ.ನರಸೀಪುರ: ಡಾ.ಎಚ್.ಸಿ ಮಹದೇವಪ್ಪ, ಕಾಂಗ್ರೆಸ್- 77,884 ಮತಗಳು
7) ನಂಜನಗೂಡು: ದರ್ಶನ್ ಧ್ರುವನಾರಾಯಣ, ಕಾಂಗ್ರೆಸ್-
8) ಎಚ್.ಡಿ ಕೋಟೆ: ಅನಿಲ್ ಚಿಕ್ಕಮಾದು, ಕಾಂಗ್ರೆಸ್- 84,359 ಮತಗಳು
9) ಕೆ.ಆರ್ ನಗರ: ಡಿ.ರವಿ ಶಂಕರ್, ಕಾಂಗ್ರೆಸ್ - 97,704 ಮತಗಳು
10) ವರುಣ: ಸಿದ್ದರಾಮಯ್ಯ, ಕಾಂಗ್ರೆಸ್- 1,16,856 ಮತಗಳು
11) ಹುಣಸೂರು : ಜಿ.ಡಿ ಹರೀಶ್ ಗೌಡ, ಜೆಡಿಎಸ್- 94,666 ಮತಗಳು
ಮೈಸೂರು ಜಿಲ್ಲೆಯ 11 ಕ್ಷೇತ್ರಗಳ ಫಲಿತಾಂಶ:
ಕಾಂಗ್ರೆಸ್: 8
ಜೆಡಿಎಸ್: 2
ಬಿಜೆಪಿ: 1












Click it and Unblock the Notifications