ಮೈಸೂರು ಏರ್‌ಪೋರ್ಟ್ ರನ್‌ವೇ ವಿಸ್ತರಣೆ ಯಾವಾಗ..?: ಇಲ್ಲಿದೆ ಸಂಪೂರ್ಣ ಮಾಹಿತಿ
ಮೈಸೂರು ವಿಮಾನ ನಿಲ್ದಾಣದ ಉನ್ನತೀಕರಣ ಹಾಗೂ ರನ್ ವೇ ವಿಸ್ತರಣೆಗೆ ಸದ್ಯ 160 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮೈಸೂರು, ಫೆಬ್ರವರಿ 25: ರಾಜ್ಯ ಸರಕಾರ ರನ್ ವೇ ವಿಸ್ತರಣೆ ಸಂಬಂಧ 319 ಕೋಟಿ ರೂಪಾಯಿ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಿದೆ. ಪ್ರಸ್ತುತ 150 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಸದ್ಯ 160 ಎಕರೆ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ನಗರದ ಜಲದರ್ಶಿನಿಯಲ್ಲಿ ಶುಕ್ರವಾರ ಮೈಸೂರು ಏರ್‌ಪೋರ್ಟ್ ಅಥಾರಿಟಿ, ಸೆಸ್ಕ್, ಕೆಐಎಡಿಬಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಪ್ರಸ್ತುತ ಮೈಸೂರು ಏರ್‌ಪೋರ್ಟ್ ರನ್ ವೇ 1.7 ಕಿ.ಮೀ. ಇದೆ. ಇದನ್ನು 3.5 ಕಿ.ಮೀ ವಿಸ್ತರಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ 240 ಎಕರೆ ಭೂಮಿ ಬೇಕಾಗಿದೆ. ಒಂದು ಎಕರೆಗೆ 1.5 ಕೋಟಿ ಪರಿಹಾರವನ್ನು ನೀಡಲಾಗಿದೆ ಎಂದರು.

ಮೈಸೂರು ವಿಮಾನ ನಿಲ್ದಾಣದ ಉನ್ನತೀಕರಣ ಹಾಗೂ ರನ್ ವೇ ವಿಸ್ತರಣೆಗೆ ಸದ್ಯ 160 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಲಾಗುವುದು. ಸದ್ಯ 1.7 ಕಿ.ಮೀ. ರನ್ ವೇ ಇದೆ. ಇದನ್ನು 2.7 ಕಿ.ಮೀ ವಿಸ್ತರಣೆ ಮಾಡಲು ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಭವಿಷ್ಯದ ದೃಷ್ಟಿಯಿಂದ 3.5 ಕಿ.ಮೀ. ರನ್ ವೇ ವಿಸ್ತರಣೆಯಾದರೆ ಅನುಕೂಲ ಎಂದು ಹೇಳಿದರು.
ಇನ್ನು ಶಿವಮೊಗ್ಗ ಏರ್‌ಪೋರ್ಟ್ ಕೂಡ 3.5 ಕಿ.ಮೀ. ರನ್‌ವೇ ಹೊಂದಿದೆ. ಹಾಗಾಗಿ ನಮಗೆ ಹೆಚ್ಚುವರಿ 53 ಕೋಟಿ ರೂ. ಬೇಕಾಗಬಹುದು. ಹಾಗಾಗಿ ಮತ್ತೊಂದು ಸುತ್ತಿನ ಸರ್ವೆ ನಡೆಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಾರದೊಳಗೆ ರೈತರ ಭೂಮಿಯನ್ನು ಏರ್‌ಪೋರ್ಟ್ ಪ್ರಾಧಿಕಾರಕ್ಕೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಶೀಘ್ರದಲ್ಲೇ ಕಾಮಗಾರಿ ಶುರುವಾಗಲಿದೆ. ಎಲೆಕ್ಟ್ರಿಕ್ ಲೈನ್, ಕೆನಲ್ ಅಡೆತಡೆ, ಭೂ ಸ್ವಾಧೀನ ಎಲ್ಲವನ್ನೂ ಹಂತಹಂತವಾಗಿ ಪರಿಶೀಲಿಸಿ ಕೆಲಸ ಪ್ರಾರಂಭಿಸಲಾಗುವುದು ಎಂದರು.
ರನ್ ವೇ ವಿಸ್ತರಣೆಗೆ 150 ಕೋಟಿ ರೂ ಬಿಡುಗಡೆ
ರಾಜ್ಯ ಸರ್ಕಾರ ರನ್ ವೇ ವಿಸ್ತರಣೆ ಸಂಬಂಧ 319 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಿದೆ. ಪ್ರಸ್ತುತ 150 ಕೋಟಿ ರೂ. ಬಿಡುಗಡೆ ಮಾಡಿದೆ. ರನ್ ವೇ ವಿಸ್ತರಣೆ ಸಮಯದಲ್ಲಿ ಮೈಸೂರು- ನಂಜನಗೂಡು ಹೆದ್ದಾರಿಯನ್ನು ಡೈವರ್ಟ್ ಮಾಡಲಾಗುವುದು. ಶಿವಮೊಗ್ಗ ಏರ್‌ಪೋರ್ಟ್ ರನ್ ವೇ ಶೈಲಿ ಹಳೆಯದಾಯಿತು. ಹಾಗಾಗಿ ಹೊಸ ಮಾದರಿಯಲ್ಲಿ ರನ್ ವೇ ವಿಸ್ತರಣೆ ಮಾಡಲಾಗುವುದು. ಭೂಮಿ ಹಸ್ತಾಂತರ ಆಗುತ್ತಿದ್ದಂತೆ ಡಿಪಿಆರ್ ಸಿದ್ಧಮಾಡಲಾಗುವುದು. ರನ್ ವೇಗೆ ಮುಕ್ಕಾಲು ಕಿ.ಮೀ. ಹೆಚ್ಚುವರಿ ಬೇಕಿರುವುದರಿಂದ ಸರಕಾರಕ್ಕೆ ಶೀಘ್ರವೇ ಏರ್‌ಪೋರ್ಟ್ ಪ್ರಾಧಿಕಾರ ಪತ್ರ ಬರೆಯಲಿದೆ ಎಂದು ತಿಳಿಸಿದರು.
ಮೈಸೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಆರ್.ಮಂಜುನಾಥ್, ವಿಶೇಷ ಭೂಸ್ವಾಧೀನಾಧಿಕಾರಿ ಪ್ರಿಯದರ್ಶಿನಿ, ಅಭಿವೃದ್ಧಿ ಅಧಿಕಾರಿ ಮೂರ್ತಿ, ಸೆಸ್ಕ್ ಎಸಿ ನಾಗೇಶ್ ಇತರರು ಇದ್ದರು.












Click it and Unblock the Notifications