• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲೋಕಸಭಾ ಚುನಾವಣೆಗೆ ಶಾಯಿ ಪೂರೈಸಲು ಮುಂದಾದ ಮೈಸೂರಿನ ಮೈಲ್ಯಾಕ್ಸ್

|

ಮೈಸೂರು, ಮಾರ್ಚ್ 12: ಭಾರತ ಚುನಾವಣಾ ಆಯೋಗ ಲೋಕಸಭಾ ಚುನಾವಣೆ 2019ಕ್ಕೆ ಶಾಹಿ ಪೂರೈಕೆಗೆ ಮೈಸೂರು ಬಣ್ಣ ಮತ್ತು ಅರಗು (ಮೈಲ್ಯಾಕ್ಸ್ ) ಕಾರ್ಖಾನೆಗೆ ಬೇಡಿಕೆ ಬಂದಿದ್ದು, ಸಂಸ್ಥೆ ಅಳಿಸಲಾಗದ ಶಾಯಿ ಸರಬರಾಜಿಗೆ ಮುಂದಾಗಿದೆ.

ದೇಶದ 543 ಲೋಕಸಭಾ ಕ್ಷೇತ್ರದಲ್ಲಿ 7 ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ಅಳಿಸಲಾಗದ ಶಾಯಿ ಪೂರೈಕೆಗೆ ತಯಾರಿ ನಡೆಸುತ್ತಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಆರಂಭವಾದ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಭಾರತದಲ್ಲಿ ನಡೆದ ಮೂರನೇ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಅಳಿಸಲಾಗದ ಶಾಯಿ ಪೂರೈಸಿತ್ತು.

ಮತದಾನದಂದು ಎಡಗೈ ತೋರುಬೆರಳಿಗೆ ಏಕೆ ಹಾಕುತ್ತಾರೆ ಶಾಯಿ?

ಅಂದಿನಿಂದ ಅಳಿಸಲಾಗದ ಶಾಯಿ ತಯಾರಿಸುತ್ತಾ ಬಂದಿದ್ದು, ಪ್ರತಿ ಚುನಾವಣೆಗೂ ಈ ಕಾರ್ಖಾನೆಯಿಂದಲೇ ಶಾಯಿ ಪೂರೈಕೆ ಮಾಡಲಾಗುತ್ತಿದೆ. ಮೈಲ್ಯಾಕ್ ತಯಾರಿಸುವ ಶಾಯಿಯನ್ನು ವಿಶ್ವದ 25 ರಾಷ್ಟ್ರಗಳು ಬಳಸುತ್ತಿವೆ. ಕಳೆದ ವರ್ಷ ಮಲೇಷಿಯಾ ಹಾಗೂ ಇಂಡೊನೇಷಿಯಾಗೆ ಶಾಯಿ ಸರಬರಾಜು ಮಾಡಿದ್ದನ್ನು ನೆನಪಿಸಿಕೊಳ್ಳಬಹುದು.

ನಾಲ್ಕು ತಿಂಗಳ ಹಿಂದೆಯೇ ಅಂದರೆ 2018 ಡಿಸೆಂಬರ್ ಅಂತ್ಯದಲ್ಲಿ ಮೈಲ್ಯಾಕ್ ಗೆ 10 ಎಂಎಲ್ ಪ್ರಮಾಣದ 26 ಲಕ್ಷ ಅಳಿಸಲಾಗದ ಶಾಯಿ ಪೂರೈಸುವಂತೆ ಆರ್ಡರ್ ಬುಕ್ ಮಾಡಲಾಗಿದೆ. ಇದರಿಂದ ಸುಮಾರು 33 ಕೋಟಿ ರೂ. ಮೈಲ್ಯಾಕ್ ಗೆ ಆದಾಯ ಬರಲಿದೆ.

ಲೋಕಸಭೆ ಚುನಾವಣೆ 2019ರ ಮಾಹಿತಿ ಅಂಕಿ- ಅಂಶಗಳಲ್ಲಿ

ಆಯೋಗದ ಬೇಡಿಕೆಗೆ ಅನುಗುಣವಾಗಿ ಸಕಾಲಕ್ಕೆ ಶಾಯಿ ಸರಬರಾಜು ಮಾಡುವ ಉದ್ದೇಶದಿಂದ ಮೈಲ್ಯಾಕ್ ಸಂಸ್ಥೆ ಜ.7ರಿಂದಲೇ ಶಾಯಿ ತಯಾರಿಸುವ ಕಾರ್ಯ ಆರಂಭಿಸಿದೆ. ಚುನಾವಣಾ ದಿನಾಂಕ ಪ್ರಕಟವಾಗುವ ಮುನ್ನವೇ 20 ಲಕ್ಷ ಬಾಟಲಿ ಶಾಯಿಯನ್ನು ಹಂತ ಹಂತವಾಗಿ ಚುನಾವಣಾ ಆಯೋಗಕ್ಕೆ ನೀಡಲಾಗಿದೆ.

2019ರ ಲೋಕಸಭಾ ಚುನಾವಣೆಯ ನೀವು ತಿಳಿಯಲೇ ಬೇಕಾದ 7 ವಿಶೇಷತೆಗಳು!

ಸಂಸ್ಥೆಯ 50 ನೌಕರರೊಂದಿಗೆ ಗುತ್ತಿಗೆ ಆಧಾರದಲ್ಲಿ ಇನ್ನೂ 50 ನೌಕರರು ಸೇರಿ ಶಾಯಿ ತಯಾರಿಸುವ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಮಾ.19ರ ವೇಳೆಗೆ ಉಳಿಕೆ 6 ಲಕ್ಷ ಬಾಟಲಿ ಶಾಯಿಯನ್ನು ರವಾನಿಸಲಾಗುತ್ತದೆ.

English summary
Mysuru Paints and Varnish Limited (MPVL), also known as MyLAC, a key player in the Indian Democratic process, has already supplied 20 lakh bottles ink to the Election Commission for the forthcoming Lok Sabha elections. Six lakh more vials will be supplied within the next one week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X