ಅಕ್ಟೋಬರ್23ರಂದು ಮೈಸೂರು ದಸರಾ ಮೆರವಣಿಗೆ

ಮೈಸೂರು, ಸೆ.13: ವಿಶ್ವಪ್ರಸಿದ್ಧ ದಸರಾ ಮಹೋತ್ಸವಕ್ಕೆ ಅಕ್ಟೋಬರ್ 14ರಂದು ವಿದ್ಯುಕ್ತ ಚಾಲನೆ ನೀಡಲಾಗುತ್ತದೆ. ಬೆಟ್ಟದ ತಾಯಿ ಚಾಮುಂಡೇಶ್ವರಿಗೆ ಪ್ರಗತಿ ಪರ ರೈತರೊಬ್ಬರಿಂದ ಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ನಾಂದಿ ಹಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್‌ಪ್ರಸಾದ್ ಘೋಷಿಸಿದ್ದಾರೆ.

ಅಕ್ಟೋಬರ್ 14ರಿಂದ ಅ.23ರ ತನಕ ಸರಳ ದಸರಾ ಮಹೋತ್ಸವ ಜರುಗಲಿದೆ. ಅ. 23ರಂದು ವಿಜಯದಶಮಿಯ ದಿನ ದಸರಾ ಮೆರವಣಿಗೆ ನೆರವೇರಲಿದೆ.

Mysore Dasara 2015 from October 14 to 23

ಸರಳ ದಸರಾ: ಈ ಬಾರಿ ಬರ ಹಾಗೂ ರೈತರ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ನಿರ್ಧರಿಸಿದೆ. ಪ್ರತಿ ಬಾರಿ ಇದಕ್ಕೆ 14 ಕೋಟಿ ರೂ. ವ್ಯಯಿಸಲಾಗುತ್ತಿದ್ದು, ಈ ಬಾರಿ ಖರ್ಚು ವೆಚ್ಚ4 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದರು. ಈ ಬಾರಿಯ ದಸರಾವನ್ನು ಪ್ರಗತಿಪರ ರೈತರೊಬ್ಬರಿಂದ ಉದ್ಘಾಟಿಸಲು ತೀರ್ಮಾನಿಸಲಾಗಿದ್ದು, ಅತಿ ಶೀಘ್ರದಲ್ಲಿ ರೈತನ ಹೆಸರು ಪ್ರಕಟಿಸಲಾಗುವುದು ಎಂದರು. [ಸರಳ ದಸರಾ : ಈ ಬಾರಿ ಏನಿರುತ್ತೆ, ಏನಿರಲ್ಲ?]

ದಸರಾ ಉತ್ಸವಕ್ಕೆ ಚಾಲನೆ ದೊರೆತ ನಂತರ ಅಕ್ಟೋಬರ್ 14ರ ಸಂಜೆ ಅರಮನೆ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ರೈತರಿಗೆ ಸಂದೇಶ ನೀಡುತ್ತಾರೆ.

ಎರಡು ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಪೊಲೀಸ್ ಬ್ಯಾಂಡ್, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಈ ಬಾರಿ ದಸರೆಯಲ್ಲಿ ಕೇವಲ 20 ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. [ದಸರಾ ಲಾಂಛನ ಬಿಡುಗಡೆ]

Mysore Dasara 2015 from October 14 to 23

ಸ್ಥಳೀಯ ಕಲಾ ತಂಡಗಳು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ. ದಸರಾ ಆಚರಣೆಗೆ ಪ್ರತಿಬಾರಿಯಂತೆ ಈ ಬಾರಿ ಹೆಚ್ಚಿನ ಉಪಸಮಿತಿಗಳನ್ನು ರಚಿಸದೆ ಕೇವಲ 8 ಉಪಸಮತಿಗಳನ್ನು ರಚಿಸಲಾಗುತ್ತಿದ್ದು, ಅದರಲ್ಲಿ ಅಧಿಕಾರಿಗಳು ಇರುತ್ತಾರೆ ಎಂದು ವಿವರಿಸಿದರು. [ಪ್ರಗತಿಪರ ರೈತನಿಂದ ಮೈಸೂರು ದಸರಾ ಉದ್ಘಾಟನೆ]

ದಸರಾ ಕಾರ್ಯಕಾರಿ ಸಮಿತಿ ಸದಸ್ಯರು, ಜಿಲ್ಲಾಧಿಕಾರಿ ಸಿ. ಶಿಖಾ, ಮೈಸೂರು ನಗರ ಪಾಲಿಕೆ ಆಯುಕ್ತ ಡಾ. ಸಿ.,ಜಿ ಬೆಟ್ಟಸೂರ್ ಮಠ, ಸಹಕಾರಿ ಸಚಿವ ಎಚ್ ಎಸ್ ಮಹದೇವ ಪ್ರಸಾದ್, ಶಾಸಕ ತನ್ವೀರ್ ಸೇಠ್, ಮುಡಾ ಆಯುಕ್ತ ಡಾ. ಎಂ ಮಹೇಶ್ ಮುಂತಾದವರ ಜೊತೆ ದಸರಾ ಕಾರ್ಯಕ್ರಮ ಆಯೋಜನೆ ಬಗ್ಗೆ ಸಚಿವ ಶ್ರೀನಿವಾಸ್ ಪ್ರಸಾದ್ ಅವರು ಸಭೆ ನಡೆಸಿ ನಂತರ ದಿನಾಂಕ ಪ್ರಕಟಿಸಿದ್ದಾರೆ. (ಒನ್ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+