ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಖ್ಯಾತ ಮೈಸೂರು ದಸರಾ ಲಾಂಛನ ಬಿಡುಗಡೆ

By Vanitha
|
Google Oneindia Kannada News

ಮೈಸೂರು, ಸೆಪ್ಟೆಂಬರ್, 09 : ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ಕೆಲವು ದಿನಗಳು ಬಾಕಿ ಇದೆ. ಈ ನಿಮಿತ್ತ ಮೈಸೂರು ಅರಮನೆಯಲ್ಲಿ ಪೂರ್ವ ತಯಾರಿಗಳು ನಡೆಯುತ್ತಿದ್ದು, ದಸರಾ ಪ್ರಿಯರ ಮನತಣಿಸಲು ಎಲ್ಲಾ ರೀತಿಯಲ್ಲೂ ಅಚ್ಚುಕಟ್ಟು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ, ಶ್ರೀನಿವಾಸ ಪ್ರಸಾದ್ ನೇತೃತ್ವ ಹಾಗೂ ಜಿಲ್ಲಾಡಳಿತ ಮತ್ತು ಮೈಸೂರು ದಸರಾ ಕಾರ್ಯಕಾರಿ ಸಮಿತಿ ಜಂಬೂ ಸವಾರಿಯ ಗಜಪಡೆಯನ್ನು ಬುಧವಾರ ಶಾಸ್ತ್ರೋಕ್ತವಾಗಿ ಬರಮಾಡಿಕೊಳ್ಳಲಾಯಿತು. ಜೊತೆಗೆ ಈ ಸಂದರ್ಭದಲ್ಲಿ ದಸರಾದ ಲಾಂಛನವನ್ನು ಬುಧವಾರ ಬಿಡುಗಡೆಗೊಳಿಸಲಾಯಿತು.[ಸರಳವಾಗಿ ದಸರಾ ಆಚರಣೆ : ಈ ಬಾರಿ ಏನಿರುತ್ತೆ, ಏನಿರಲ್ಲ?]

Mysuru Dasara commity release Dasara logo on Monday

ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮುಗಿಯುವ ವರೆಗೆ ದಸರಾ ಗಜಪಡೆ ಹಾಗೂ ಮಾವುತರು ಅರಮನೆಯಲ್ಲಿಯೇ ವಾಸ್ತವ್ಯ ಹೂಡಲಿದ್ದು, ಇವರ ತಂಗುವಿಕೆಗೆ ಹಾಗೂ ಆನೆಗಳ ಆಹಾರಕ್ಕೆ ಸಂಬಂಧಿಸಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.

ಅರಮನೆ ಆಡಳಿತ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಶ್ರೀನಿವಾಸ್ ಪ್ರಸಾದ್, ಡಿಸಿ ಶಿಖಾ ಸೇರಿದಮತೆ ಹಲವಾರು ಅಧಿಕಾರಿಗಳು ಹಾಗೂ ಅರಮನೆಗೆ ಸಂಬಂಧಿಸಿದ ಗಣ್ಯರು ಸಿಬ್ಬಂದಿಗಳು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

English summary
Mysuru Dasara commity and district incharge minister V Srinivas Prasad release Dasara logo on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X