ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಗತಿಪರ ರೈತನಿಂದ ಮೈಸೂರು ದಸರಾ ಉದ್ಘಾಟನೆ

|
Google Oneindia Kannada News

ಮೈಸೂರು, ಸೆಪ್ಟೆಂಬರ್, 10 : ಈ ಬಾರಿಯ ದಸರಾ ಮಹೋತ್ಸವದ ಉದ್ಘಾಟನೆಯನ್ನು ಪ್ರಗತಿಪರ ರೈತನಿಂದ ಮಾಡಿಸಲಾಗುತ್ತದೆ ಎಂದು ಸಚಿವ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ. ವಿದ್ಯುತ್ ಕೊರತೆ ಇರುವುದರಿಂದ ದೀಪಾಲಂಕಾರವನ್ನು ರಾಜ ಮಾರ್ಗದ ಮುಖ್ಯ ಕಟ್ಟಡ ಹಾಗೂ ವೃತ್ತಗಳಿಗೆ ಸೀಮಿತಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಬುಧವಾರ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಗಜಪಡೆಯ ಮೊದಲನೇ ತಂಡದ 6 ಆನೆಗಳನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಶ್ರೀನಿವಾಸ್ ಪ್ರಸಾದ್ ಅವರು ಅಂಬವಿಲಾಸ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಸಾಂಪ್ರದಾಯಕವಾಗಿ ಸ್ವಾಗತಿಸಿದರು. [ಮೈಸೂರು ದಸರಾ ಆನೆಗಳಿಗೆ 35 ಲಕ್ಷದ ವಿಮೆ]

v srinivas prasad

ನಂತರ ಮಾಧ್ಯಮಗಳ ಜೊತೆ 2015ನೇ ಸಾಲಿನ ದಸರಾ ಮಹೋತ್ಸವದ ಕುರಿತು ಸಚಿವರು ಮಾತನಾಡಿದರು. 'ರೈತರ ಸರಣಿ ಆತ್ಮಹತೆಗಳು ಹಾಗೂ ಬರಗಾಲದ ಹಿನ್ನೆಲೆಯಲ್ಲಿ ಈ ಬಾರಿಯ ದಸರಾವನ್ನು ಸರಳವಾಗಿ ಆಚರಣೆ ಮಾಡಲಾಗುತ್ತದೆ. ಮೊದಲ ಗಜಪಡೆ ನಗರಕ್ಕೆ ಆಗಮಿಸಿದ್ದು, 2ನೇ ತಂಡ ಸೆಪ್ಟೆಂಬರ್ 3ನೇ ವಾರದಲ್ಲಿ ನಗರಕ್ಕೆ ಬರಲಿವೆ' ಎಂದರು. [ದಸರಾ ಲಾಂಚನ ಬಿಡುಗಡೆ]

ರೈತನಿಂದ ಉದ್ಘಾಟನೆ : 'ಈ ಬಾರಿಯ ದಸರಾ ಮಹೋತ್ಸವದ ಉದ್ಘಾಟನೆಯನ್ನು ಪ್ರಗತಿಪರ ರೈತನಿಂದ ಮಾಡಿಸಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಹೊರ ರಾಜ್ಯ ಹಾಗೂ ಜಿಲ್ಲೆಗಳ ಕಲಾವಿದರ ಬದಲು ಸ್ಥಳೀಯರಿಗೆ ಅವಕಾಶ ನೀಡಲಾಗುತ್ತದೆ' ಎಂದು ಹೇಳಿದರು. [ಸರಳ ದಸರಾ : ಈ ಬಾರಿ ಏನಿರುತ್ತೆ, ಏನಿರಲ್ಲ?]

'ಸ್ತಬ್ಧ ಚಿತ್ರಗಳ ಮೆರವಣಿಗೆಯನ್ನು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಅರಣ್ಯ ಹಾಗೂ ಇತರೆ ಮುಖ್ಯ ಇಲಾಖೆಗಳು ನಡೆಸಿಕೊಡಲಿವೆ. ದಸರಾದ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡುವುದಿಲ್ಲ. ಅವಶ್ಯವಿದ್ದಲ್ಲಿ ಮಾತ್ರ ಪ್ರಚಾರ ನಡೆಸಲಾಗುತ್ತದೆ' ಎಂದರು.

mysore dasara

ದೀಪಾಲಂಕಾರವಿಲ್ಲ : 'ವಿದ್ಯುತ್ ಕೊರತೆ ಹಿನ್ನಲೆಯಲ್ಲಿ ದೀಪಾಲಂಕಾರವನ್ನು ರಾಜ ಮಾರ್ಗದ ಮುಖ್ಯ ಕಟ್ಟಡ ಹಾಗೂ ವೃತ್ತಗಳಿಗೆ ಸೀಮಿತಗೊಳಿಸಲಾಗುತ್ತದೆ. ಅರಮನೆಯಲ್ಲಿನ ವಿದ್ಯುತ್ ದೀಪಲಂಕಾರದ ವ್ಯವಸ್ಥೆಯು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವರೆಗೆ ಇರಲಿದೆ. ದಸರಾ ಜಂಬು ಸವಾರಿ ಹಾಗೂ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತ್ತು ಎಂದಿನಂತೆ ನಡೆಯಲಿದೆ' ಎಂದು ತಿಳಿಸಿದರು.

ಆರು ಆನೆಗಳ ತಂಡ : 2012ರಿಂದ ಚಿನ್ನದ ಅಂಬಾರಿಯನ್ನು ಹೊರುತ್ತಿರುವ ಅರ್ಜುನ ಆನೆ, 13 ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಬಲರಾಮ, 16 ವರ್ಷದಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಅಭಿಮನ್ಯು, ವಿಕ್ರಮ, ಕಾವೇರಿ ಹಾಗೂ ಚೈತ್ರ ಆನೆಗಳು ಮೊದಲ ತಂಡದಲ್ಲಿ ಮೈಸೂರಿಗೆ ಬಂದಿವೆ.

English summary
Considering the drought situation in the state and farmer suicides this year's Mysuru Dasara will be simple and traditional. Progressive farmer will inaugurate dasara said, Mysuru district in-charge minister V Srinivas Prasad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X