ಜೂನ್‌ಗೂ ಮುನ್ನ ಈ 4 ರಾಶಿಯವರ ಕೈ ಹಿಡಿಯುವುದು ಅದೃಷ್ಟ: ಮೇ ಕೊನೆಯ ವಾರವೇ ಇವರಿಗೆ ನಿರ್ಣಾಯಕ
ಮೇ ತಿಂಗಳ ಕೊನೆ ಅವಧಿ ಅಂದರೆ ಕೊನೆಯ ವಾರ ಜನರ ನಿರೀಕ್ಷೆಗಿಂತ ಹೆಚ್ಚು ಬದಲಾವಣೆಗಳನ್ನು ತರಬಹುದು. ಯಾಕೆಂದರೆ ಈ ಅವಧಿಯಲ್ಲಿ ಕೆಲವು ಗ್ರಹಗಳು ವೃಷಭ ರಾಶಿಯಿಂದ ಮಿಥುನ ರಾಶಿಗೆ ಬದಲಾಗುತ್ತವೆ. ಜ್ಯೋತಿಷ್ಯದಲ್ಲಿ, ಈ ಪರಿವರ್ತನೆಗೆ ಬಹಳ ಮಹತ್ವವಿದೆ. ಇದು ಹೊಸ ಸಂಭಾಷಣೆಗಳು, ಅನಿರೀಕ್ಷಿತ ಸುದ್ದಿ, ಪ್ರಯಾಣದ ಅವಕಾಶ, ಆರ್ಥಿಕ ಸ್ಥಿರತೆ ಮತ್ತು ಪ್ರಗತಿಗೆ ಕಾರಣವಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮೇ ಅಂತ್ಯ ಬಹಳ ಪ್ರಾಮುಖ್ಯತೆ ಹೊಂದಿದೆ. ಜೂನ್ ಪ್ರಾರಂಭವಾಗುವ ಮೊದಲು, ಕೆಲವು ರಾಶಿಯವರ ಜೀವನದಲ್ಲಿ ಪ್ರಗತಿ ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಹಣಕಾಸಿಗೆ ಸಂಬಂಧಿಸಿದಂತೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಾಗುವುದು. ವೃತ್ತಿಯಲ್ಲಿ ಅಭಿವೃದ್ಧಿ ಕಾಣಿಸಿಕೊಳ್ಳುವುದು. ಪ್ರತಿ ಹಂತದಲ್ಲಿ ಅದೃಷ್ಟ ಕೈ ಹಿಡಿಯುವುದು.

ವೃಷಭ ರಾಶಿ:
ವೃಷಭ ರಾಶಿಯವರಿಗೆ, ಮೇ ಕೊನೆಯ ದಿನಗಳು ಹೆಚ್ಚು ಶುಭವಾಗಿರಲಿದೆ. ಈ ಸಮಯದಲ್ಲಿ ನಿಮ್ಮ ಆದ್ಯತೆಗಳನ್ನು ಪುನರ್ವಿಮರ್ಶಿಸಲು ಸಹಾಯವಾಗುವುದು. ನಿಮ್ಮ ಆಲೋಚನೆಗಳು ಪ್ರಾಯೋಗಿಕ ಲಾಭಗಳಾಗಿ ಬದಲಾಗುವುದು. ಹಣಕಾಸಿನ ಸ್ಥಿತಿ ಬದಲಾಗುವುದು. ಕೆಲಸದಲ್ಲಿ ಸ್ಥಿರತೆ ಇರುವುದು ಮತ್ತು ವೈಯಕ್ತಿಕ ವಿಶ್ವಾಸ ಹುಟ್ಟಿಕೊಳ್ಳುವುದು.
ಮೇ ತಿಂಗಳ ಆರಂಭದಲ್ಲಿ ಕಾಡುತ್ತಿದ್ದ ಅನಿಶ್ಚಿತತೆ ಬಗೆಹರಿಯುವುದು. ಆದಾಯ, ವೃತ್ತಿ, ವ್ಯವಹಾರ ಸೇರಿದಂತೆ ಒಂದು ಪ್ರಮುಖ ವೈಯಕ್ತಿಕ ನಿರ್ಧಾರಕ್ಕೆ ಸಂಬಂಧಿಸಿದಂತೆ ಉತ್ತರಕ್ಕಾಗಿ ಕಾಯುತ್ತಿದ್ದರೆ, ತಿಂಗಳ ಕೊನೆಯ ದಿನಗಳು ಇದರ ಸ್ಪಷ್ಟತೆಯನ್ನು ತರಬಹುದು. ಮಾಸಾಂತ್ಯದಲ್ಲಿ ಸಿಗುವ ಸಣ್ಣ ಅವಕಾಶವು ಜೂನ್ ವೇಳೆಗೆ ಹೆಚ್ಚು ದೊಡ್ಡದಾಗಬಹುದು.
