ಹೋಟೆಲ್ ಗಳಿಂದ ದಸರಾ ಥಾಲಿ ಕಾಣೆಯಾಗಿದೆ!

Dasara Thali
ಮೈಸೂರು, ಅ.4 : ವಿಶ್ವವಿಖ್ಯಾತ ಮೈಸೂರು ದಸರಾ ನೋಡಲು ಹೋಗುವ ಮುನ್ನ ಸ್ವಲ್ಪ ಆಲೋಚಿಸಿ, ಎರಡು ವರ್ಷಗಳಿಂದ ಕಡಿಮೆ ದರದಲ್ಲಿ ಜನರಿಗೆ ಹೊಟ್ಟೆ ತುಂಬಾ ಊಟ ನೀಡಿದ್ದ ದಸರಾ ಥಾಲಿ ಈ ಬಾರಿ ಹೋಟೆಲ್ ಗಳಿಂದ ಕಾಣೆಯಾಗಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ರಾಮದಾಸ್ 2011ರಲ್ಲಿ ದಸರಾ ಥಾಲಿ ಎಂಬ ಅಭಿಯಾನ ಆರಂಭಿಸಿದ್ದರು. 30 ರೂ.ಗಳಿಗೆ ಇದು ಬಡವರಿಗೆ ಹೊಟ್ಟೆ ತುಂಬಾ ಊಟ ನೀಡುತ್ತಿತ್ತು.

ದಸರಾ ಥಾಲಿ ಅಭಿಯಾನ 2012ರ ದಸರಾದಲ್ಲಿಯೂ ಮುಂದುವರೆದಿತ್ತು. ಚಪಾತಿ, ಪಲ್ಯ, ಅನ್ನ, ಸಾಂಬಾರ್/ರಸಂ, ಮಜ್ಜಿಗೆ, ಉಪ್ಪಿನಕಾಯಿ ಥಾಲಿ ಮೆನುವಿನಲ್ಲಿ ಸೇರಿತ್ತು. ಕಡಿಮೆ ಬೆಲೆಗೆ ಒಳ್ಳೆಯ ಊಟ ದೊರೆಯುತ್ತಿತ್ತು.

ಆದರೆ, 2013ರ ದಸರಾದಲ್ಲಿಯೂ ಈ ದಸರಾ ಥಾಲಿ ಅಭಿಯಾನ ಮುಂದುವರೆಸಿ ಎಂದು ಜಿಲ್ಲಾಡಳಿತ ಮಾಡಿದ್ದ ಮನವಿಗೆ ಹೋಟೆಲ್ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಲು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಈ ಬಾರಿ ದಸರಾ ಥಾಲಿ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

ಜಿಲ್ಲಾಡಳಿತ ಸಹಕಾರ ನೀಡಿದರೆ ಮಾತ್ರ ದಸರಾ ಥಾಲಿ ಅಭಿಯಾನ ಮುಂದುದರೆಸುವುದಾಗಿ ಹೋಟೆಲ್ ಮಾಲೀಕರು ಜಿಲ್ಲಾಡಳಿತಕ್ಕೆ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಈ ಬಾರಿಯ ದಸರಾದಿಂದ ದಸರಾ ಥಾಲಿ ಹೊರಬಿದ್ದಿದೆ.

ಮೈಸೂರು ನಗರದಲ್ಲಿ ಸದ್ಯ 50 ರೂ. ಗಳಿಂದ 99 ರೂ.ಗಳ ವರೆಗೆ ಹೋಟೆಲ್ ಗಳಿಗೆ ಅನುಗುಣವಾಗಿ ಊಟ ಲಭ್ಯವಿದೆ. ಶನಿವಾರದಿಂದ ದರ ಹೆಚ್ಚಾದರೆ, ಇದರ ಬೆಲೆ ಮತ್ತಷ್ಟು ಏರಿಕೆಯಾಗಲಿದೆ. ಆದ್ದರಿಂದ ದಸರಾದಲ್ಲಿ ಕಡಿಮೆ ಬೆಲೆಗೆ ಊಟ ಎಲ್ಲಿ ದೊರೆಯುತ್ತದೆ ಎಂದು ತಿಳಿದುಕೊಳ್ಳಿ.

ದಸರಾ ಆಹಾರ ಸಮಿತಿ ಅಧ್ಯಕ್ಷ ಮತ್ತು ಮೈಸೂರು ಹೋಟೆಲ್ ಸಂಘದ ಅಧ್ಯಕ್ಷರಾಗಿರುವ ರಾಜೇಂದ್ರ ಅವರು, ದಸರಾ ಥಾಲಿಗೆ ಹೊರತಾಗಿಯೂ ಈ ಬಾರಿ ಹೋಟೆಲ್ ಮಾಲೀಕರು, ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಮಳಿಗೆಗಳನ್ನು ತೆರೆಯಲಿದ್ದಾರೆ. ಇಲ್ಲಿ ಕಡಿಮೆ ಬೆಲೆಗೆ ಊಟ ದೊರೆಯುತ್ತಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+