• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

3 ತಿಂಗಳಿನಿಂದ ಒಂದೇ ಮಾಸ್ಕ್‌: ಆಶಾ ಕಾರ್ಯಕರ್ತೆ ಬೇಸರ

|
Google Oneindia Kannada News

ಮೈಸೂರು, ಜೂನ್ 29: ಕೊರೊನಾ ವೈರಸ್‌ ವಿರುದ್ಧ ಹೋರಾಟ ನಡೆಸುತ್ತಿರುವ ತಮಗೆ ಜಿಲ್ಲಾಡಳಿತ ಸರಿಯಾದ ವ್ಯವಸ್ಥೆ ನೀಡುತ್ತಿಲ್ಲ ಎಂದು ಮೈಸೂರಿನ ಆಶಾ ಕಾರ್ಯಕರ್ತೆ ಬೇಸರ ವ್ಯಕ್ತಪಡಿಸಿದ್ದಾರೆ.

   Bengaluru Corona Stats : ಇನ್ನೂ ಬೆಂಗಳೂರಲ್ಲಿ ಬದುಕೋದು ತುಂಬಾ ಕಷ್ಟ | Oneindia Kannada

   ಜಿಲ್ಲಾಡಳಿತ ಈವರೆಗೆ ಒಂದೇ ಒಂದು ಮಾಸ್ಕ್‌ ನೀಡಿದೆ. ಇದರಿಂದ ಜನರು ತಮ್ಮ ಸುರಕ್ಷತೆ ಬಗ್ಗೆಯೇ ಅನುಮಾನಪಡುವಂತೆ ಆಗಿದೆ ಎಂದಿದ್ದಾರೆ. ಮುಖ ಸೀಲ್ ಮಾಡುವ ಮಾಸ್ಕ್ ಕೊಡುವ ಭರವಸೆ ನೀಡಿದ್ದು, ಅನೇಕರಿಗೆ ಅದು ಸಿಕ್ಕಿಲ್ಲ ಎಂದು ಆಶಾ ಕಾರ್ಯಕರ್ತೆ ಹೇಳಿದ್ದಾರೆ.

   ರಾಜ್ಯ ಸರ್ಕಾರಕ್ಕೆ ವಿವಿಧ ಬೇಡಿಕೆ ಇಟ್ಟ ಆಶಾ ಕಾರ್ಯಕರ್ತೆಯರುರಾಜ್ಯ ಸರ್ಕಾರಕ್ಕೆ ವಿವಿಧ ಬೇಡಿಕೆ ಇಟ್ಟ ಆಶಾ ಕಾರ್ಯಕರ್ತೆಯರು

   ಒಂದು ಮಾಸ್ಕ್ ಮತ್ತು 50 ಮಿ.ಲೀಟರ್‌ನ ಸ್ಯಾನಿಟೈಸರ್ ನೀಡಿದ್ದು, ಇದು ಯಾರಿಗೆ ಸಾಲುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ಸೋಂಕಿತ ನಡುವೆ ಓಡಾಡುವ ತಾವು ಒಂದೇ ಒಂದು ಮಾಸ್ಕ್‌ ಹಾಕಿಕೊಂಡಿರುತ್ತೇವೆ. ಕಂಟೈನ್ ಮೆಂಟ್ ಜೋನ್‌ನಲ್ಲಿ ಹಲವರು ಜನರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿದ್ದೇವೆ ಎಂದಿದ್ದಾರೆ.

   ಮೂರು ತಿಂಗಳಿನಿಂದ ಒಂದೇ ಮಾಸ್ಕ್‌ ಹಾಕಿಕೊಂಡು ಕೆಲಸ ಮಾಡುತ್ತಿದ್ದು, ಇದು ಸುರಕ್ಷಿತವಲ್ಲ ಎನ್ನುವುದು ಆಶಾ ಕಾರ್ಯಕರ್ತೆಯ ದೂರಾಗಿದೆ. ತಮ್ಮ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತ ಗಮನ ಹರಿಸುತ್ತಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.

   English summary
   Mysore asha worker upset with district administration for not providing proper facilities.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X