ಏನು ಮಾಡಬೇಕು?:
*ಬಾಕಿ ಇರುವ ಕೆಲಸದತ್ತ ಗಮನ ಹರಿಸಿ.
*ದೀರ್ಘಕಾಲೀನ ಸ್ಥಿರತೆಯನ್ನು ಸುಧಾರಿಸುವ ಪ್ರಾಯೋಗಿಕ ಅವಕಾಶಗಳನ್ನು ಒಪ್ಪಿಕೊಳ್ಳಿ.
*ಹಣಕಾಸಿನ ಯೋಜನೆಗಳು ಮತ್ತು ಆದ್ಯತೆಗಳನ್ನು ಸಂಘಟಿಸಲು ಮೇ ಅಂತ್ಯವನ್ನು ಬಳಸಿಕೊಳ್ಳಿ.
ಏನು ಮಾಡಬಾರದು?:
*ಸಣ್ಣ ಸಣ್ಣ ಅವಕಾಶಗಳನ್ನು ಕೈ ಬಿಡಬೇಡಿ.
*ಪರಿಣಾಮಕ್ಕೆ ಹೆದರಿ ಪ್ರಯತ್ನ ಪಡುವುದನ್ನು ನಿಲ್ಲಿಸಬೇಡಿ.
* ಹಣಕಾಸು ಸ್ಥಿತಿ ಸುಧಾರಿಸುತ್ತಿದೆ ಎನ್ನುವ ಕಾರಣಕ್ಕೆ ಅತಿಯಾಗಿ ಖರ್ಚು ಮಾಡುವುದಕ್ಕೆ ಹೋಗಬೇಡಿ.

ಮಿಥುನ ರಾಶಿ:
ನಿಮ್ಮ ರಾಶಿಗೆ ಸೂರ್ಯ ಚಲಿಸುತ್ತಿದ್ದಂತೆ ಶಕ್ತಿಯುತ ಬದಲಾವಣೆಯಾಗುವುದು. ಜೂನ್ ಆರಂಭವಾಗುವ ಮೊದಲು, ಸ್ವಾಭಾವಿಕವಾಗಿಯೇ ಅದೃಷ್ಟ ನಿಮ್ಮ ಕಡೆಗೆ ತಿರುಗುವುದು. ಸಂವಹನ, ಪ್ರಯಾಣ, ಸಂದರ್ಶನಗಳು ಮತ್ತು ಅನಿರೀಕ್ಷಿತ ಸಂದೇಶಗಳು ಈ ಹೊತ್ತಿನಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಮೇ ಅಂತ್ಯ ಮಿಥುನ ರಾಶಿಯವರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಮೇ ಅಂತ್ಯದಿಂದ ಅದೃಷ್ಟ ಒಲಿದು ಬರುವುದು. ಏನಾದರೂ ಹೊಸ ಕೆಲಸವನ್ನು ಆರಂಭಿಸಬೇಕು ಎಂದು ಆಲೋಚಿಸುತ್ತಿದ್ದರೆ ಜೂನ್ ಮೊದಲ ವಾರದಲ್ಲಿ ಸಮಯ ಕೂಡಿ ಬರುವುದು.
ಏನು ಮಾಡಬೇಕು?:
*ನೀವು ಸಂಪರ್ಕಿಸಲು ಬಯಸುತ್ತಿರುವ ಜನರನ್ನು ಭೇಟಿಯಾಗಿ.
*ನಿಮ್ಮ ಆಲೋಚನೆಗಳ ಬಗ್ಗೆ ಸ್ಪಷ್ಟವಾಗಿ ಮಾತನಾಡಿ.
*ಹೊಸ ಕೊಡುಗೆಗಳು, ಪ್ರಯಾಣ, ಕಲಿಕೆಗೆ ಮುಕ್ತವಾಗಿರಿ
ಏನು ಮಾಡಬಾರದು?:
*ಒಂದೇ ಬಾರಿಗೆ ಹಲವಾರು ವಿಷಯಗಳನ್ನು ಒಪ್ಪಿಕೊಳ್ಳುವುದನ್ನು ತಪ್ಪಿಸಿ.
*ಉತ್ಸಾಹದಿಂದ ಅದೃಷ್ಟವನ್ನು ಬೆನ್ನಟ್ಟುವಾಗ ಪ್ರಮುಖ ವಿವರಗಳನ್ನು ನಿರ್ಲಕ್ಷಿಸಬೇಡಿ.
*ಭಾವನಾತ್ಮಕವಾಗಿ ಸೂಕ್ಷ್ಮ ಸಂದರ್ಭಗಳಲ್ಲಿ ವೇಗದಿಂದ ಮಾತನಾಡುವುದನ್ನು ತಪ್ಪಿಸಿ.

