ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂಡಾದಿಂದ 18 ತಿಂಗಳಿನಲ್ಲಿ ಬಡಾವಣೆ ಯೋಜನೆ ಪೂರ್ಣಗೊಳಿಸುವ ಭರವಸೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 12: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಮತ್ತು ಭೂ ಮಾಲೀಕರ ಜಂಟಿ ಸಹಭಾಗಿತ್ವದಲ್ಲಿ ಕೈಗೊಳ್ಳುವ ಬಡಾವಣೆ ಅಭಿವೃದ್ಧಿ ಯೋಜನೆಯನ್ನು 18 ತಿಂಗಳುಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ತಿಳಿಸಿದರು.

ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಜಂಟಿ ಸಹಭಾಗಿತ್ವದಡಿ ಅಭಿವೃದ್ಧಿ ಪಡಿಸಲು ಉದ್ದೇಶಿಸಿರುವ ಯೋಜನೆಗಳನ್ನು ಭೂ ಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಂಡ 18ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ಪರಸ್ಪರ ಒಪ್ಪಿಗೆ ಪತ್ರ ನೀಡಿ ಒಪ್ಪಂದದ ಕರಾರಿಗೆ ಒಳಪಡುವ ಭೂ ಮಾಲೀಕರಿಗೆ ಮುಂಗಡವಾಗಿ 10 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದರು.

ಮೈಸೂರು: ಮೂಡಾ ಸೈಟ್ ಮಾರಾಟಕ್ಕಿಟ್ಟವನ ಮೇಲೆ ಕ್ರಿಮಿನಲ್‌ ಕೇಸ್ಮೈಸೂರು: ಮೂಡಾ ಸೈಟ್ ಮಾರಾಟಕ್ಕಿಟ್ಟವನ ಮೇಲೆ ಕ್ರಿಮಿನಲ್‌ ಕೇಸ್

ಜಂಟಿ ಸಹಭಾಗಿತ್ವದಡಿ ಅಭಿವೃದ್ಧಿಪಡಿಸಲು ಅಧಿಸೂಚಿಸಿದ ಜಮೀನುಗಳಿಗೆ ಪರಿಹಾರವಾಗಿ ಯೋಜಿತ ಬಡಾವಣೆ ರಚಿಸಿದ ಬಾಬ್ತು ಲಭ್ಯವಾಗುವ ಒಟ್ಟು ನಿವೇಶನಗಳಲ್ಲಿ ಶೇ.50-50ರ ಅನುಪಾತದಲ್ಲಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ (ಸ್ವ ಇಚ್ಛೆಯಿಂದ ಭೂಮಿ ನೀಡುವವರಿಗೆ ಪರಿಹಾರವಾಗಿ ನಿವೇಶನ ನೀಡುವುದು) ನಿಯಮ-2009 ಹಾಗೂ 2015ರ ತಿದ್ದುಪಡಿ ನಿಯಮಗಳನ್ವಯ ನಿವೇಶನದ ರೂಪದಲ್ಲಿ ಸಂಬಂಧಪಟ್ಟ ಭೂ ಮಾಲೀಕರುಗಳಿಗೆ ನಿವೇಶನ ನೀಡಲಾಗುವುದು ಎಂದು ತಿಳಿಸಿದರು.

Mysuru: MUDA Layout Development Project To Be Completed In 18 Months

ಜಂಟಿ ಸಹಭಾಗಿತ್ವದಡಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಯೋಜನೆಯ ಪ್ರಕಾರ ಲಭ್ಯವಾಗುವ ವಸತಿ ವಲಯದ ಶೇ.50-50ರ ಅನುಪಾತದಡಿ ಪ್ರತಿ ಎಕರೆಗೆ 30x40ಚದರ ಅಡಿ ಅಳತೆಯ ಅಂದಾಜು 9 ಸಂಖ್ಯೆಯ ನಿವೇಶನಗಳನ್ನು ನೀಡಲಾಗುವುದು. ಪ್ರತಿ ಅಡಿಗೆ ಮೂಲ ದರ ನಿಗದಿ ಮಾಡಿದ ನಂತರ ನೀಡಲಾಗುವ ಅಭಿವೃದ್ಧಿಪಡಿಸಿದ ಒಟ್ಟು ವಿಸ್ತೀರ್ಣದಲ್ಲಿ 10 ಲಕ್ಷರೂ. ಮೌಲ್ಯದ ನಿವೇಶನವನ್ನು ಪ್ರಾಧಿಕಾರಕ್ಕೆ ಬಿಟ್ಟುಕೊಡಬಹುದು ಅಥವಾ ನಿವೇಶನಕ್ಕೆ ಪ್ರಾಧಿಕಾರವು ನಿಗದಿಪಡಿಸಿದ ಮೌಲ್ಯದ ಎದುರಾಗಿ ಈ 10 ಲಕ್ಷರೂ. ಹಣವನ್ನು ಪ್ರಾಧಿಕಾರಕ್ಕೆ ಪಾವತಿಸಿ ಭೂ ಮಾಲೀಕರಿಗೆ ಲಭ್ಯವಾಗುವ ನಿವೇಶನಗಳನ್ನು ಪಡೆದುಕೊಳ್ಳಬಹುದು ಎಂದರು.

Mysuru: MUDA Layout Development Project To Be Completed In 18 Months

ಒಂದಕ್ಕಿಂತ ಹೆಚ್ಚು ಮಂದಿ ವ್ಯಕ್ತಿಗಳು ಭೂ ಮಾಲೀಕತ್ವವನ್ನು ಹೊಂದಿದ್ದಲ್ಲಿ ಹಂಚಿಕೆ ಮಾಡುವಂತಹ ನಿವೇಶನಗಳ ಮೇಲೆ ಜಂಟಿಯಾಗಿ ಅನುಪಾತಿಕ ಆಧಾರದ ಮೇಲೆ ಹಕ್ಕು ನೀಡಲಾಗುವುದು ಎಂದು ತಿಳಿಸಿದರು.

English summary
The layout development project will be completed in 18 months in joint partnership of Mysuru Urban Development Authority (MUDA) and the land owners, said Urban Development Authority chairman HV Rajeev
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X