ಸಂಗೀತ ವಿವಿ ನೌಕರರ ಪ್ರತಿಭಟನೆ 50ನೇ ದಿನಕ್ಕೆ; ಸರ್ಕಾರದ ಮೌನ

ಮೈಸೂರು, ಏಪ್ರಿಲ್ 11; ಏಕಾಏಕಿ ಕೆಲಸದಿಂದ ವಜಾಗೊಂಡ ಸಂಗೀತ ವಿಶ್ವವಿದ್ಯಾಲಯದ ಬೋಧಕೇತರ ನೌಕರರು 50 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಮಾತ್ರ ಮೌನಕ್ಕೆ ಶರಣಾಗಿದೆ.

ಕಳೆದ 11 ವರ್ಷದಿಂದ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯಲ್ಲಿ ಕೆಲಸ ಮಾಡುತ್ತಿದ್ದ 21 ಮಂದಿ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಯ ಬದುಕು ಸದ್ಯ ಬೀದಿಗೆ ಬಿದ್ದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ರಾಜ್ಯದ ಚುಕ್ಕಾಣಿ ಹಿಡಿದಿರುವ ನಿಮ್ಮದು ಮಗುವಿನ ಮನಸ್ಸು. ಮಾತೃ ಹೃದಯ. ದಯವಿಟ್ಟು, 50 ದಿನಗಳಿಂದ ಲಕ್ಷ್ಮೀಪುರಂನಲ್ಲಿರುವ ವಿವಿ ಮುಂಭಾಗ ಪ್ರತಿಭಟನೆ ನಡೆಸುತ್ತಿರುವ ಸಂಗೀತ ವಿವಿಯ 21 ಬೋಧಕೇತರ ಸಿಬ್ಬಂದಿಯ ನೋವನ್ನು ಯಾರೂ ಆಲಿಸಿಲ್ಲ.

ಕುಲಪತಿಗಳಾಗಲಿ, ಕುಲಸಚಿವರಾಗಲಿ ಕ್ಯಾರೆ ಎಂದಿಲ್ಲ. ಮೈಸೂರಿನ ವಿವಿಧ ಸಂಘಟನೆಗಳು, ಅಧ್ಯಾಪಕರು, ಮಾಜಿ ಮೇಯರ್, ಚಿಂತಕರು, ಸಾಹಿತಿಗಳು ಪ್ರತಿಭಟನೆಗೆ ಬೆಂಬಲ ಕೊಟ್ಟಿದ್ದಾರೆ. ಸಂಸದರಾದ ಪ್ರತಾಪ ಸಿಂಹ, ಶ್ರೀನಿವಾಸ ಪ್ರಸಾದ್, ಶಾಸಕ ಎಲ್. ನಾಗೇಂದ್ರ ಅವರು ನೊಂದ ನೌಕರರಿಗೆ ಬಾಕಿ ಇರುವ ವೇತನ ನೀಡಲು ಹಾಗೂ ಮರು ನೇಮಕ ಮಾಡಿಕೊಳ್ಳಲು ಶಿಫಾರಸು ಮಾಡಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಆದರೂ ಸರ್ಕಾರ ಮಾತ್ರ ಕ್ಯಾರೆ ಎಂದಿಲ್ಲ.

ವಯೋಮಿತಿ ಮೀರಿ ಹೋಗಿದೆ

ವಯೋಮಿತಿ ಮೀರಿ ಹೋಗಿದೆ

ಇವರಲ್ಲಿ ಬಹುತೇಕರು ಬೇರೆ ನೌಕರಿಗೆ ಹೋಗುವ ಗರಿಷ್ಠ ವಯೋಮಿತಿ ಮೀರಿದ್ದಾರೆ. ಬೇರೆ ಉದ್ಯೋಗವೂ ಇಲ್ಲದೆ, ಇರುವುದನ್ನೂ ಉಳಿಸಿಕೊಳ್ಳಲಾಗದೆ ಸಿಬ್ಬಂದಿ ಅತಂತ್ರರಾಗಿದ್ದಾರೆ. ವಿವಿಯ ಕ್ರೋಡೀಕೃತ ವೇತನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ 10 ತಿಂಗಳಿನಿಂದ ವೇತನ ನೀಡಿಲ್ಲ. ಜೊತೆಗೆ ಕೆಲಸದಿಂದಲೂ ಹೊರಗಿಡಲಾಗಿದೆ.

ಈ ಉದ್ಯೋಗವನ್ನೇ ನಂಬಿ ಜೀವನ ನಡೆಸುತ್ತಿದ್ದವರು ಕಂಗಾಲಾಗಿದ್ದಾರೆ. ಕುಲಪತಿ ಹಾಗೂ ವಿವಿಯ ಇನ್ನಿತರ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಇವರ ಭವಿಷ್ಯ ಡೋಲಾಯಮಾನವಾಗಿದೆ.

ಪ್ರತಿ ವರ್ಷ ನವೀಕರಣವಾಗುತ್ತಿತ್ತು

ಪ್ರತಿ ವರ್ಷ ನವೀಕರಣವಾಗುತ್ತಿತ್ತು

2017ರ ನವೆಂಬರ್‌ನಿಂದ ಅನ್ವಯವಾಗುವಂತೆ ಇವರು ಕ್ರೋಡೀಕೃತ ವೇತನ ಪಡೆಯುತ್ತಿದ್ದರು. ಪ್ರತಿ ಆರು ತಿಂಗಳಿಗೊಮ್ಮೆ ನೇಮಕಾತಿ ನವೀಕರಣವಾಗುತ್ತಿತ್ತು. ಆದರೆ ಇದೀಗ ವಿವಿಯಲ್ಲಿ ಲಭ್ಯವಿರುವ ಅನುದಾನದಲ್ಲಿ ವೇತನ ನೀಡಲು ನಿರಾಕರಿಸಲಾಗುತ್ತಿದೆ ಎಂದು ಸಿಬ್ಬಂದಿ ದೂರಿದ್ದಾರೆ.

11 ವರ್ಷದಿಂದ ಸಂಗೀತ ವಿವಿಯಲ್ಲಿ ಕೆಲಸ ಮಾಡುತ್ತಿದ್ದ 21 ಮಂದಿಯನ್ನು ಕೆಲಸದಿಂದ ಏಕಾಏಕಿ ತೆಗೆದು ಹಾಕಲಾಗಿದೆ. ವಿವಿಯ ಕ್ರೂಡೀಕೃತ ವೇತನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ 10 ತಿಂಗಳಿನಿಂದ ವೇತನ ನೀಡಿಲ್ಲ. 2017ರ ನವೆಂಬರ್‌ನಿಂದ ಅನ್ವಯವಾಗುವಂತೆ ಇವರು ಕ್ರೂಡೀಕೃತ ವೇತನ ಪಡೆಯುತ್ತಿದ್ದರು. ಪ್ರತಿ ಆರು ತಿಂಗಳಿಗೊಮ್ಮೆ ನೇಮಕಾತಿ ನವೀಕರಣವಾಗುತ್ತಿತ್ತು. ಆದರೆ ಇದೀಗ ವಿವಿಯಲ್ಲಿ ಲಭ್ಯವಿರುವ ಅನುದಾನದಲ್ಲಿ ವೇತನ ನೀಡಲು ನಿರಾಕರಿಸಿ ನೌಕರರನ್ನು ವಜಾಗೊಳಿಸಲಾಗಿದೆ.

ಕುಲಪತಿಗಳು ಹೇಳುವುದೇನು?

ಕುಲಪತಿಗಳು ಹೇಳುವುದೇನು?

ಸರ್ಕಾರದ ಆದೇಶ ಪಾಲಿಸಿದ್ದೇವೆ ಎಂದ ಕುಲಪತಿ, "ಸದ್ಯ ಹೆಚ್ಚುವರಿ ಅನುದಾನ ನೀಡಲು ಸಾಧ್ಯವಿಲ್ಲವೆಂದು ಉನ್ನತ ಶಿಕ್ಷಣ ಇಲಾಖೆ ಪತ್ರ ಬರೆದಿದೆ. "ಸರ್ಕಾರದ ಆದೇಶದ ಪ್ರಕಾರ ಅನುಮತಿ ಪಡೆಯದೆ ಹೊರಗುತ್ತಿಗೆ ಆಧಾರದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದರೆ ಅದಕ್ಕೆ ಮುಖ್ಯಸ್ಥರೇ ಹೊಣೆಗಾರರಾಗಿರುತ್ತಾರೆ" ಎಂದು ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ತಿಳಿಸಿದ್ದಾರೆ.

ಮುಖ್ಯಸ್ಥರೇ ಹೊಣೆಗಾರರು

ಮುಖ್ಯಸ್ಥರೇ ಹೊಣೆಗಾರರು

ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಮಾತನಾಡಿ, "ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ನೇಮಕಾತಿ ಆಗಿದ್ದರೆ ಕೂಡಲೇ ಬಿಡುಗಡೆ ಮಾಡುವಂತೆ ಸರಕಾರ ಸೂಚಿಸಿದೆ. ಅಲ್ಲದೇ ಈ ನೌಕರರಿಗೆ ವೇತನಾನುದಾನ ನೀಡುವುದಿಲ್ಲ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಿದೆ. 2021ರ ಜೂನ್ 6ಕ್ಕೆ ತಾತ್ಕಾಲಿಕ ನೇಮಕ ಆದೇಶ ಮುಕ್ತಾಯವಾಗಿದೆ. ಸುತ್ತೋಲೆ ಅನ್ವಯ ಇವರನ್ನು ಮರು ನೇಮಕ ಮಾಡಲು ಆಗುವುದಿಲ್ಲ" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+