• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನಂತ್ ಕುಮಾರ್ ನೆನೆದು ಭಾವುಕರಾದ ಮೈಸೂರಿನ ಬಿಜೆಪಿ ನಾಯಕರು

|

ಮೈಸೂರು, ನವೆಂಬರ್. 13: ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದಿಂದ ದೇಶಕ್ಕೆ ಹಾಗೂ ರಾಜ್ಯಕ್ಕೆ ನಷ್ಟ ಉಂಟಾಗಿದೆ. ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಅನಂತ್ ಕುಮಾರ್ ಪಾತ್ರ ಹಿರಿದು ಎಂದು ಬಿಜೆಪಿ ಮುಖಂಡ ಜಯಪ್ರಕಾಶ್ ತಿಳಿಸಿದ್ದಾರೆ.

ಸರಳ, ಸಜ್ಜನಿಕೆ ವ್ಯಕ್ತಿಯಾಗಿದ್ದ ಅನಂತ್ ಕುಮಾರ್ ಮಾದರಿ ರಾಜಕಾರಣಿಯಾಗಿದ್ದರು. ಅವರ ನಿಧನ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬ ವರ್ಗಕ್ಕೆ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದರು.

ಅನಂತ್ ಅಂತಿಮ ಯಾತ್ರೆ LIVE: ಬಿಜೆಪಿ ಕಚೇರಿ ತಲುಪಿದ ಪಾರ್ಥಿವ ಶರೀರ

ಸಂಸದ ಧ್ರುವನಾರಾಯಣ್ ಸಹ ಅನಂತ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರ ಅಕಾಲಿಕ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ರಾಜ್ಯದಲ್ಲಿ ಉತ್ತುಂಗದ ನಾಯಕರಲ್ಲಿ ಅವರು ಅಗ್ರಗಣ್ಯರು. ಇವರು ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ನೀಡಿರುವ ಕೊಡುಗೆ ಅಪಾರ.

ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಕೋರಿದ್ದಾರೆ.

1959-2018: ದಿವಂಗತ ಕೇಂದ್ರ ಸಚಿವ ಅನಂತಕುಮಾರ್ ಹೆಜ್ಜೆ ಗುರುತು

ಕೇಂದ್ರ ಸಚಿವ ಅನಂತ್ ಕುಮಾರ್ ಪಕ್ಷದ ಸಂಘಟನೆಯ ಚತುರರಾಗಿ ಇಡೀ ದೇಶದಲ್ಲಿ ಬಹಳಷ್ಟು ರಾಜ್ಯಗಳ ಚುನಾವಣೆಗಳ ನಿರ್ವಹಣೆ ಮಾಡಿದಂತಹ ವ್ಯಕ್ತಿ. ಇವತ್ತು ಭಾರತೀಯ ಜನತಾ ಪಾರ್ಟಿ ತನ್ನದೇ ಆದ ಸ್ಥಾನವನ್ನು ಪಡೆಯಲು ನಿಸ್ವಾರ್ಥವಾಗಿ ದುಡಿದ ಮೇರು ವ್ಯಕ್ತಿತ್ವ. ನನ್ನಂತಹ ಸಾವಿರಾರು ಕಾರ್ಯಕರ್ತರನ್ನು ನಿರ್ಮಾಣ ಮಾಡಿದಂತಹದ ವ್ಯಕ್ತಿ ನಮ್ಮೊಂದಿಗಿಲ್ಲ ಎಂದು ಶಾಸಕ ರಾಮ್ ದಾಸ್ ತಿಳಿಸಿದ್ದಾರೆ.

ಅನಂತ್ ಸೇರಿ ಮೂವರು ಸಚಿವರ ಅಕಾಲಿಕ ನಿಧನ ಕಂಡ ಮೋದಿ

ನಗರ ಬಿಜೆಪಿ ಅಧ್ಯಕ್ಷ ಡಾ. ಮಂಜುನಾಥ್ ಪತ್ರಿಕಾ ಪ್ರಕಟಣೆಯಲ್ಲಿ ಅನಂತ್ ಕುಮಾರ್ ನಿಧನದಿಂದ ಪಕ್ಷಕ್ಕೆ ಹಾಗೂ ರಾಷ್ಟ್ರಕ್ಕೆ ಹೆಚ್ಚು ನಷ್ಟವಾಗಿದೆ. ಕೇಂದ್ರ ರಸಗೊಬ್ಬರ ಸಚಿವರಾಗಿ ನೀಮ್ ಲೇಪಿತ ಯೂರಿಯಾ ಒದಗಿಸುವ ಮೂಲಕ ಕಾಳ ದಂಧೆಯನ್ನು ತಡೆಗಟ್ಟಿ ರೈತರಿಗೆ ಅನಿಯಮಿತ ರಸಗೊಬ್ಬರ ಪೂರೈಕೆಗೆ ಕ್ರಮಕೈಗೊಂಡಿದ್ದ ರೀತಿ ಪ್ರಶಂಸನಾರ್ಹ ಎಂದು ನೆನೆದಿದ್ದಾರೆ.

English summary
Mysore BJP leaders pays condolence to Union Minister Ananth Kumar's demise
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X