ಸಿಂಹ ರಾಶಿ:
ಜೂನ್‌ಗೂ ಮೊದಲು ಸಿಂಹ ರಾಶಿಯವರು ಪ್ರಗತಿಯತ್ತ ಮುನ್ನಡೆಯುವರು. ಇತ್ತೀಚೆಗೆ ಪ್ರಗತಿ ನಿಧಾನವಾಗಿದ್ದರೂ ಮೇ ಅಂತ್ಯದಲ್ಲಿ ಹೊಸ ಆತ್ಮವಿಶ್ವಾಸದೊಂದಿಗೆ ಮುಂದುವರಿಯುವಿರಿ. ನಿಮ್ಮ ಕೆಲಸಕ್ಕೆ ಮನ್ನಣೆ ಸಿಗುವುದು. ನೀವು ಮಾಡುವ ಕೆಲಸಕ್ಕೆ ಮುಖ್ಯ ವ್ಯಕ್ತಿಗಳಿಂದ ಬೆಂಬಲ ಸಿಗುವುದು. ಇದು ವೃತ್ತಿ ಬೆಳವಣಿಗೆಗೆ ಅವಕಾಶ ಕಲ್ಪಿಸುವುದು. ಉನ್ನತ ಸ್ಥಾನ ಅಲಂಕರಿಸುವಿರಿ. ಈ ರಾಶಿಯವರು ಆರ್ಥಿಕವಾಗಿ ಅಭಿವೃದ್ಧಿ ಹೊಂದುವರಿ. ಆತ್ಮವಿಶ್ವಾಸವು ವೇಗವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಉತ್ತಮವಾಗಿ ಮಾತುಕತೆ ನಡೆಸುವ ಮೂಲಕ ಮೊದಲು ಕಡೆಗಣಿಸಿರುವ ಅವಕಾಶಗಳನ್ನು ಗುರುತಿಸುವುದು ಸಾಧ್ಯವಾಗುತ್ತದೆ.
ಏನು ಮಾಡಬೇಕು?:
*ನಾಯಕತ್ವದ ಅಗತ್ಯವಿರುವಲ್ಲಿ ಕ್ರಮ ತೆಗೆದುಕೊಳ್ಳಿ.
*ನಿಮ್ಮ ಆಲೋಚನೆಗಳ ಬಗ್ಗೆ ವಿಶ್ವಾಸದಿಂದ ಮಾತನಾಡಿ.
* ವೃತ್ತಿಪರ ಪ್ರಗತಿಗಾಗಿ ಈ ಅವಧಿಯನ್ನು ಬಳಸಿಕೊಳ್ಳಿ.
ಏನು ಮಾಡಬಾರದು?:
*ಅಹಂಕಾರದಿಂದ ಉಪಯುಕ್ತ ಸಲಹೆಯನ್ನು ನಿರ್ಲಕ್ಷಿಸಬೇಡಿ.
*ಇತರರು ಮೊದಲ ಹೆಜ್ಜೆ ಇಡಲು ಕಾಯಬೇಡಿ.
*ಸಣ್ಣಪುಟ್ಟ ಟೀಕೆಗಳಿಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿ.

ಧನು ರಾಶಿ:
ಮೇ ತಿಂಗಳ ಕೊನೆಯ ದಿನಗಳಲ್ಲಿ ಹೊಸ ಅವಕಾಶಗಳು ಒಲಿದು ಬರುವುದು. ಹೊಸ ಭರವಸೆಯೊಂದಿಗೆ ಕೆಲಸ ಮಾಡುವುದು ಸಾಧ್ಯವಾಗುವುದು.ಕೆಲವೊಮ್ಮೆ ಸಮೃದ್ಧಿಗಾಗಿ ಹೆಚ್ಚು ಶ್ರಮವಹಿಸಬೇಕೆಂದಿಲ್ಲ, ಬದಲಾಗಿ ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸುವುದರಿಂದಲೂ ನೀವಂದುಕೊಂಡ ಕೆಲಸ ಆಗುವುದು.ಹಾಗಾಗಿ ಹೊಸ ಪರಿಚಯ, ಹೊಸ ಸಂಪರ್ಕಗಳು, ಅರ್ಥಪೂರ್ಣ ಮಾತುಕತೆ ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸಬಹುದು.
ಏನು ಮಾಡಬೇಕು?:
*ಸಹಯೋಗ ಮತ್ತು ಸಲಹೆಗೆ ಮುಕ್ತರಾಗಿರಿ.
