ಮೈಸೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ, ದಂಡ ವಿಧಿಸಲು ಚಿಂತನೆ
ಮೈಸೂರು, ಜುಲೈ. 20: ವಾಣಿಜ್ಯ ವಿಸ್ತರಣೆಗಳಲ್ಲಿ ಪೇ ಮತ್ತು ಪಾರ್ಕ್ ವ್ಯವಸ್ಥೆಯನ್ನು ಜಾರಿಗೆ ತರಲು ಮತ್ತು ಪಾದಚಾರಿಗಳ ಅಪಘಾತವನ್ನು ತಡೆಯುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ (ಎಂಸಿಸಿ) ಫುಟ್‌ಪಾತ್‌ಗಳ ಮೇಲಿನ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದೆ. ಅದರಲ್ಲೂ ವಿಶೇಷವಾಗಿ ಮಾರುಕಟ್ಟೆ ಪ್ರದೇಶಗಳ ಬಳಿ ಒತ್ತುವರಿ ತೆರವುಗೊಳಿಸಲಾಗಿದೆ.
ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ನಗರ ಪೊಲೀಸರು ನಗರದ ಸಯ್ಯಾಜಿ ರಾವ್ ರಸ್ತೆೆ, ಅರಮನೆ ಸುತ್ತಮುತ್ತಲಿನ ರಸ್ತೆೆಯ ಫುಟ್‌ಪಾತ್‌ನಲ್ಲಿ ಅನಧಿಕೃತವಾಗಿ ವ್ಯಾಪಾರ ಮಾಡುತ್ತಿದ್ದ 50ಕ್ಕೂ ಹೆಚ್ಚು ವ್ಯಾಪಾರಿಗಳನ್ನು ಬುಧವಾರ ಮತ್ತು ಗುರುವಾರ ತೆರವುಗೊಳಿಸಿದ್ದಾರೆ. ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ ಫುಟ್‌ಪಾತ್‌ಗಳನ್ನು ಅತಿಕ್ರಮಣ ಮಾಡಿದವರಿಗೆ ದಂಡ ವಿಧಿಸಲಾಗುವುದು ಎಂದು ಪಾಲಿಕೆ ಆರೋಗ್ಯಾಧಿಕಾರಿ ನಾಗರಾಜು ತಿಳಿಸಿದ್ದಾರೆ.

ಈ ಫುಟ್‌ಪಾತ್‌ಗಳ ಒತ್ತುವರಿ ತೆರವು ಕಾರ್ಯಾಚರಣೆ ಕೇವಲ ಒಂದಷ್ಟು ದಿನಗಳಿಗೆ ಮಾತ್ರ ಸೀಮಿತವಾಗುತ್ತಿದ್ದು, ಕೆಲವು ದಿನ ಕಳೆದ ನಂತರ ಮತ್ತೆ ಇದೇ ರೀತಿಯಲ್ಲಿ ಫುಟ್‌ಪಾತ್‌ಗಳನ್ನು ಅತಿಕ್ರಮಣ ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ಫುಟ್‌ಪಾತ್ ಅತಿಕ್ರಮಣಕ್ಕೆೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಪಾದಚಾರಿಗಳು ಆಗ್ರಹಿಸಿದ್ದಾರೆ.
ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ನಿರ್ಣಯ
ಅರಮನೆ ಸುತ್ತ, ಸಯ್ಯಾಜಿರಾವ್ ರಸ್ತೆೆ, ಓಲ್ಡ್ ಬ್ಯಾಾಂಕ್ ರಸ್ತೆೆ, ಮಂಡಿ ಮೊಹಲ್ಲಾ, ಗಾಂಧಿ ವೃತ್ತ, ಮಕ್ಕಾಾಜಿ ಚೌಕ, ಶಿವರಾಂಪೇಟೆ ರಸ್ತೆೆ, ಡಿ.ದೇವರಾಜ ಅರಸು ರಸ್ತೆೆ ಸೇರಿದಂತೆ ಹಲವೆಡೆ ಪಾದಚಾರಿಗಳಿಗೆ ಇರುವ ಫುಟ್‌ಪಾತ್‌ಗಳನ್ನು ಅಂಗಡಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಎಲ್ಲೆಂದರಲ್ಲಿ ಸಣ್ಣ ಸಣ್ಣ ಅಂಗಡಿಗಳು ತಲೆ ಎತ್ತಿವೆ. ಇದೆ ಕಾರಣಕ್ಕೆ ಸಾರ್ವಜನಿಕರು ಫುಟ್‌ಪಾತ್ ಬಿಟ್ಟು ರಸ್ತೆೆಗಿಳಿಯುತ್ತಿದ್ದಾರೆ. ಇದು ನಗರದಲ್ಲಿ ಅಪಘಾತಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಇಂತಹ ಅತಿಕ್ರಮಣದ ಅಂಗಡಿಗಳನ್ನು ತೆರವುಗೊಳಿಸಲು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
ಮೇಯರ್ ಶಿವಕುಮಾರ್, ಉಪಮೇಯರ್ ಡಾ. ರೂಪಾ ಅವರು ಇತ್ತೀಚೆಗೆ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ, ಹಿರಿಯ ಆರೋಗ್ಯಾಧಿಕಾರಿ ಮತ್ತು ಇತರ ಅಧಿಕಾರಿಗಳೊಂದಿಗೆ ನಗರ ಪ್ರದಕ್ಷಿಣೆ ಮಾಡಿ ಫುಟ್‌ಪಾತ್ ಅತಿಕ್ರಮಣ ಮಾಡಿಕೊಂಡಿರುವ ಸ್ಥಳಗಳ ಪರಿಶೀಲನೆ ನಡೆಸಿದ್ದರು. ಇದರ ಜೊತೆಗೆ ಒತ್ತುವರಿ ತೆರವು ಕಾರ್ಯಾಚರಣೆ ಬಗ್ಗೆ ಎಚ್ಚರಿಕೆ ನೀಡಿದ್ದರು.

ಬುಧವಾರ ಪಾಲಿಕೆ ಅಧಿಕಾರಿಗಳ ತಂಡ ಸಯ್ಯಾಜಿರಾವ್ ರಸ್ತೆೆ, ಗಾಂಧಿ ವೃತ್ತದ ಬಳಿ ಪರಿಶೀಲನೆ ನಡೆಸಿತು. ಸಯ್ಯಾಜಿರಾವ್ ರಸ್ತೆೆಯ ಒಂದು ಬದಿಯಲ್ಲಿ 150ಕ್ಕೂ ಹೆಚ್ಚು ಮಂದಿ ವ್ಯಾಾಪಾರ ಮಾಡುತ್ತಿದ್ದರು. ಇವರಲ್ಲಿ ಫುಟ್‌ಪಾತ್‌ನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ವ್ಯಾಾಪಾರ ಮಾಡುತ್ತಿದ್ದ 50ಕ್ಕೂ ಹೆಚ್ಚು ಅತಿಕ್ರಮಣಕಾರರನ್ನು ತೆರವುಗೊಳಿಸಿಸಲಾಯಿತು.
ಇದರ ಜೊತೆಗೆ ಅರಮನೆ ಪ್ರವೇಶ ದ್ವಾರದಲ್ಲಿ ಅನಧಿಕೃತವಾಗಿ ಹಾಕಲಾಗಿದ್ದ 15 ಅಂಗಡಿಗಳನ್ನು ತೆರವುಗೊಳಿಸಲಾಗಿದೆ. 19 ಅಂಗಡಿಯವರಿಗೆ ಪಾಲಿಕೆ ವತಿಯಿಂದಲೇ ಮಹದೇಶ್ವರ ದೇವಸ್ಥಾಾನದ ಬಳಿ ಅಂಗಡಿ ಹಾಕಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೂ, ಅವರು ಪ್ರವೇಶದ್ವಾಾರದ ಮುಂದೆ ವ್ಯಾಾಪಾರ ಮಾಡುತ್ತಿದ್ದರು. ಅಂತವರಿಗೆ ಅನುಮತಿ ಇರುವಲ್ಲಿ ವ್ಯಾಾಪಾರ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ವಿಶ್ವವಿಖ್ಯಾತ ಮೈಸೂರು ಅರಮನೆ ನೋಡಲು ದೇಶ ವಿದೇಶದಿಂದ ಪ್ರವಾಸಿಗರು ಬರುತ್ತಾಾರೆ. ಅರಮನೆ ನಗರಿಯಲ್ಲಿ ಫುಟ್‌ಪಾತ್ ಅತಿಕ್ರಮಣವಾಗಿರುವುದು ಶೋಭೆ ತರುವುದಿಲ್ಲ. ಇದರಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಅರಮನೆ ಪ್ರವೇಶ ದ್ವಾರದಲ್ಲಿಯೇ ಅನಧಿಕೃತವಾಗಿ ವ್ಯಾಪಾರ ನಡೆಸುವುದರಿಮದ ಅವರಿದೂ ತೊಂದರೆಯಾಗುತ್ತಿದೆ ಎಂಬ ಆರೋಪ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications