ಮೈಸೂರಿನಲ್ಲಿ ಸಾಲು-ಸಾಲು ಕಾರ್ಯಕ್ರಮಗಳಿಗೆ ಚಾಲನೆ
ಮೈಸೂರು, ಸೆ. 26 : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಡಾ. ಗಿರೀಶ್ ಕಾರ್ನಾಡ್ ಚಾಲನೆ ನೀಡಿದ್ದಾರೆ. ಗುರುವಾರ ಮುಂಜಾನೆಯಿಂದ ಸಂಜೆಯ ತನಕ ಮೈಸೂರಿನಲ್ಲಿ ದಸರಾದ ವಿವಿಧ ಕಾರ್ಯಕ್ರಮಗಳು ಉದ್ಘಾಟನೆಗೊಂಡಿವೆ.
ಗುರುವಾರ ಮುಂಜಾನೆ 8.45ರ ಸುಮಾರಿಗೆ ಚಾಮುಂಡಿ ಬೆಟ್ಟದಲ್ಲಿ ನಾಡದೇವತೆಗೆ ಪೂಜೆ ಸಲ್ಲಿಸುವ ಒಂಭತ್ತು ದಿನಗಳ ದಸರಾಕ್ಕೆ ಗಿರೀಶ್ ಕಾರ್ನಾಡ್ ಚಾಲನೆ ನೀಡಿದರು. ನಂತರ ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭವಾದರೆ, ನಗರದ ವಿವಿಧ ಭಾಗಗಳಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಗಳಿಗೆ ಚಾಲನೆ ದೊರೆಯಿತು. [ಚಿತ್ರಗಳಲ್ಲಿ ನೋಡಿ ಮೈಸೂರು ದಸರಾ]
ಕುಸ್ತಿ ಪಂದ್ಯಾವಳಿ, ದಸರಾ ವಸ್ತು ಪ್ರದರ್ಶನ, ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಫಲಪುಷ್ಪ ಪ್ರದರ್ಶನ ಮುಂತಾದವುಗಳಿಗೆ ಚಾಲನೆ ದೊರಕಿದ್ದು, ಶುಕ್ರವಾರ ರಂಗೋಲಿ ಸ್ಪರ್ಧೆ, ಸೈಕಲ್ ಜಾಥಾಕ್ಕೆ ಚಾಲನೆ ಸಿಕ್ಕಿದೆ. ಗುರುವಾರದಿಂದ ಮೈಸೂರಿನಲ್ಲಿ ದಸರಾ ಸಂಭ್ರಮ ಆರಂಭವಾಗಿದ್ದು, ಅ.4 ರಂದು ಜಂಬೂ ಸವಾರಿ ನಡೆಯಲಿದೆ. ಚಿತ್ರಗಳಲ್ಲಿ ನೋಡಿ ದಸರಾ ಸಂಭ್ರಮ

ದಸರಾಕ್ಕೆ ಚಾಲನೆ ನೀಡಿದ ಗಿರೀಶ್ ಕಾರ್ನಾಡ್
ಗುರುವಾರ ಮುಂಜಾನೆ 8.45ರ ಸುಮಾರಿಗೆ ಚಾಮುಂಡಿ ಬೆಟ್ಟದಲ್ಲಿ ನಾಡದೇವತೆಗೆ ಪೂಜೆ ಸಲ್ಲಿಸುವ ಒಂಭತ್ತು ದಿನಗಳ ದಸರಾಕ್ಕೆ ಗಿರೀಶ್ ಕಾರ್ನಾಡ್ ಚಾಲನೆ ನೀಡಿದರು. ಸಿಎಂ ಸಿದ್ದರಾಮಯ್ಯ ಮತ್ತು ಸಿದ್ದರಾಮಯ್ಯ ಸಂಪುಟದ ಹಲವು ಸಚಿವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಖಾಸಗಿ ದರ್ಬಾರ್‌ಗೆ ಚಾಲನೆ
ದಸರಾಗೆ ಚಾಲನೆ ದೊರೆಯುತ್ತಿದ್ದಂತೆ ಅಂಬಾವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್‌ಗೆ ಚಾಲನೆ ಸಿಕ್ಕಿತ್ತು. ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಹೋದರಿ ಪುತ್ರ ಕಾಂತರಾಜ ಅರಸ್ ಪಟ್ಟದ ಕತ್ತಿಯನ್ನು ಸಿಂಹಾಸನದ ಮೇಲೆ ಇಟ್ಟು ದರ್ಬಾರ್‌ಗೆ ಚಾಲನೆ ನೀಡಿದರು. ರಾಜವಂಶದ ಉತ್ತರಾಧಿಕಾರಿ ನೇಮಕವಾಗದ ಕಾರಣ ಪಟ್ಟದ ಕತ್ತಿ ಇಟ್ಟು ದರ್ಬಾರ್ ನಡೆಸಲಾಗುತ್ತದೆ.

ಚಲನಚಿತ್ರೋತ್ಸವಕ್ಕೆ ಚಾಲನೆ
ದಸರಾ ಚಲನಚಿತ್ರೋತ್ಸವನ್ನು ವಾರ್ತಾ ಸಚಿವ ರೋಷನ್ ಬೇಗ್ ಉದ್ಘಾಟಿಸಿದರು. ಈ ಸಂರ್ಭದಲ್ಲಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರನ್ನು ಸನ್ಮಾನಿಸಲಾಯಿತು. ಸಿಎಂ ಸಿದ್ದರಾಮಯ್ಯ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಸ್ತು ಪ್ರದರ್ಶನ ಉದ್ಘಾಟಿಸಿದ ಉಮಾಶ್ರೀ
ದಸರಾ ಮಹೋತ್ಸವ ಅಂಗವಾಗಿ ವಸ್ತು ಪ್ರದರ್ಶನದ ಪ್ರಾಧಿಕಾರದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ಏರ್ಪಡಿಸಿದ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಉಮಾಶ್ರೀ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಶಾಲಿನ ರಜನೀಶ್ ಮುಂತಾದವರು ಉಪಸ್ಥಿತರಿದ್ದರು.

ದಸರಾ ಫಲಪುಷ್ಪ ಪ್ರದರ್ಶನ ಉದ್ಘಾಟನೆ
ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ದಸರಾ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಚಾಲನೆ ನೀಡಿದರು. ಈ ಬಾರಿ ಕುಪ್ಪಣ್ಣ ಪಾರ್ಕ್‌ನಲ್ಲಿ ಪ್ರದರ್ಶನ ನಡೆಯುತ್ತಿದೆ.

ಕುಸ್ತಿ ಪಂದ್ಯಾವಳಿಯಲ್ಲಿ ಜಟ್ಟಿಗಳ ಕಾಳಗ
ದಸರಾ ಕುಸ್ತಿ ಪಂದ್ಯಾವಳಿಗೆ ಸಿಎಂ ಸಿದ್ದರಾಮಯ್ಯ ಗುರುವಾರ ಸಂಜೆ ಚಾಲನೆ ನೀಡಿದ್ದಾರೆ.












Click it and Unblock the Notifications