ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾರಾ ಮಹೇಶ್‌ ಮಹಿಳಾ SPಗೆ ನಿಂದಿಸಿದ್ದಕ್ಕೆ ಮೈಸೂರಿನ ಮೇಯರ್ ಏನಂದ್ರು?

|
Google Oneindia Kannada News

ಮೈಸೂರು, ಜನವರಿ 25: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಕ್ರಿಯಾಸಮಾಧಿ ವೇಳೆ ಐಪಿಎಸ್ ಅಧಿಕಾರಿ ದಿವ್ಯಾ ಗೋಪಿನಾಥ್ ಅವರಿಗೆ ಸಚಿವ ಸಾ. ರಾ ಮಹೇಶ್ ಅವರು ಆವಾಜ್ ಹಾಕಿದ್ದಕ್ಕೆ ಮೈಸೂರಿನ ಮಹಾಪೌರರರಾದ ಪುಷ್ಪಲತಾ ಜಗನ್ನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓರ್ವ ಮಹಿಳೆ ಜೊತೆ ಈ ರೀತಿ ನಡವಳಿಕೆ ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಮಹಿಳೆಯರಿಗೆ ವಿಶೇಷವಾದ ಸ್ಥಾನಮಾನವಿದೆ. ಉನ್ನತ ಅಧಿಕಾರಿಗೆ ಈ ರೀತಿ ಆದರೆ ಸಾಮಾನ್ಯ ಮಹಿಳೆಯ ಜತೆ ಏನು ? ಈ ರೀತಿ ಘಟನೆ ನಡೆಯಬಾರದಿತ್ತು. ನಡೆದು ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳಾ ಐಪಿಎಸ್ ಅಧಿಕಾರಿ ಮೇಲೆ ಸಚಿವ ಸಾ.ರಾ.ಮಹೇಶ್ ದರ್ಪಮಹಿಳಾ ಐಪಿಎಸ್ ಅಧಿಕಾರಿ ಮೇಲೆ ಸಚಿವ ಸಾ.ರಾ.ಮಹೇಶ್ ದರ್ಪ

ಇನ್ನು ಸ್ವಚ್ಛ ನಗರಿ ಮೈಸೂರಿಗೆ ಮತ್ತೊಮ್ಮೆ ಮೊದಲ ಸ್ಥಾನದ ಸಿಗಲಿದೆ. ಈ ಬಾರಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಿಟಿಜನ್ ಫೀಡ್ ಬ್ಯಾಕ್ ನಲ್ಲಿ ಇಲ್ಲಿಯವರೆಗೆ ನಾಲ್ಕನೇ ಸ್ಥಾನದಲ್ಲಿದ್ದೇವೆ. ಮೊದಲ ಸ್ಥಾನಕ್ಕೆ ಹೋಗಬೇಕು. ಈ ಹಿನ್ನೆಲೆಯಲ್ಲಿ ಮೈಸೂರಿನ ಸಾರ್ವಜನಿಕರು ಸಿಟಿಜನ್ ಫೀಡ್ ಬ್ಯಾಕ್ ನೀಡಬೇಕು. ಈ ತಿಂಗಳ ಕೊನೆಯವರೆಗೂ ಸಾರ್ವಜನಿಕರು ಸ್ವಚ್ಛತಾ ಆಪ್ ಮೂಲಕ ವೋಟ್ ಮಾಡಬಹುದು ಎಂದು ತಿಳಿಸಿದರು.

Mysore Mayor displeasure over Sa Ra Mahesh

ಮಹಿಳಾ ಅಧಿಕಾರಿ ಮೇಲೆ ದರ್ಪ: ಅದೊಂದು ಸಣ್ಣ ಘಟನೆ ಎಂದ ಸಚಿವಮಹಿಳಾ ಅಧಿಕಾರಿ ಮೇಲೆ ದರ್ಪ: ಅದೊಂದು ಸಣ್ಣ ಘಟನೆ ಎಂದ ಸಚಿವ

ಪಾಲಿಕೆ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಸ್ವಚ್ಛ ನಗರಿ ಮೈಸೂರಿಗೆ ಮೊದಲ ಸ್ಥಾನಕ್ಕೆ ತರಲು ಕೈಜೋಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಸ್ವಚ್ಛ ನಗರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

English summary
Mysore Mayor Pushpalata Jagannath expressed displeasure over Karnataka Minister Sa Ra Mahesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X