*ಆಹ್ವಾನ, ಸಭೆ ಸಮಾರಂಭ ಮತ್ತು ಆಕಸ್ಮಿಕ ಸಂಭಾಷಣೆಗಳಲ್ಲಿ ಭಾಗಿಯಾಗಿ.
* ನಿಮ್ಮ ಸೌಕರ್ಯ ವಲಯವನ್ನು ಮಾತ್ರ ನಂಬುವ ಬದಲು, ನಿಮ್ಮ ಭವಿಷ್ಯವನ್ನು ವಿಸ್ತರಿಸುವ ಅವಕಾಶಗಳ ಮೇಲೆ ನಂಬಿಕೆ ಇಡಿ.
ಏನು ಮಾಡಬಾರದು?:
* ಹೊಸ ಜನರನ್ನು ಬೇಗನೆ ದೂರ ಮಾಡಬೇಡಿ.
* ಇನ್ನು ಮುಂದೆ ಹೊಂದಿಕೆಯಾಗದ ಯೋಜನೆಗಳಿಗೆ ಅಂಟಿಕೊಳ್ಳಬೇಡಿ. *ನೀವು ಉಳಿಸಿಕೊಳ್ಳಲು ಸಾಧ್ಯವಾಗದ ಭರವಸೆಗಳನ್ನು ನೀಡುವುದನ್ನು ತಪ್ಪಿಸಿ.
ಮೇ 2026 ರ ಅಂತ್ಯ ಯಾಕೆ ಅದೃಷ್ಟಶಾಲಿ ಎಂದು ಅನೇಕರು ಭಾವಿಸಬಹುದು. ಮೇ 2026 ಅಂತ್ಯಗೊಳ್ಳುತ್ತಿದ್ದಂತೆ, ಜ್ಯೋತಿಷ್ಯ ವಾತಾವರಣವು ಸಾಮಾಜಿಕ ಮತ್ತು ಮಾನಸಿಕವಾಗಿ ಸಕ್ರಿಯವಾಗುತ್ತದೆ. ಆ ಬದಲಾವಣೆಯು ತಿಂಗಳ ಮೊದಲಾರ್ಧದಲ್ಲಿ ನಿಧಾನಗತಿಯಲ್ಲಿದ್ದರೂ ನಂತರ ವೇಗವನ್ನು ಸೃಷ್ಟಿಸಬಹುದು. ವೃಷಭ, ಮಿಥುನ, ಸಿಂಹ ಮತ್ತು ಧನು ರಾಶಿಯವರಿಗೆ, ಈ ಅವಧಿಯು ವಿಶೇಷವಾಗಿ ಅನುಕೂಲಕರವಾಗಿರಲಿದೆ. ಅದೃಷ್ಟವು ಆರ್ಥಿಕ ಪ್ರಗತಿ ಸಾಧಿಸಲು ಸಹಾಯ ಮಾಡುವುದು.
ಜೂನ್ 2026 ಪ್ರಾರಂಭವಾಗುವ ಮೊದಲು, ನಾಲ್ಕು ರಾಶಿಯವರು ಹೆಚ್ಚು ಅದೃಷ್ಟಶಾಲಿಗಳಾಗುತ್ತಾರೆ. ವೃಷಭ ರಾಶಿಯವರು ಸ್ಥಿರವಾದ ಪ್ರತಿಫಲಗಳನ್ನು ಕಾಣಬಹುದು. ಮಿಥುನ ರಾಶಿಯವರು ಹೊಸ ಅವಕಾಶಗಳನ್ನು ಆಕರ್ಷಿಸಬಹುದು, ಸಿಂಹ ರಾಶಿಯವರ ಕೆಲಸಕ್ಕೆ ಮನ್ನಣೆ ಸಿಗಬಹುದು. ಧನು ರಾಶಿಯವರು ಪ್ರಬಲ ಸಂಪರ್ಕಗಳಿಂದ ಪ್ರಯೋಜನ ಪಡೆಯಬಹುದು. ಈ ಪಟ್ಟಿಯಲ್ಲಿ ನಿಮ್ಮ ರಾಶಿ ಕೂಡಾ ಇದ್ದರೆ, ಮೇ ತಿಂಗಳ ಕೊನೆಯ ದಿನಗಳನ್ನು ಸೂಕ್ಷ್ಮವಾಗಿ ಗಮನಿಸಿ. ಕೆಲವೊಮ್ಮೆ ಪ್ರಮುಖ ತಿರುವುಗಳು ಸದ್ದಿಲ್ಲದೆ ಬರುತ್ತವೆ. ಒಂದು ನಿರ್ಧಾರ, ಒಂದು ಸಂದೇಶ ಮುಂದಿನ ಜೀವನದ ದಿಕ್ಕನ್ನೇ ಬದಲಿಸಿ ಬಿಡಬಹುದು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications