ಮೈಸೂರು ದಸರಾ ದೀಪಾಲಂಕಾರ ಅ. 23ರ ತನಕ ವಿಸ್ತರಣೆ, ವಾಹನ ಮಾರ್ಗ ಬದಲು

ಮೈಸೂರು, ಅಕ್ಟೋಬರ್ 15: ನಾಡಹಬ್ಬ ಮೈಸೂರು ದಸರಾ-2024ರ ಸಂದರ್ಭದಲ್ಲಿ ಮೈಸೂರು ನಗರದಲ್ಲಿ ವಾಹನಗಳ ಸಂಚಾರವು ಅಧಿಕವಾಗು ಹಿನ್ನೆಯಲ್ಲಿ ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲು ಸರ್ಕಾರಿ ಮತ್ತು ನಗರ ಸಾರಿಗೆ ಬಸ್‌ಗಳಿಗೆ ಅನ್ವಯವಾಗುವಂತೆ ಮಾರ್ಗ ಬದಲಾವಣೆ ಮತ್ತು ತಾತ್ಕಾಲಿಕವಾಗಿ ವಾಹನ ನಿಲುಗಡೆ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿತ್ತು, ಕೆಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಆದರೆ ಈಗ ನಿರ್ಬಂಧಗಳು ವಿಸ್ತರಣೆಯಾಗಲಿದೆ.

ಈ ಕುರಿತು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅಧಿಸೂಚನೆ ಹೊರಡಿಸಿದ್ದಾರೆ. ದಸರಾ ಹಿನ್ನಲೆಯಲ್ಲಿ ಮೈಸೂರು ನಗರದಲ್ಲಿ ಮಾಡಿರುವ ವಿದ್ಯುತ್ ದೀಪಾಲಂಕಾರವನ್ನು 23.10.2024ರ ತನಕ ವಿಸ್ತರಣೆ ಮಾಡಲಾಗಿದೆ. ಆದ್ದರಿಂದ ವಾಹನ ಸಂಚಾರ ಮಾರ್ಗ ಬದಲಾವಣೆ ಮತ್ತು ತಾತ್ಕಾಲಿಕವಾಗಿ ನಿಲುಗಡೆ ವ್ಯವಸ್ಥೆಯಲ್ಲಿ ಕೆಲವು ನಿರ್ಬಂಧಗಳನ್ನು ಮುಂದುವರೆಸಲಾಗಿದೆ.

Mysore Dasara 2024 Lighting Extended Until October 23

ದಸರಾ-2024 ಮಹೋತ್ಸವದ ದೀಪಾಲಂಕಾರವನ್ನು ವಿಸ್ತರಣೆ ಮಾಡಿರುವುದರಿಂದ ಮೈಸೂರು ನಗರದ ಅರಮನೆಯ ಸುತ್ತನ ರಸ್ತೆಗಳಲ್ಲಿ ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ವಾಹನ ಸಂಚಾರ ಮಾರ್ಗ ಮತ್ತು ತಾತ್ಕಾಲಿಕ ನಿಲುಗಡೆ ವ್ಯವಸ್ಥೆಯನ್ನು ದಿನಾಂಕ 23.10.2024ರವರೆಗೆ ವಿಸ್ತರಿಸಿ ಅಧಿಸೂಚನೆ ಹೊರಡಿಸಲಾಗಿದೆ. ಕೆಲವೊಂದು ನಿರ್ಬಂಧಗಳ ಮಾಹಿತಿ ಹೀಗಿದೆ.

ವಾಹನ ಸಂಚಾರ ಮಾಹಿತಿ

* ದಿನಾಂಕ 23-10-2024 ರವರೆಗೆ (ಪ್ರತಿದಿನ ಸಂಜೆ 4 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ) ನಗರದ ಹೊರ ಭಾಗಗಳಿಂದ ಆಗಮಿಸುವ ಹಾಗೂ ನಗರದಿಂದ ನಿರ್ಗಮಿಸುವ ಕೆ.ಎಸ್.ಆರ್.ಟಿ.ಸಿ. ಗ್ರಾಮಾಂತರ ಸಾರಿಗೆ ಬಸ್ಸುಗಳು ಸಂಚರಿಸುವ ಮಾರ್ಗ. ಮೈಸೂರು-ಬೆಂಗಳೂರು ರಸ್ತೆ ಮೂಲಕ ನಗರಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಬಸ್ಸುಗಳ ಆಗಮನ ಬೆಂಗಳೂರು ರಸ್ತೆ- ನಾಡಪ್ರಭು ಕೆಂಪೇಗೌಡ ವೃತ್ತ-ಎಡ ತಿರುವು- ರಿಂಗ್ ರಸ್ತೆ ಮೂಲಕ ಮಹದೇವಪುರ ರಿಂಗ್ ರಸ್ತೆ ಜಂಕ್ಷನ್ (ಸಾತಗಳ್ಳಿ ಬಸ್ ಡಿಪೋ)- ಮಹದೇವಪುರ ರಸ್ತೆ- ನೆಕ್ಸಸ್‌ ಮಾಲ್ ಜಂಕ್ಷನ್ ಕಾಳಿಕಾಂಬ ದೇವಸ್ಥಾನ ರಸ್ತೆ ಜಂಕ್ಷನ್- ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್ ನವಾಬ್ ಹೈದರಾಲಿ ಖಾನ್ ವೃತ್ತ (ಫೈವ್ ಲೈಟ್ ಸರ್ಕಲ್) ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ.

ನಿರ್ಗಮನ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ. ನವಾಬ್ ಹೈದರಾಲಿ ಖಾನ್ ವೃತ್ತ (ಫೈವ್ ಲೈಟ್ ಸರ್ಕಲ್‌)- ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್- ಡಾ.ಬಿ. ಆರ್. ಅಂಬೇಡ್ಕರ್ ವೃತ್ತ (ಎಫ್.ಟಿ.ಎಸ್)- ಡಾ. ರಾಜಕುಮಾರ್ ವೃತ್ತ (ಫೌಂಟೆನ್ ಸರ್ಕಲ್)- ಟಿ. ಎನ್. ನರಸಿಂಹಮೂರ್ತಿ ವೃತ್ತ (ಎಲ್.ಐ.ಸಿ ವೃತ್ತ)-ಬನ್ನಿಮಂಟಪ ರಸ್ತೆ- ನಂದಿ ಬಸಪ್ಪ ಗೋರಿ ಜಂಕ್ಷನ್- ಟೋಲ್ ಗೇಟ್-ನಾಡಪ್ರಭು ಕೆಂಪೇಗೌಡ ವೃತ್ತ- ಬೆಂಗಳೂರು ರಸ್ತೆ ಮೂಲಕ ಮುಂದೆ ಸಾಗುವುದು.

* ಮಡಿಕೇರಿ, ಹಾಸನ ಕಡೆಯಿಂದ ಹುಣಸೂರು ರಸ್ತೆ ಮೂಲಕ ಮೈಸೂರು ನಗರಕ್ಕೆ ಆಗಮಿಸುವ & ನಿರ್ಗಮಿಸುವ ಬಸ್ಸುಗಳ ಮಾರ್ಗ. ಆಗಮನ ಹುಣಸೂರು ರಸ್ತೆ- ಫೀಲ್ಡ್ ಮಾರ್ಷಲ್‌ ಕಾರ್ಯಪ್ಪ ವೃತ್ತ (ಮೆಟ್ರೋಪೋಲ್ ವೃತ್ತ)- ದಾಸಪ್ಪ ವೃತ್ತ -ಬಾಬು ಜಗಜೀವನರಾಂ ವೃತ್ತ (ರೈಲ್ವೇ ನಿಲ್ದಾಣ ವೃತ್ತ) -ಪುಟ್ಟು ಗೋಪಾಲಕೃಷ್ಣ ಶೆಟ್ಟಿ ವೃತ್ತ (ಜೆ.ಕೆ.ಗ್ರೌಂಡ್)- ಶೇಷಾದ್ರಿ ಅಯ್ಯರ್‌ ರಸ್ತೆ- ಸುಭಾಷ್‌ಚಂದ್ರ ಬೋಸ್ ವೃತ್ತ(ಆರ್.ಎಂ.ಸಿ) ಅಬ್ದುಲ್ ಕಲಾಂ ಆಜಾದ್ ವೃತ್ತ (ಹೈವೇ ಸರ್ಕಲ್)- ನೆಲ್ಸನ್ ಮಂಡೇಲಾ ರಸ್ತೆ- ಟಿ. ಎನ್. ನರಸಿಂಹಮೂರ್ತಿ ವೃತ್ತ (ಎಲ್.ಐ.ಸಿ ವೃತ್ತ)- ಟಿಪ್ಪು ವೃತ್ತ- ಡಾ. ರಾಜ ಕುಮಾರ್ ವೃತ್ತ (ಫೌಂಟೆನ್ ವೃತ್ತ)- ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್- ನವಾಬ್ ಹೈದರಾಲಿ ಖಾನ್ ವೃತ್ತ (ಫೈವ್ ಲೈಟ್ ವೃತ್ತ)-ಬಿ. ಎನ್‌. ರಸ್ತೆ- ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ.

ನಿರ್ಗಮನ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ನವಾಬ್ ಹೈದರಾಲಿ ಖಾನ್ ವೃತ್ತ (ಫೈವ್ ಲೈಟ್ ಸರ್ಕಲ್) ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್- ಡಾ. ಬಿ. ಆರ್. ಅಂಬೇಡ್ಕರ್ ವೃತ್ತ (ಎಫ್.ಟಿ.ಎಸ್)- ಡಾ. ರಾಜಕುಮಾರ್ ವೃತ್ತ (ಫೌಂಟೆನ್ ಸರ್ಕಲ್)- ಟಿ. ಎನ್. ನರಸಿಂಹಮೂರ್ತಿ ವೃತ್ತ (ಎಲ್.ಐ.ಸಿ ವೃತ್ತ) -ನೆಲ್ಸನ್ ಮಂಡೇಲಾ ರಸ್ತೆ- ಅಬ್ದುಲ್ ಕಲಾಂ ಆಜಾದ್ ವೃತ್ತ (ಹೈವೇ ಸರ್ಕಲ್‌)- ಸುಭಾಷ್‌ಚಂದ್ರ ಬೋಸ್ ವೃತ್ತ (ಆರ್.ಎಂ.ಸಿ)- ಶೇಷಾದ್ರಿ ಅಯ್ಯರ್ ರಸ್ತೆ- ಮುಟ್ಟು ಗೋಪಾಲಕೃಷ್ಣ ಶೆಟ್ಟಿ ವೃತ್ತ (ಜೆ.ಕೆ.ಗ್ರಂಡ್)- ಬಾಬು ಜಗಜೀವನರಾಂ ವೃತ್ತ (ರೈಲ್ವೇ ನಿಲ್ದಾಣ ವೃತ್ತ)- ದಾಸಪ್ಪ ವೃತ್ತ- ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ (ಮೆಟ್ರೋಪೋಲ್ ವೃತ್ತ)- ಹುಣಸೂರು ರಸ್ತೆ ಮೂಲಕ ಮುಂದೆ ಸಾಗುವುದು.

* ಹೆಚ್.ಡಿ. ಕೋಟೆ ರಸ್ತೆ ಮೂಲಕ ನಗರಕ್ಕೆ ಆಗಮಿಸುವ ಬಸ್ಸುಗಳ ಮಾರ್ಗ. ಆಗಮನ. ಶ್ರೀರಾಂಪುರ ರಿಂಗ್ ರಸ್ತೆ ಜಂಕ್ಷನ್- ಮಾನಂದವಾಡಿ ರಸ್ತೆ- ಶ್ರೀನಿವಾಸ ವೃತ್ತ- ಜೆಎಲ್‌ಬಿ ರಸ್ತೆ- ಕಂಸಾಳೆ ಮಹದೇವಯ್ಯ ವೃತ್ತ- ಶ್ರೀ ಗಣಪತಿ ಸಚ್ಚಿದಾನಂದ ವೃತ್ತ (ಎಲೆ ತೋಟ) ರಾಜಹಂಸ ಜಂಕ್ಷನ್- ಟ್ರಕ್ ಟರ್ಮಿನಲ್‌- ಸೋಮಸುಂದರಂ ವೃತ್ತ (ಎಂ.ಆರ್.ಸಿ)- ಮಹಾರಾಣ ಪ್ರತಾಪ ಸಿಂಹ ವೃತ್ತ- ಬ್ಯಾಂಕ್ ಬಂಡ್‌ ರಸ್ತೆ- ಸರ್ಕಸ್ ಮೈದಾನ ಜಂಕ್ಷನ್ ಲೋಕರಂಜನ್ ರಸ್ತೆ- ಎಸ್.ಅಂಗಣ್ಣ ವೃತ್ತ (ಚಿರಾಗ್)- ಜಯಚಾಮರಾಜೇಂದ್ರ ಒಡೆಯರ್ ವೃತ್ತ (ಹಾರ್ಡಿಂಜ್ ವೃತ್ತ)- ಬಿ.ಎನ್‌.ರಸ್ತೆ- ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ

ನಿರ್ಗಮನ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ನವಾಬ್ ಹೈದರಾಲಿ ಖಾನ್ ವೃತ್ತ (ಫೈವ್ ಲೈಟ್ ವೃತ್ತ)- ಸರ್ಕಾರಿ ಭವನದ ಉತ್ತರ ದ್ವಾರದ ಜಂಕ್ಷನ್- ಕಾಳಕಾಂಭ ದೇವಸ್ಥಾನದ ಜಂಕ್ಷನ್- ಹರಿಕೃಷ್ಣ ವೃತ್ತ (ಡಿ.ಪಿ.ಓ ವೃತ್ತ)- ಶಾಂತವೇರಿ ಗೋಪಾಲಗೌಡ ವೃತ್ತ (ನಜರ್‌ಬಾದ್)- ಬ್ಯಾಂಕ್ ಬಂಡ್ ರಸ್ತೆ- ಮಹಾರಾಣ ಪ್ರತಾಪ ಸಿಂಹ ವೃತ್ತ- ಮಹಾರಾಣ ಪ್ರತಾಪ ಸಿಂಹ ರಸ್ತೆ- ಸಿ.ಎ.ಆರ್ ಕೇಂದ್ರ ಸ್ಥಾನ 'ವೈ' ಜಂಕ್ಷನ್- ಚಾಮಪ್ಪಾಜಿ ರಸ್ತೆ (ರೇಸ್ ಕೋರ್ಸ್ ಹಿಂಭಾಗದ ರಸ್ತೆ)- ಟ್ರಕ್ ಟರ್ಮಿನಲ್ ರಸ್ತೆ ಜಂಕ್ಷನ್- ಸತ್ಯ ಹರಿಶ್ಚಂದ್ರ ರಸ್ತೆ- ಶ್ರೀ ಗಣಪತಿ ಸಚ್ಚಿದಾನಂದ ವೃತ್ತ (ಎಲೆ ತೋಟ)- ಎಡ ತಿರುವು- ನಂಜನಗೂಡು ರಸ್ತೆ- ಜೆ.ಪಿ.ನಗರ ಅಂಕ್ ರಸ್ತೆ- ಮಾನಂದವಾಡಿ ರಸ್ತೆ ಮೂಲಕ ಮುಂದೆ ಸಾಗುವುದು.

* ನಂಜನಗೂಡು, ಚಾಮರಾಜನಗರ ಮತ್ತು ಗುಂಡ್ಲುಪೇಟೆ ಕಡೆಯಿಂದ ನಂಜನಗೂಡು ರಸ್ತೆ ಮೂಲಕ ನಗರಕ್ಕೆ ಆಗಮಿಸುವ & ನಿರ್ಗಮಿಸುವ ಬಸ್ಸುಗಳ ಮಾರ್ಗ. ಆಗಮನ. ನಂಜನಗೂಡು ರಿಂಗ್ ರಸ್ತೆ ಜಂಕ್ಷನ್- ಶ್ರೀ ಗಣಪತಿ ಸಚ್ಚಿದಾನಂದ ವೃತ್ತ (ಎಲೆ ತೋಟ)- ರಾಜಹಂಸ ಜಂಕ್ಷನ್- ಟ್ರಕ್ ಟರ್ಮಿನಲ್- ಸೋಮಸುಂದರಂ ವೃತ್ತ (ಎಂ.ಆರ್.ಸಿ)- ಮಹಾರಾಣ ಪ್ರತಾಪ ಸಿಂಹ ವೃತ್ತ- ಬ್ಯಾಂಕ್ ಬಂಡ್‌ ರಸ್ತೆ- ಸರ್ಕಸ್ ಮೈದಾನ ಜಂಕ್ಷನ್-ಲೋಕರಂಜನ್ ರಸ್ತೆ- ಎಸ್.ಅಂಗಣ್ಣ ವೃತ್ತ (ಚಿರಾಗ್)- ಜಯಚಾಮರಾಜೇಂದ್ರ ಒಡೆಯರ್ ವೃತ್ತ (ಹಾರ್ಡಿಂಜ್ ವೃತ್ತ)- ಬಿ.ಎನ್‌.ರಸ್ತೆ- ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+