ಮೈಸೂರು ಪೊಲೀಸರ ಮತ್ತೊಂದು ಮುಖ ಬಯಲು

Mysore Saragur police accused of seeking favours from Haliyur woman to nab debtor Mallesh
ಮೈಸೂರು, ಮೇ 31: ಮೈಸೂರು ಪೊಲೀಸರು ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಮಹಿಳೆಯೊಬ್ಬರು ತನ್ನಿಂದ ಸಾಲ ಪಡೆದಿರುವ ವ್ಯಕ್ತಿ ಹಣ ವಾಪಸ್ ಮಾಡದೆ ಸತಾಯಿಸುತ್ತಿದ್ದಾರೆ. ನನ್ನ ಹಣ ವಾಪಸ್ ಕೊಡಿಸಿ ಎಂದು ಮೈಸೂರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಆದರೆ ಮಧ್ಯವರ್ತಿಗಳ ಮಾದರಿಯಲ್ಲಿ ಈ ಪೊಲೀಸರು 'ಆಯ್ತಮ್ಮಾ ನಿಮ್ಮ ಸಾಲ ವಾಪಸ್ ಕೊಡಿಸ್ತೀವಿ. ನಿಮ್ಮಿಂದ ಸಾಲ ಪಡೆದವರು ನಿಮ್ಮ ತಂಟೆಗೆ ಬಾರದಂತೆ ನಾವು ನೋಡಿಕೊಳ್ಳುತ್ತೇವೆ. ಆದರೆ ನೀವು ನಮ್ಮ ಮೇಲಧಿಕಾರಿಯ ತೀಟೆ ತೀರಿಸಬೇಕು' ಎಂದು ಬಾಧಿತ ಮಹಿಳೆಗೆ ಕೇಳಿದ್ದಾರೆ ಎನ್ನಲಾಗಿದೆ.

ಜಿಲ್ಲೆಯ ಎಚ್ಡಿ ಕೋಟೆಯ ಹಲಿಯೂರು ನಿವಾಸಿಯಾಗಿರುವ ಸದರಿ ಮಹಿಳೆ ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ, ತನ್ನನ್ನು ಲೈಂಗಿಕವಾಗಿ ಶೋಷಿಸಲು ಮುಂದಾದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಿ ಎಂದು ಅಲವತ್ತುಕೊಂಡಿದ್ದಾರೆ.

ಎಸ್ಪಿ ಅಭಿನವ್ ಖರೆ ಅವರಿಗೆ ಸಲ್ಲಿಸಿರುವ ಬಾಧಿತ ಮಹಿಳೆಯು ಮಲ್ಲೇಶ್ ಎಂಬ ವ್ಯಕ್ತಿ ನನ್ನಿಂದ 1.2 ಲಕ್ಷ ರೂ. ಸಾಲ ಪಡೆದಿದ್ದರು. ಆದರೆ ಅವರು ನನಗೆ ಹಣ ವಾಪಸ್ ಮಾಡಲಿಲ್ಲ. ನಾನು ಸರಗೂರು ಪೊಲೀಸ್ ಠಾಣೆಗೆ ತೆರಳಿ ಮಲ್ಲೇಶ್ ವಿರುದ್ಧ ದೂರು ಸಲ್ಲಿಸಿದೆ. ಪೊಲೀಸರು ಆತನನ್ನು ಠಾಣೆಗೆ ಕರೆಯಿಸಿಕೊಂಡು, ಮಾತುಕತೆ ಬಳಿಕ 2 ಕಂತಿನಲ್ಲಿ ಹಣ ವಾಪಸ್ ಮಾಡುವಂತೆ ಸೂಚಿಸಿದರು. ಆ ಸಂದರ್ಭದಲ್ಲಿ ಸರಗೂರು ಠಾಣೆ ಎಸ್ಸೈ ರಮೇಶ್, ಪೇದೆ ಭಾಸ್ಕರ್ ಮತ್ತು ಎಲ್ಎಲ್ ರಾಜಣ್ಣ ಎಂಬ ಮಧ್ಯವರ್ತಿ ಸಹ ಇದ್ದರು.

ಆದರೆ ಮಲ್ಲೇಶ್ ನನಗೆ ಹಣ ಮರಳಿಸಲಿಲ್ಲ. ನಾನು ಇದನ್ನು ಪೊಲೀಸರ ಗಮನಕ್ಕೆ ತರಲು ಸರಗೂರು ಪೊಲೀಸ್ ಠಾಣೆಗೆ ಹೋಗಿದ್ದೆ. ಆದರೆ ಅಲ್ಲಿನ ಪೊಲೀಸರು ನನ್ನನ್ನು ವಿನಾಕಾರಣ ಕಾಯುವಂತೆ ಮಾಡಿದರು. ಈ ಮಧ್ಯೆ, ಮಧ್ಯವರ್ತಿ ರಾಜಣ್ಣ ನನ್ನ ಬಳಿ ಬಂದು ತನ್ನ ಜತೆಗೂ ಸೇರಿದಂತೆ ಎಸ್ಸೈ ರಮೇಶ್ ಮತ್ತು ಪೇದೆ ಭಾಸ್ಕರ್ ಜತೆ ಕಾಮ ನಡೆಸಿದರೆ ಹಣ ವಾಪಸ್ ಕೊಡಿಸುವುದಾಗಿ ಹೇಳಿದರು. ತಮ್ಮ ಕಾಮತೃಷೆ ಪೂರೈಸಲಿಲ್ಲವೆಂದರೆ ಸಾಯಿಸಿ ಬಿಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ಬಾಧಿತ ಮಹಿಳೆ ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+